ಮುಚ್ಚವ ಶಾಲೆಯನ್ನು ಮೆಚ್ಚುವ ಶಾಲೆಯನ್ನಾಗಿಸಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಮಾದರಿ ಶಿಕ್ಷಕ  ಯಶೋಧರ ಕೆ.

ಕಳೆದ 22 ವರ್ಷಗಳಿಂದ ಪಾಂಡಿಗದ್ದೆ ಶಾಲೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವ ಯಶೋಧರ ಕೆ. ಅವರಿಗೆ ಈ ಬಾರಿಯ ದ.ಕ. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  ಪ್ರಸ್ತುತ ಪಾಂಡಿಗದ್ದೆ ಶಾಲೆಯ ಪ್ರಭಾರವನ್ನು ವಹಿಸಿ ಶಾಲೆಯ ನಾಯಕತ್ವ ವಹಿಸಿ ಉತ್ತಮವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಬೋಧನೆಯಲ್ಲಿ ಕ್ಷಮತೆ ಹೊಂದುವ ಮೂಲಕ ತನ್ನ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿರುತ್ತಾರೆ. ಇಂದಿಗೂ ಪಾಂಡಿಗದ್ದೆ ಶಾಲೆಯು ಸುಳ್ಯ ತಾಲೂಕಿನಲ್ಲಿಯೇ ಅತೀ ಹೆಚ್ಚು ಮಕ್ಕಳನ್ನು ಹೊಂದಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿದೆ.
ಇವರು ತಮ್ಮ ವೃತ್ತಿಯಲ್ಲಿ ತೋರುವ ಜವಾಬ್ದಾರಿ, ಬದ್ಧತೆ ಮತ್ತು ಶ್ರಮದ ಕಾರಣಕ್ಕೆ ಈ ಊರಿನ ಹಾಗು ಸುತ್ತಮುತ್ತಲಿನ ಜನರ ಅಪಾರ ಪ್ರೀತಿ, ಗೌರವ ಮತ್ತು ಅಭಿಮಾನಕ್ಕೆ ಪಾತ್ರರಾದವರು. ಪಾಂಡಿಗದ್ದೆ ಶಾಲೆಯು ಅಭಿವೃದ್ಧಿ ಪಥದಲ್ಲಿ ನಿರಂತರವಾಗಿ ಸಾಗಿ ಬರಲು ಇವರ ಶ್ರಮ ಅಪಾರವಾಗಿದೆ. ವಿವೇಕ ಯೋಜನೆಯಲ್ಲಿ 28 ಲಕ್ಷ ರೂ ವೆಚ್ಚದಲ್ಲಿ ಎರಡು ತರಗತಿ ಕೊಠಡಿಗಳ ನಿರ್ಮಾಣ, 5 ಲಕ್ಷ ರೂ ವೆಚ್ಚದಲ್ಲಿ ನೂತನ ಶೌಚಾಲಯ ನಿರ್ಮಾಣ, ಸುಣ್ಣ-ಬಣ್ಣಗಳಿಂದ ಅಲಂಕರಿಸಲ್ಪಟ್ಟ ಶಾಲಾ ಕಟ್ಟಡ, ಸೋಲಾರ್‌ ಇನ್ವರ್ಟರ್  ಮೊದಲಾದ ಭೌತಿಕ ಅಭಿವೃದ್ಧಿಗಳು ಶಾಲೆಯಲ್ಲಿ ನಡೆದಿವೆ. ಪಾಠ ಬೋಧನೆಗೆ ಆಧುನಿಕ ವ್ಯವಸ್ಥೆಗಳಾದ ಪ್ರಾಜೆಕ್ಟರ್‌, ಕಂಪ್ಯೂಟರ್‌, ಧ್ವನಿ ವ್ಯವಸ್ಥೆಯನ್ನು ಒಳಗೊಂಡ ಆಡಿಯೋ ವಿಜುವಲ್‌ ಕೊಠಡಿ, ಸ್ಮಾರ್ಟ್‌ ಟಿ.ವಿ  ಮೊದಲಾದವು ಶಾಲೆಯಲ್ಲಿವೆ. ಶಾಲೆಯು ಸಂಪೂರ್ಣ ವೈಫೈ ಸಂಪರ್ಕ ಹೊಂದಿರುತ್ತದೆ. ಆಗಾಗ ಶ್ರಮದಾನವನ್ನು ನಡೆಸಿ ಶಾಲೆಯ ಆವರಣದ ಸ್ವಚ್ಛತೆ ನಡೆಸಲಾಗುತ್ತದೆ. ಗ್ರಾ.ಪಂ.ಪಂಜ ಸಹಕಾರದಿಂದ ಒಂದು ವ್ಯವಸ್ಥಿತ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ರೂಪಿಸಲಾಗಿದೆ. ದಾನಿಗಳ ಸಹಕಾರದಿಂದ ಪ್ರತಿವರ್ಷ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ, ಐಡಿ ಕಾರ್ಡ್, ಬೆಲ್ಟ್‌ ಮೋದಲಾದವುಗಳನ್ನು ನೀಡಲಾಗುತ್ತಿದೆ. ಹೀಗೆ ದಾನಿಗಳು ಮತ್ತು ಸಮುದಾಯದ ಸಹಕಾರದ ಮೂಲಕ ಶಾಲೆಗೆ ವಿವಿಧ ಸಾಧನಗಳನ್ನು ಜೋಡಿಸಿಕೊಂಡಿರುತ್ತಾರೆ.
ಶಾಲೆಯು ಅಭಿವೃದ್ಧಿ ಪಥದಲ್ಲಿ ನಿರಂತರವಾಗಿ ಸಾಗುತ್ತಿದ್ದು, 2014ರಲ್ಲಿ ಸ್ವಚ್ಛತಾ ಪ್ರಶಸ್ತಿ, 2016-17ರಲ್ಲಿ ಉತ್ತಮ ನಲಿಕಲಿ ಪ್ರಶಸ್ತಿ ಶಾಲೆಗೆ ದೊರೆತಿದೆ. ಪ್ರತೀ ವರ್ಷ ಶಾಲಾ ವಾರ್ಷಿಕೋತ್ಸವವನ್ನು ನಡೆಸಲಾಗುತ್ತದೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಪಂಜ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿಯನ್ನು ಅದ್ದೂರಿಯಾಗಿ ಆಯೋಜಿಸಲಾಗಿದ್ದು ಇದು ಮೆಚ್ಚುಗೆಗೆ ಪಾತ್ರವಾಗಿರುತ್ತದೆ.
ಪಂಜ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಾಂಡಿಗದ್ದೆ ಶಾಲೆಯ ಮಕ್ಕಳು ಸಾಕಷ್ಟು ಸಲ ಸಮಗ್ರ ಪ್ರಶಸ್ತಿಗಳನ್ನು ಪಡೆದದ್ದಿದೆ. ಕಳೆದ ವರ್ಷ ತಾಲೂಕು ಮಟ್ಟದಲ್ಲೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದಿರುತ್ತಾರೆ. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ. ಕ್ಲಸ್ಟರ್‌ ಹಂತದ ಕಲಿಕಾ ಹಬ್ಬದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ತೋರಿರುತ್ತಾರೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ  ಶೈಕ್ಷಣಿಕ ಸಾಲಿನಲ್ಲಿ ಅತ್ಯುತ್ತಮ ಎಸ್.ಡಿ.ಎಂ.ಸಿ ಗೆ ಕೊಡಮಾಡುವ  ಸಾಧನಾ ಪುಷ್ಠಿ ಪ್ರಶಸ್ತಿಯು ದೊರೆತಿದೆ.
ಇವರಿಗೆ ಹಲವಾರು ಸಂಘ ಸಂಸ್ಥೆಗಳು ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಿರುತ್ತವೆ. 2017-18ರಲ್ಲಿ ನೀಡಲಾದ ಅಟ್ಲೂರು ತಾಲೂಕು ಮಟ್ಟದ ಉತ್ತಮ ಪ್ರಶಸ್ತಿ,  2025-26ರಲ್ಲಿ ರೋಟರಿ ಕ್ಲಬ್‌ ಬೆಳ್ಳಾರೆ ಇವರು ನೀಡಿದ ನೇಷನ್‌ ಬಿಲ್ಡರ್‌ ಅವಾರ್ಡ್‌ ಪ್ರಮುಖವಾದವು. ಶಾರದಾಂಬ ಭಜನಾ ಮಂಡಳಿ ಇವರ ಗೌರವ ಸನ್ಮಾನ,  2026-27ರ ಜೆ.ಸಿ.ಐ ಪಂಜ ಪಂಚಶ್ರೀ ಇವರ ಗೌರವ ಸನ್ಮಾನ, ಇದೇ ವರ್ಷ ಕಾಮದೇನು ಕ್ರೆಡಿಟ್‌ ಕೊ ಆಪರೇಟಿವ್ ಸೊಸೈಟಿ, ಬೆಳ್ಳಾರೆ ಇವರ ಗೌರವ ಸನ್ಮಾನ ಪ್ರಮುಖವಾಗಿವೆ.

. . . . . . . . .

ಇವರು ಕಳಂಜ ಗ್ರಾಮದ ಕಳಂಜ ಹುಕ್ರಪ್ಪ ಗೌಡ ಹಾಗೂ ತಂಗಮ್ಮ ದಂಪತಿಗಳ ಪುತ್ರ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading