ದ್ವಾದಶ ರಾಶಿಗಳ ದಿನ ಭವಿಷ್ಯ



ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ ಮೊ: 9591969197
ದಿನಾಂಕ:13-07-2026 ಸೋಮವಾರ
*01,🐏ಮೇಷರಾಶಿ🐏*
📃,ಬಾಳಸಂಗಾತಿಯನ್ನು ನಿರ್ಲಕ್ಷಿಸದಿರಿ. ಬಾಳಸಂಗಾತಿಯ ಇಚ್ಛೆಯನ್ನು ಅರಿತು ಸ್ಪಂದಿಸಿದಲ್ಲಿ ಸಂಸಾರವು ಸುಖಮಯವಾಗಿರುವುದು. ಸುಖಾ ಸುಮ್ಮನೆ ನೀವೇ ಅಪಾರ್ಥಗಳನ್ನು ಕಲ್ಪಿಸಿಕೊಂಡು ಸುಂದರ ಬದುಕನ್ನು ಹಾಳುಮಾಡಿಕೊಳ್ಳದಿರಿ,
ಗಮನಿಸಿ:-ಇಂದು ಶುಭ ಸುದ್ಧಿಯನ್ನುಕೇಳುತ್ತೀರಿ,
ಪರಿಹಾರ:-ಶ್ರೀಅನ್ನಪೂರ್ಣೇಶ್ವರಿಯನ್ನು ಸ್ಮರಣೆ ಮಾಡಿ,
*02,🐂ವೃಷಭರಾಶಿ🐂*
📃,ಇಂದು ನೀವು ಹೊಸ ಆಸ್ತಿಯನ್ನು ಖರೀದಿಸುವ ವಿಚಾರವಾಗಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಬಹುದು. ಯಾವುದೇ ಕಾರಣಕ್ಕೂ ಯಾರೊಂದಿಗೂ ಈ ದಿನ ವಾದ ವಿವಾದಕ್ಕೆ ನಿಲ್ಲದಿರಿ. ಅದರಲ್ಲೂ ವಿರುದ್ಧ ಲಿಂಗಿಗಳ ಜತೆ, ಚಾಣಾಕ್ಷ ತನದಿಂದ ಮಾತನಾಡುವುದು ಒಳ್ಳೆಯದು. ಇಲ್ಲವಾದರೆ ಸುಖಾಸುಮ್ಮನೆ ಅಪವಾದಗಳನ್ನು ಮೈಮೇಲೆ ಎಳೆದುಕೊಳ್ಳುವಿರಿ,
ಗಮನಿಸಿ:- ಇಂದು ವ್ಯಾಪಾರ ಮಾಡುವವರಿಗೆ ತುಸು ಲಾಭ ಸಿಗುವುದು,
ಪರಿಹಾರ:-ಶ್ರೀ ಚಾಮುಂಡಿ ದೇವಿಯನ್ನು ನೆನೆಯಿರಿ,
*03,👥ಮಿಥುನ ರಾಶಿ👥*
📃,ಇಂದು ನಿಮಗೆ ಮಿಶ್ರ ದಿನವಾಗಲಿದೆ. ಯಾವುದೇ ಕಾನೂನು ವಿಷಯದಲ್ಲಿ ನಿಮ್ಮ ಸಹೋದರರಿಂದ ನೀವು ಸಲಹೆಯನ್ನು ತೆಗೆದುಕೊಳ್ಳಬಹುದು, ಈ ದಿನ ಆಂಜನೇಯನನ್ನು ಸ್ಮರಿಸುವುದರಿಂದ ಬಹುತೇಕ ಸಮಸ್ಯೆಗಳು ದೂರವಾಗುವವು. ಇತರರ ಮಾತಿಗೂ ಬೆಲೆ ಕೊಡುವುದನ್ನು ಕಲಿತರೆ ಜೀವನ ಸುಂದರಮಯವಾಗಿರುತ್ತದೆ. ಮನಸ್ಸಿಗೆ ಮುದ ನೀಡುವ ಹೊಸ ವಿಚಾರಗಳನ್ನು ತಿಳಿಯಿರಿ,
ಗಮನಿಸಿ:-ಇಂದು ಆಹಾರದ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಿ,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ,
*04,🦀ಕಟಕ ರಾಶಿ🦀*
📃,ಹೊಸ ಕಾರ್ಯಗಳಿಗೆ ಜವಾಬ್ದಾರಿ ಸಿಗಲಿದೆ. ಕುಟುಂಬ ಸೌಖ್ಯ, ಬಂಧು ಮಿತ್ರರ ಸಮಾಗಮ, ಸಂತಾನ ಪ್ರಾಪ್ತಿ, ಭೂ ಲಾಭ. ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಾಹನಕೊಳ್ಳುವ ಯೋಗ, ಧಾನ ಧರ್ಮದಲ್ಲಿ ಆಸಕ್ತಿ, ಉದ್ಯೋಗದಲ್ಲಿ ಅಭಿವೃದ್ಧಿ. ವಿದ್ಯಾಭಿವೃದ್ಧಿ, ಅನೇಕರಿಗೆ ವಿವಾಹ ಯೋಗ, ಆಕಸ್ಮಿಕ ಧನ ಲಾಭ, ಸ್ತ್ರೀ ಸಂಬಂಧ ವ್ಯವಹಾರದಿಂದ ತೊಂದರೆ,
ಗಮನಿಸಿ:-ಇಂದುಆರೋಗ್ಯದಲ್ಲಿಏರುಪೇರಾಗುವಸಾಧ್ಯತೆಯಿದೆ, ಪರಿಹಾರ:-ಬಡವರಿಗೆಅನ್ನದಾನ ಮಾಡಿ,
*05,🦁ಸಿಂಹ ರಾಶಿ🦁*
📃,ಇಂದು ನೀವು ಕುಟುಂಬದೊಂದಿಗೆ ಎಲ್ಲೋ ಪ್ರಯಾಣಿಸಲು ಯೋಜಿಸಬಹುದು. ಸಮಾಜದಲ್ಲಿ ಗೌರವ ಸಿಗುವುದು. ಹಣಕಾಸಿನ ಸ್ಥಿತಿಯಲ್ಲಿ ಪ್ರಗತಿ ಕಂಡುಬರುವುದು. ದೂರದ ಗೆಳೆಯರಿಂದ ಸಹಾಯ ಪಡೆಯುವಿರಿ,ವಾಹನ ಚಲಾಯಿಸುವಾಗ ಜಗ್ರತೆ ಇರಲಿ, ನಿಮ್ಮ ಕೆಲವು ಕಾನೂನು ವಿಷಯಗಳು ಬಗೆಹರಿಯುವಂತೆ ತೋರುತ್ತಿದ್ದು,
ಗಮನಿಸಿ:-ತೀರ್ಪು ನಿಮ್ಮ ಪರವಾಗಿಯೂ ಬರಬಹುದು,
ಪರಿಹಾರ:-ಶ್ರೀಕಾಳಿಕಾದೇವಿಯನ್ನು ಸ್ಮರಣೆ ಮಾಡಿ,
*06,👩‍🦳ಕನ್ಯಾ ರಾಶಿ👩‍🦳*
📃,ಕೆಲವರು ಇಂದು ಆಸ್ತಿಯನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ನಿಮ್ಮದು ಮೃದು ಮನಸ್ಸು ಮತ್ತು ನೇರ, ನಿಷ್ಠುರದ ಮಾತು. ಹಾಗಾಗಿ ಕೆಲವರು ನಿಮ್ಮ ಬಳಿ ಮಾತನಾಡಲು ಹಿಂಜರಿಯುವರು. ನಿಮ್ಮ ಅಂತರಂಗ ಅರಿತ ಕೆಲವರು ನಿಮ್ಮನ್ನು ಹೊಗಳುವರು. ನಿಮ್ಮ ನಿಷ್ಠೆಯೇ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು,
ಗಮನಿಸಿ:- ಇಂದು ವಾಹನ ಚಲಾಯಿಸುವಾಗ ಹೆಚ್ಚರಿಕೆ ಇರಲಿ,
ಪರಿಹಾರ:-ಶ್ರೀ ದುರ್ಗಾ ಸ್ತೋತ್ರ ಪಠಿಸಿ,
*07,⚖️ತುಲಾ ರಾಶಿ⚖️*
📃,ಪ್ರತಿಯೊಂದು ಕಾರ್ಯದಲ್ಲೂ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ವ್ಯಾಪಾರ ಮಾಡುವವರಿಗೆ ಇಂದು ಸ್ವಲ್ಪ ಗೊಂದಲದ ದಿನವಾಗಿರುತ್ತದೆ. ನಿಮ್ಮ ಜೀವನ ಸಂಗಾತಿಯ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ನೀವು ಅವರಿಗಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು,ನೀವು ಕೆಲವು ವಿಚಾರಗಳಲ್ಲಿ ಯಾರ ಮಾತನ್ನೂ ಆಲಿಸುವುದಿಲ್ಲ. ಇದರಿಂದ ನೀವು ಮುಂದೆ ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ.
ಗಮನಿಸಿ:-ಇಂದು ಬೆಂಬಲಿಗರ ಸಲಹೆಯಂತೆಮುಂದುವರೆಯುವುದು ಉತ್ತಮ,
ಪರಿಹಾರ:-ಶ್ರೀ ಲಲಿತಾ ಸಹಸ್ರನಾಮ ಪಠಿಸಿ,
*08,🦂ವೃಶ್ಚಿಕ ರಾಶಿ🦂*
📃,ಇಂದು ದೂರದ ಪ್ರಯಾಣವನ್ನು ತಪ್ಪಿಸಿ. ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ಅಲ್ಪ ಹಿನ್ನಡೆ ಕಂಡು ಬರುವುದು. ಬೆಳ್ಳಿ ಬಂಗಾರದ ವ್ಯಾಪಾರಸ್ಥರಿಗೆ ತುಸು ಚೇತರಿಕೆ ಕಂಡು ಬರುವುದು. ಹಣಕಾಸಿನ ಪರಿಸ್ಥಿತಿ ಸುಧಾರಣೆ ಆಗುವುದು. ವಿದೇಶ ಪ್ರವಾಸ ಮಾಡಲು ಯೋಚಿಸುತ್ತಿರುವವರಿಗೆ ಉತ್ತಮ ಕಾಲವಿದು,ಇಂದು, ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ನಂಬಿಕೆ ಹೆಚ್ಚಾಗುವುದು,
ಗಮನಿಸಿ:- ಇಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತೀರಿ,
ಪರಿಹಾರ:-ಶ್ರೀ ವಿಷ್ಣು ಸಹಸ್ರನಾಮ ಪಠಿಸಿ,
*09,🏹ಧನುಸ್ಸು ರಾಶಿ🏹*
📃,ಇಂದು ನಿಮಗೆ ಆತ್ಮವಿಶ್ವಾಸ ತುಂಬಿದ ದಿನವಾಗಿರುತ್ತದೆ. ನೀವು ಯಾವುದೇ ಕೆಲಸವನ್ನು ಮಾಡಲು ಸಿದ್ಧರಾಗಿರುತ್ತೀರಿ. ಈಗ ನೀವು ಮಾಡುತ್ತಿರುವ ಕೆಲಸ ಪೂರ್ಣಗೊಳಿಸಿ ಹೊಸ ಕೆಲಸ ಆರಂಭಿಸುವುದು ಒಳ್ಳೆಯದು. ಅರ್ಧಂಬರ್ಧ ಆಗಿರುವ ಕೆಲಸಗಳ ಕಡೆ ಹೆಚ್ಚಿನ ಗಮನ ನೀಡಿ. ಆರೋಗ್ಯದ ಕಡೆ ಗಮನ ಹರಿಸಿ,
ಗಮನಿಸಿ:-ಇಂದು ದೂರ ಪ್ರಯಾಣ ಮಾಡುವಿರಿ,
ಪರಿಹಾರ:-ಕುಲದೇವರದರ್ಶನ ಮಾಡಿ,
*10,🐊ಮಕರ ರಾಶಿ🐊*
📃,ಇಂದು ನಿಮಗೆ ಪ್ರಯೋಜನಕಾರಿಯಾಗಲಿದೆ. ಇಂದು ಉತ್ತಮ ಸ್ಥಾನವನ್ನು ಕಂಡುಕೊಳ್ಳುತ್ತೀರಾ ಮತ್ತು ಈ ದಿನವು ಸಾಮಾಜಿಕ ದೃಷ್ಟಿಕೋನದಿಂದ ಮಿಶ್ರವಾಗಿರುತ್ತದೆ, ಯಾರಿಗೂ ಭರವಸೆಗಳನ್ನು ನೀಡಬೇಡಿ. ಇದರಿಂದ ಅಪಹಾಸ್ಯಕ್ಕೆ ಗುರಿಯಾಗುವಿರಿ. ಧರ್ಮಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು,
ಗಮನಿಸಿ:- ಇಂದು ಮಿತ್ರರಿಂದ ಸಹಾಯ ದೊರೆಯಲಿದೆ,
ಪರಿಹಾರ:-ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ,
*11,⚱️ಕುಂಭ ರಾಶಿ⚱️*
📃,ನೀವು ಇಂದು ನಿಮ್ಮ ಸಹನೆಯನ್ನು ಹೆಚ್ಚಿಸಿಕೊಳ್ಳಬೇಕು, ಇಲ್ಲದಿದ್ದರೆ ಜಗಳ ಉಂಟಾಗಬಹುದು. ನೀವು ಇಂದು ನಿಮ್ಮ ಸೌಕರ್ಯಗಳ ವಿಷಯಗಳ ಮೇಲೆ ಪೂರ್ಣ ಗಮನವನ್ನು ಇಟ್ಟುಕೊಳ್ಳಬೇಕು, ನಿಮ್ಮೆದುರು ನಿಮ್ಮಂತೆ ಮಾತನಾಡಿ ಹಿಂಬದಿಯಲ್ಲಿ ನಿಮ್ಮನ್ನು ಟೀಕಿಸುವ ಗೆಳೆಯರರಿಂದ ನಿಮಗೆ ಒಳ್ಳೆಯದೆ ಆಗುವುದು, ನಿಮ್ಮ ಚಾಣಾಕ್ಷದ ಬುದ್ದಿಯಿಂದ ಎಲ್ಲವನ್ನು ನಿಭಾಯಿಸುವಿರಿ, ಗಮನಿಸಿ:- ಇಂದು ವ್ಯಪಾರಸ್ಥರಿಗೆ ಸಣ್ಣ ನಷ್ಟವಾಗಬಹುದು,
ಪರಿಹಾರ:-ಶ್ರೀ ದುರ್ಗಾ ದೇವಿಯನ್ನು ಸ್ಮರಣೆ ಮಾಡಿ,
*12,🐬ಮೀನ ರಾಶಿ🐬*
📃,ಇಂದು, ನಿಮ್ಮ ಸುತ್ತಲಿನ ವಾತಾವರಣವು ಆಹ್ಲಾದಕರವಾಗಿರುತ್ತದೆ ಮತ್ತು ನಿಮ್ಮ ಕುಟುಂಬದ ಸದಸ್ಯರ ಸಹಾಯದಿಂದ ನೀವು ಕೆಲವು ಹೊಸ ಕೆಲಸಗಳನ್ನು ಮಾಡುತ್ತೀರಿ. ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಹೊಗಳುವರು, ಗಮನಿಸಿ:-ಕುಟುಂಬದಲ್ಲಿ ಕಲಹಗಳಿದ್ದರೆ ಈದಿನ ಸರಿಪಡಿಸಿಕೊಳ್ಳಿ,
ಪರಿಹಾರ:-ಗ್ರಾಮ ದೇವತೆಗೆ ನಿಂಬೆಹಣ್ಣಿನ ದೀಪ ಬೆಳಗಿ,

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading