ಗುತ್ತಿಗಾರಿನಲ್ಲಿ ಆಸರೆ ಹಬ್ಬ 2026: ಹಳೆಯ ವಸ್ತುಗಳ ವಿನಿಮಯಕ್ಕೆ ಶೇ.60ರಷ್ಟು ರಿಯಾಯಿತಿ ; ನ.7 ಮತ್ತು 8ರಂದು ಎರಡು ದಿನಗಳ ಮೆಗಾ ಎಕ್ಸ್‌ಚೇಂಜ್ ಆಫರ್

ಗುತ್ತಿಗಾರು: ದೀಪಾವಳಿ ಹಬ್ಬದ ಪ್ರಯುಕ್ತ ಗುತ್ತಿಗಾರಿನ ದೇವಮಾತ ಕಾಂಪ್ಲೆಕ್ಸ್‌ನಲ್ಲಿರುವ ಆಸರೆ ಎಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲಯನ್ಸಸ್ ವತಿಯಿಂದ ಆಯೋಜಿಸಿರುವ ‘ಆಸರೆ ಹಬ್ಬ 2026’ ಗ್ರಾಹಕರಿಗೆ ವಿಶೇಷ ಖರೀದಿ ಸಂಭ್ರಮವನ್ನು ಒದಗಿಸುತ್ತಿದೆ.

. . . . . . . . .

ಆರಿಕೋಡಿ ಧರ್ಮದರ್ಶಿಗಳ ದಿವ್ಯಹಸ್ತದಿಂದ ಉದ್ಘಾಟನೆಗೊಂಡ ಆಸರೆ ಹಬ್ಬವು ನವೆಂಬರ್ 10ರವರೆಗೆ ನಡೆಯಲಿದೆ. ಇದರ ವಿಶೇಷ ಆಕರ್ಷಣೆಯಾಗಿ ನವೆಂಬರ್ 7 ಮತ್ತು 8ರಂದು ಎರಡು ದಿನಗಳ ಮೆಗಾ ಎಕ್ಸ್‌ಚೇಂಜ್ ಆಫರ್ ಹಾಗೂ ವಿಶೇಷ ರಿಯಾಯಿತಿ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ.

. . . . . . .

ಗ್ರಾಹಕರು ತಮ್ಮ ಮನೆಯಲ್ಲಿರುವ ಯಾವುದೇ ಹಳೆಯ ವಸ್ತುಗಳನ್ನು ತಂದು ಹೊಸ ವಸ್ತುಗಳೊಂದಿಗೆ ವಿನಿಮಯ ಮಾಡಿಕೊಂಡು ಶೇ.60ರಷ್ಟು ರಿಯಾಯಿತಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಕೇವಲ ಎರಡು ದಿನಗಳ ಕಾಲ ಈ ವಿಶೇಷ ಆಫರ್ ಲಭ್ಯವಿರಲಿದೆ.

ಎಲ್ಲಾ ಪ್ರಮುಖ ಬ್ರಾಂಡ್‌ಗಳ ಗ್ಯಾರಂಟಿ ಹೊಂದಿರುವ ಎಲೆಕ್ಟ್ರಾನಿಕ್ ಹಾಗೂ ಗೃಹೋಪಯೋಗಿ ವಸ್ತುಗಳು ಒಂದೇ ಸೂರಿನಡಿ ಲಭ್ಯವಿದ್ದು, ಸುಲಭ ಕಂತಿನ ವ್ಯವಸ್ಥೆ, ಉಚಿತ ಸಾಗಾಟ ಹಾಗೂ ಎಕ್ಸ್‌ಚೇಂಜ್ ಆಫರ್‌ಗಳ ಸೌಲಭ್ಯವಿದೆ. ಈಸಿ ಇಎಂಐ ವ್ಯವಸ್ಥೆಯಲ್ಲಿ ಶೂನ್ಯ ಡೌನ್ ಪೇಮೆಂಟ್ ಮತ್ತು ಶೂನ್ಯ ಪ್ರೊಸೆಸಿಂಗ್ ಶುಲ್ಕದ ವಿಶೇಷ ಸೌಲಭ್ಯವನ್ನೂ ನೀಡಲಾಗಿದೆ.

 ಆಸರೆ ಎಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲಯನ್ಸಸ್‌ನಲ್ಲಿ ಗ್ರಾಹಕರು ಈ ವಿಶೇಷ ಅವಕಾಶದ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading