ಸುಬ್ರಹ್ಮಣ್ಯ : ಕುಲ್ಕುಂದ ಬಡ ಕೂಲಿ ಕಾರ್ಮಿಕ ದಂಪತಿಗೆ ಮನೆ ಹಸ್ತಾಂತರ

ಸುಬ್ರಹ್ಮಣ್ಯ ನಂಬರ್ 08 : ತೀರಾ ಬಡತನದಲ್ಲಿರುವ ಕಳೆದ 18 ವರ್ಷಗಳಿಂದ ಪಂಚಾಯಿತಿಗೆ ಅರ್ಜಿ ನೀಡಿ ಹಾಗೂ ಸಂಘ-ಸಂಸ್ಥೆಗಳಿಗೂ ಅರ್ಜಿ ನೀಡಿ ಎಲ್ಲಿಯೂ ಸಹಕಾರ ಸಿಗದೆ ರವಿ ಕಕ್ಕೆಪದವು ಸಮಾಜ ಸೇವಾ ಸೇವ ಟ್ರಸ್ಟ್ ಮೊರೆ ಹೋದಾಗ ಯಾವುದೇ ಪ್ರಚಾರಕ್ಕೂ ಆಶಿಸದೆ ಇರುವ ಡಾ. ರವಿ ಕಕ್ಕೆಪದವು ಅವರು ಕೂಡಲೇ ಸ್ಪಂದಿಸಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಡ ಕೂಲಿ ಕಾರ್ಮಿಕ ಕುಲ್ಕುಂದದ ಬಾಲಕೃಷ್ಣ- ಸುಮಿತ್ರ ದಂಪತಿಗೆ ವಾಸದ ಮನೆಯನ್ನು ಕಟ್ಟಿಸಿ ಮನೆ ಕೀ ನೀಡುವುದರೊಂದಿಗೆ ಶುಕ್ರವಾರ ಹಸ್ತಾಂತರಿಸಲಾಯಿತು.

. . . . . . . . .

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ (ರಿ.) ಇವರಿಗೆ ಸಹಕಾರ ನೀಡಿದ ನ್ಯಾಷನಲ್ ಸೆಲೆಬ್ರಿಟಿ ಸ್ಪೋರ್ಟ್ಸ್ ಕೌನ್ಸಿಲ್ ನ ಅಧ್ಯಕ್ಷ ಶ್ರೀನಿಧಿ ಪ್ರಭು ಅವರ ಸಹಕಾರದಲ್ಲಿ ಗೌರವ ಸಲಹೆಗಾರ ಹಾಗೂ ಉದ್ಯಮಿ ಸುದೇಶ ಶಿವ ಪಾರ್ವತಿ, ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಮೋಹನ್ ದಾಸ್, ಜೊತೆ ಕಾರ್ಯದರ್ಶಿ ಭಗವಾನ್ ದಾಸ್, ಸುಬ್ರಹ್ಮಣ್ಯ ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ಉಮೇಶ ಕೆ.ಎನ್, ರೋಟರಿ ಜೋನಲ್ ಲೆಫ್ಟಿನೆಂಟ್ ಚಂದ್ರಶೇಖರ ನಾಯರ್, ಪೂರ್ವ ಅಧ್ಯಕ್ಷ ಗೋಪಾಲ ಎಣ್ಣೆಮಜಲು, ಸುಬ್ರಹ್ಮಣ್ಯ ಕುಕ್ಕೆಶ್ರೀ ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಕುಲ್ಕುಂದ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ, ಕುಲ್ಕುಂದ ನಿವಾಸಿಗಳಾದ ಪದ್ಮಯ್ಯ ಹಾಗೂ ಗಿರೀಶ್ ಆಚಾರ್ಯ, ನವನೀತ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading