ಸುಳ್ಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ : 218 ಪ್ರಕರಣಗಳ ಇತ್ಯರ್ಥ

ಸುಳ್ಯ : ಸುಳ್ಯ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 307 ಪ್ರಕರಣಗಳ ಪೈಕಿ 218 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಒಟ್ಟು ರೂ.2,48,61,175 ಮೊತ್ತದ ಪ್ರಕರಣಗಳು ಇತ್ಯರ್ಥವಾಗಿವೆ.ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 118 ಪ್ರಕರಣಗಳ ಪೈಕಿ 85 ಪ್ರಕರಣಗಳು ರೂ.57,99,275 ಮೊತ್ತಕ್ಕೆ ಇತ್ಯರ್ಥಗೊಂಡಿವೆ. ಇದರಲ್ಲಿ 77 ಕ್ರಿಮಿನಲ್ ಪ್ರಕರಣಗಳ ಪೈಕಿ 76 ಪ್ರಕರಣಗಳು ರೂ.52,400ಕ್ಕೆ ಹಾಗೂ 41 ಸಿವಿಲ್ ಪ್ರಕರಣಗಳ ಪೈಕಿ 9 ಪ್ರಕರಣಗಳು ರೂ.57,46,875ಕ್ಕೆ ಇತ್ಯರ್ಥಗೊಂಡಿವೆ.ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 189 ಪ್ರಕರಣಗಳ ಪೈಕಿ 133 ಪ್ರಕರಣಗಳು ರೂ.1,90,61,900 ಮೊತ್ತಕ್ಕೆ ಇತ್ಯರ್ಥಗೊಂಡಿವೆ. ಇದರಲ್ಲಿ 159 ಕ್ರಿಮಿನಲ್ ಪ್ರಕರಣಗಳ ಪೈಕಿ 131 ಪ್ರಕರಣಗಳು ರೂ.1,80,61,900ಕ್ಕೆ ಹಾಗೂ 30 ಸಿವಿಲ್ ಪ್ರಕರಣಗಳ ಪೈಕಿ 2 ಪ್ರಕರಣಗಳು ರೂ.10,00,000ಕ್ಕೆ ಇತ್ಯರ್ಥಗೊಂಡಿವೆ.

. . . . . . . . .

ಪೂರ್ವ ವ್ಯಾಜ್ಯ ಪ್ರಕರಣಗಳಲ್ಲಿಯೂ ಇತ್ಯರ್ಥ : ಪೂರ್ವ ವ್ಯಾಜ್ಯ ಪ್ರಕರಣಗಳಡಿ ಬ್ಯಾಂಕ್ ರಿಕವರಿ ಸಂಬಂಧಿಸಿದ 15 ಪ್ರಕರಣಗಳು ರೂ.41,49,349ಕ್ಕೆ ಇತ್ಯರ್ಥಗೊಂಡಿವೆ. ಆಸ್ತಿ ತೆರಿಗೆ ಸಂಬಂಧಿಸಿ 1,586 ಮಂದಿಯಿಂದ ರೂ.23,26,000 ಹಾಗೂ ನೀರಿನ ಬಿಲ್‌ಗೆ ಸಂಬಂಧಿಸಿ 567 ಮಂದಿಯಿಂದ ರೂ.17,26,000 ಸಂಗ್ರಹಿಸಲಾಗಿದೆ. ಸುಳ್ಯ ಹಾಗೂ ಬೆಳ್ಳಾರೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಟ್ರಾಫಿಕ್ ಚಲನ್‌ಗೆ ಸಂಬಂಧಿಸಿ 656 ಮಂದಿಯಿಂದ ರೂ.3,12,800 ಸಂಗ್ರಹಿಸಲಾಗಿದೆ.ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ತಟ್ಟಂಡ ದಮಯಂತಿ ಸೋಮಯ್ಯ ಹಾಗೂ ವಕೀಲ ಸಂಧಾನಕಾರರಾದ ಕೃಷ್ಣ ಪ್ರಸಾದ್ ದೋಳ ಅವರು, ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ವೈ. ಹರಿಹರನ್ ಹಾಗೂ ವಕೀಲ ಸಂಧಾನಕಾರರಾದ ಶ್ಯಾಮ್ ಪ್ರಕಾಶ್ ಡಿ.ಎಂ. ಅವರು ಲೋಕ ಅದಾಲತ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading