ಗುತ್ತಿಗಾರು : ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಮಂತ್ರಿಮಂಡಲದ ಪದಗ್ರಹಣ ಸಮಾರಂಭ

ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ 2026-27 ಸಾಲಿನ ಕಾಲೇಜು ಮಂತ್ರಿಮಂಡಲದ ಪದಗ್ರಹಣ ಸಮಾರಂಭ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಶಾರದಾ ಪದವಿ ಪೂರ್ವ ಕಾಲೇಜು ಸುಳ್ಯ ಇದರ ನಿವೃತ ಇತಿಹಾಸ ಉಪನ್ಯಾಸಕರಾದ ಪ್ರಸನ್ನ.ನಿಡ್ಯಮಲೆ ಇವರು ಶೈಕ್ಷಣಿಕ ಸಾಲಿನ ಮಂತ್ರಿ ಮಂಡಲದ ಉದ್ಘಾಟನೆ ನೆರವೇರಿಸಿ ಶುಭಹಾರೈಸಿದರು. ಪ್ರಧಾನ ಮಂತ್ರಿ ಕಾಲೇಜು ವಿಭಾಗ ಮೇಘ.ಹೆಚ್.ಕೆ ಇವರಿಗೆ ಕಾಲೇಜು ಪ್ರಾಂಶುಪಾಲರಾದ ಚೆನ್ನಮ್ಮ.ಪಿ, ಮುಖ್ಯ ಮಂತ್ರಿಯಾಗಿ ಪ್ರೌಢಶಾಲಾ ವಿಭಾಗದ ರೆನ್ವಿತ್.ಕೆ.ಎಂ ಇವರಿಗೆ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ.ಎಂ ಪ್ರಮಾಣ ವಚನ ಬೋಧಿಸಿದರು, ಕಾಲೇಜು ಮಂತ್ರಿಮಂಡಲದ ಸದಸ್ಯರುಗಳಿಗೆ ಚುನಾವಣಾಧಿಕಾರಿ ರಂಜಿತ್ ಅಂಬೆಕಲ್ಲು, ಪ್ರೌಢಶಾಲಾ ಮಂತ್ರಿಮಂಡಲದ ಸದಸ್ಯರುಗಳಿಗೆ ಚುನಾವಣಾಧಿಕಾರಿ ಸುನಿಲ್ ಕುಮಾರ್ ಪ್ರಮಾಣ ವಚನ ಬೋಧಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಚೆನ್ನಮ್ಮ.ಪಿ ವಹಿಸಿದ್ದರು, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ.ಎಂ,ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಹರಿಶ್ಚಂದ್ರ ಕುಳ್ಳಂಪ್ಪಾಡಿ ಹಾಗೂ ರೇಖಾ,ಎಸ್.ಡಿ.ಯಂ.ಸಿ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ, ಚುನಾವಣಾ ಅಧಿಕಾರಿಗಳಾದ ರಂಜಿತ್ ಅಂಬೆಕಲ್ಲು ಹಾಗೂ ಸುನಿಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಿಕ್ಷಕರಾದ ಸುನಿಲ್ ಕುಮಾರ್ ಸ್ವಾಗತಿಸಿ, ಹಿರಿಯ ಶಿಕ್ಷಕಿ ಸಾವಿತ್ರಿ ವಂದಿಸಿದರು, ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು, ಪ್ರೌಢಶಾಲಾ ವಿಭಾಗದ ಹಾಗೂ ಕಾಲೇಜು ವಿಭಾಗದ ಶಿಕ್ಷಕ ಹಾಗೂ ಉಪನ್ಯಾಸಕ ವೃಂದ ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading