ಸುಬ್ರಹ್ಮಣ್ಯ : ಕಸ್ತೂರಿರಂಗನ್ ವರದಿ ಸಂಪೂರ್ಣ ಕೈಬಿಡುವಂತೆ ಸರಕಾರಕ್ಕೆ ಆಕ್ಷೇಪಣೆ ಪತ್ರ ನೀಡಿಕೆ

ಸುಬ್ರಹ್ಮಣ್ಯ ಸೆಪ್ಟಂಬರ್ 16 :“ ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಸಮಸ್ಯೆಯಾದ ಪರಿಸರ ಸೂಕ್ಷ್ಮ ವಲಯದ(ಇಎಸ್ಎ )7ನೇ ಕರಡು ಅಧಿಸೂಚನೆಯ ಕುರಿತು ಸೆಪ್ಟಂಬರ್ 18ರಂದು ಮಂಗಳೂರಿನಲ್ಲಿ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಥಮವಾಗಿ ಚರ್ಚೆ ನಡೆಸಿ ಸಂಪೂರ್ಣವಾಗಿ ಕೈ ಬಿಡಬೇಕು ಮತ್ತು ಜನವಸತಿ ಪ್ರದೇಶಕ್ಕೆ ಹಾಗೂ ಪಶ್ಚಿಮ ಘಟ್ಟಕ್ಕೂ ಗಡಿ ಗುರುತು ಮಾಡಿ ಶೂನ್ಯ ಬಫರ್ ಜೋನ್ ಘೋಷಣೆ ಮಾಡಬೇಕೆಂದು” ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಒಳಪಟ್ಟ ಸುಬ್ರಹ್ಮಣ್ಯ, ಐನೆಕಿದು, ಹಾಗೂ ಯೇನೆಕಲ್ಲು ಗ್ರಾಮಸ್ಥರ ಪರವಾಗಿ ವರದಿಗೆ ಆಕ್ಷೇಪಣೆ ಪತ್ರವನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಮೂಲಕ ಬುಧವಾರ ಸರಕಾರಕ್ಕೆ ಸಲ್ಲಿಸಲಾಯಿತು. ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ಕಾರ್ಯದರ್ಶಿ ಮೋನಪ್ಪ.ಡಿ ಅವರಿಗೆ ಅಕ್ಷೇಪಣೆ ಪತ್ರವನ್ನು ಸಲ್ಲಿಸಲಾಯಿತು.

. . . . . . . . .

ಈ ಸಂದರ್ಭದಲ್ಲಿ ಮೂರು ಗ್ರಾಮಗಳ ಗ್ರಾಮಸ್ಥರ ಪರವಾಗಿ ಜಯಪ್ರಕಾಶ್ ಕೂಜುಗೋಡು, ಅಚ್ಚುತ ಗೌಡ ಕುಕ್ಕಪ್ಪನ ಮನೆ, ಅಶೋಕ್ ಕುಮಾರ್ ಮೂಲೆ ಮಜಲು, ಮಾಧವ ದೇವರಗದ್ದೆ, ಅಣ್ಣಿ ವಾಲಗದಕೇರಿ, ಚಿದಾನಂದ ಕಂದಡ್ಕ, ಶೇಖರ ದೇವರಗದ್ದೆ, ಜಯ ಮಲೆಕುಡಿಯ ಕುಲ್ಕುಂದ ಮುಂತಾದವರು ಹಾಜರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading