ದೇವ ; ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ : ಫಲಾಪೇಕ್ಷೆ ಇಲ್ಲದೇ ನಿಯತ್ತಿನಿಂದ ಮಾಡಿದ ಕೆಲಸ ದೇವರಿಗೆ ಸಲ್ಲುತ್ತದೆ – ಡಾ. ಗೋವಿಂದ ಎನ್. ಎಸ್.

ಯಾವುದೇ ಕೆಲಸವನ್ನು ಫಲಾಪೇಕ್ಷೆ ಇಲ್ಲದೇ ನಿಯತ್ತಿನಿಂದ ಬದ್ಧತೆಯಿಂದ ಮಾಡಿದರೇ ಅದು ದೇವರಿಗೆ ಸಲ್ಲುತ್ತದೆ ಎಂದು ಲೋಕಸಭೆಯ ನುಡಿಭಾವ ಕಥನಕಾರರಾದ ಡಾ. ಗೋವಿಂದ ಎನ್. ಎಸ್. ಹೇಳಿದರು.‌

. . . . . . . . .

ಅವರು ಸೆ.4 ರಂದು ಗೆಳೆಯರ ಬಳಗ ದೇವ ಹಾಗೂ ಜ್ಯೋತಿಲಕ್ಷ್ಮಿ ಮಹಿಳಾ ಮಂಡಲ ದೇವ ಇವರ ಜಂಟಿ ಆಶ್ರಯದಲ್ಲಿ ನಡೆದ 36ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಈ ಅಷ್ಟಮಿ ಕಾರ್ಯಕ್ರಮವು ಒಂದು ಕೆಲಸ,ಇದು ದೇವರಿಗೆ ಮಾಡಿದ ಸೇವೆಯಾಗಿದೆ. ಒಳ್ಳೆಯ ಉದ್ದೇಶಕ್ಕೆ ಹೋರಾಡಿದ ಕೃಷ್ಣನ ಜೀವನದ ಮೌಲ್ಯಗಳ ಕಡೆಗೆ ನಮ್ಮ ಮಕ್ಕಳನ್ನು ಬೆಳೆಸಬೇಕು ಹಾಗೂ ಅಂತಹ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಬೇಕು..‌ ಇಂತಹ ಕಾರ್ಯಕ್ರಮಗಳು ಹಿಂದೂ ಸಮಾಜದಲ್ಲಿರುವ ನ್ಯೂನತೆಗಳನ್ನು ನಿವಾರಿಸಿ ಸಮಾಜದಲ್ಲಿ ಬಂಧುತ್ವವನ್ನು ಮೂಡಿಸುತ್ತದೆ ಎಂದರು.‌
ವೇದಿಕೆಯಲ್ಲಿ ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ರಮೇಶ್ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೆಳೆಯರ ಬಳಗದ ಅಧ್ಯಕ್ಷ ಮುಕುಂದ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.

. . . . . . .

ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ಮೊಸರು ಕುಡಿಕೆ, ಜಾರು ಕಂಬ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಗೆಳೆಯರ ಬಳಗ ಪೂರ್ವಾಧ್ಯಕ್ಷ ಬಾಲಕೃಷ್ಣ ಗೌಡ ಹಿರಿಯಡ್ಕ ಉದ್ಘಾಟಿಸಿದರು.‌ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ಪುಟಾಣಿಗಳು, ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಸ್ಥಳೀಯರು, ಮಹಿಳೆಯರು ಹಾಗೂ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading