ಯೇನೆಕಲ್ಲು : “ಮಹಿಳಾ ಕೌಶಲ್ಯ ತರಬೇತಿ ಶಿಬಿರ”ದ ಸಮಾರೋಪ ಸಮಾರಂಭ

ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಸಹಯೋಗದಲ್ಲಿ ನಡೆದ “ಮಹಿಳೆಯರ ಕೌಶಲ್ಯ ತರಬೇತಿ ಶಿಬಿರ”ದ ಸಮಾರೋಪ ಸಮಾರಂಭ ಕಾರ್ಯಕ್ರಮ ಜು.11 ರಂದು ನಡೆಯಿತು.

. . . . . . . . .

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಟ್ರಸ್ಟ್ ನ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೊಟೇರಿಯನ್ ಮೇಜರ್ ಡೋನರ್ ಲತಾ ಮಧುಸೂದನ್ ಅಧ್ಯಕ್ಷರು ರೋಟರಿ ಕ್ಲಬ್ ಸುಳ್ಯ ಹಾಗೂ ಎಂ.ಪಿ.ಎಚ್.ಎಫ್ ಜಯಪ್ರಕಾಶ್ ಪೂರ್ವಾಧ್ಯಕ್ಷರು ರೋಟರಿ ಕ್ಲಬ್ ಸುಬ್ರಹ್ಮಣ್ಯ ಹಾಗೂ ಶ್ರೀಮತಿ ಸುಮಾ ಕುದ್ವ ತರಬೇತುದಾರರು ಹಾಗೂ ಮಾಲಕರು ಸೌಂದರ್ಯ ಬ್ಯೂಟಿ ಪಾರ್ಲರ್ ಪಂಜ, ಟ್ರಸ್ಟ್ ನ ಉಪಾಧ್ಯಕ್ಷರಾದ ಶಿವರಾಂ ಜಿದ್ಗಲ್ ಮತ್ತು ಟೈಲರಿಂಗ್ ತರಬೇತುದಾರಾದ ಮೀನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

. . . . . . .

ಮುಖ್ಯ ಅತಿಥಿಗಳಾದ ರೊಟೇರಿಯನ್ ಮೇಜರ್ ಡೋನರ್ ಲತಾ ಮಧುಸೂದನ್ ಮಾತನಾಡಿ “ರೈತ ಯುವಕ ಮಂಡಲ ಚಾರಿಟೇಬಲ್ ಟ್ರಸ್ಟ್ ಇಂದು ಮಹಿಳಾ ಸಬಲೀಕರಣಕ್ಕೆ ಪೂರಕವಾಗುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಇದರಿಂದಾಗಿ ಇಂದು ಮಹಿಳೆಯರು ಸ್ವಾಲಂಬಿಯಾಗುತ್ತಾರೆ. ಮುಂದಿನ ದಿವಸಗಳಲ್ಲಿ ರೋಟರಿ ಕ್ಲಬ್ ಸುಳ್ಯದಿಂದ ಟ್ರಸ್ಟ್ ಗೆ ಪರಸ್ಪರ ಸಹಾಯ ಹಸ್ತ ನೀಡುವುದಾಗಿ” ತಿಳಿಸಿರುತ್ತಾರೆ. ಇನ್ನೋರ್ವ ಅತಿಥಿಯಾದ ರೊಟೇರಿಯನ್ ಎಂ.ಪಿ.ಎಚ್.ಎಫ್ ಜಯಪ್ರಕಾಶ್ ಪೂರ್ವಾಧ್ಯಕ್ಷರು ರೋಟರಿ ಕ್ಲಬ್ ಸುಬ್ರಹ್ಮಣ್ಯ ಇವರು ಮಾತನಾಡಿ “ಟ್ರಸ್ಟ್ ನ ಇಂತಹ ಸಮಾಜಮುಖಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ರೋಟರಿ ಕ್ಲಬ್ ಬೆಂಗಳೂರು ವತಿಯಿಂದ ಟೈಲರಿಂಗ್ ಮಿಷಿನ್ ಕೊಡಿಸುವುದರ ಬಗ್ಗೆ ಪ್ರಯತ್ನಿಸುತ್ತೇನೆ” ಎಂಬ ಭರವಸೆ ನೀಡಿದರು ಮತ್ತು ಟ್ರಸ್ಟ್ ನ ಕಾರ್ಯಕ್ರಮವನ್ನು ಶ್ಲಾಘಿಸಿದರು.

ತರಬೇತುದಾರರಾದ ಶ್ರೀಮತಿ ಸುಮಾ ಕುದ್ವ ರವರು ಮಾತನಾಡಿ “ನಾನು ನಾನು ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಹೇಳಿಕೊಡಲು ತುಂಬಾ ಖುಷಿಯಾಗುತ್ತಿದೆ. ಹಾಗೂ ಇದರಿಂದಾಗಿ ಮಹಿಳೆಯರು ತಮ್ಮ ಕಾಲ ಮೇಲೆ ತಾವೇ ನಿಂತು ತಮ್ಮ ಜೀವನವನ್ನು ನಡೆಸಬಹುದು. ಇನ್ನು ಮುಂದೆ ಕೂಡ ಟ್ರಸ್ಟ್ ನ ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಬೆಂಬಲ ಇದೆ” ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ ಮಾತನಾಡಿ “ಮಹಿಳಾ ಸಬಲೀಕರಣಕ್ಕೆ ಮುಂದಿನ ದಿನಗಳಲ್ಲಿ ಟ್ರಸ್ಟ್ ನ ವತಿಯಿಂದ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ” ತಿಳಿಸಿದರು.

ಪ್ರಶಿಕ್ಷಣಾರ್ಥಿಗಳು ಶ್ರೀಮತಿ ಶೋಭಾ ಗಿರಿಧರ್, ಶ್ರೀಮತಿ ಅಕ್ಷತಾ ರಂಜನ್, ಭವ್ಯ ಕುದ್ವ, ಶ್ರೀಮತಿ ಶ್ರೀ ಜಿ.ಚಂದ್ರಶೇಖರ್ ನಾಯರ್ ತಮ್ಮ ಮೂರು ದಿನದ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಟ್ರಸ್ಟ್ ನ ನಿರ್ದೇಶಕರಾದ ಭರತ್ ನೆಕ್ರಾಜೆ ಸ್ವಾಗತಿಸಿದರು. ಟ್ರಸ್ಟಿಗಳಾದ ಚಂದ್ರಶೇಖರ್ ನಾಯರ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಟ್ರಸ್ಟಿನ ಖಜಂಗಿಯಾದ ನಾಗರಾಜ್ ಪರಮಲೆ ಧನ್ಯವಾದ ಸಮರ್ಪಿಸಿದರು. ದಿನ ನಿರ್ದೇಶಕರಾದ ವಿಜಯಕುಮಾರ್ ಅಮೈ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ನ ನಿರ್ದೇಶಕರುಗಳಾದ ಪ್ರಶಾಂತ್ ದೋಣಿಮನೆ, ಮೋಹನ್ ಕೋಟಿಗೌಡನ ಮನೆ ಸಹಕರಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading