ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನಕ್ಕೆವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಧರ್ಮಸ್ಥಳ ದಿಂದ ರೂ.3 ಲಕ್ಷ ಅನುದಾನ

ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನಕ್ಕೆ ಧರ್ಮಸ್ಥಳದಿಂದ ಬಂದ ಅನುದಾನ ರೂ.3 ಲಕ್ಷ ರೂಪಾಯಿ ವಿತರಣೆಯನ್ನು ಯೋಜನಾಧಿಕಾರಿಗಳು ಮಾಡಿದರು. “ಸುಳ್ಯ ತಾಲ್ಲೂಕು ಅತೀ ಹೆಚ್ಚು ದೇವಸ್ಥಾನ ದೈವಸ್ಥಾನ ಹೊಂದಿರುವ ತಾಲೂಕಾಗಿದೆ. ಹಾಗೆಯೇ ಸುಳ್ಯ ರಾಜ್ಯದಲ್ಲೇ ಧರ್ಮಸ್ಥಳದಿಂದ ಅತೀ ಹೆಚ್ಚು ಅನುದಾನ ಪಡೆದ ತಾಲೂಕಾಗಿದೆ. ಧರ್ಮಸ್ಥಳ ದಿಂದ ತಾಲೂಕಿನ 118 ದೈವ ದೇವಸ್ಥಾನ ಭಜನಾ ಮಂದಿರ ಗಳಿಗೆ 7.5 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಪೂಜ್ಯರು ಅತೀ ಹೆಚ್ಚು ಅನುದಾನ ನೀಡುತ್ತಿದ್ದು ಜೊತೆಗೆ ಗ್ರಾಮಭಿವೃದ್ಧಿ ಯೋಜನೆ ಮುಖಾಂತರ ಸಾಮಾಜಿಕ ಕಾರ್ಯಕ್ರಮ ಗಳನ್ನು ಮಾಡುತ್ತಿದ್ದಾರೆ. ನಿರ್ಗತಿಕರ ಮಾಶಾಸನ, ವಾತ್ಸಲ್ಯ, ಸುಜ್ಞಾನ ನಿಧಿ, ಜ್ಞಾನದೀಪ ಶಿಕ್ಷಕರ ಒದಗನೇ ಸ್ವಸಹಾಯ ಸಂಘಗಳಿಗೆ ಬಿಸಿ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲವಿತರಣೆ ಮಾಡಗುತ್ತಿದೆ” ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನ ಜಾಗೃತಿ ಸ್ಥಾಪಕಧ್ಯಕ್ಷರಾದ ಎನ್.ಎ ರಾಮಚಂದ್ರ ರವರು ಮಾತನಾಡಿ “ಇದುವರೆಗೆ 8 ಲಕ್ಷ ರೂಪಾಯಿ ಅನುದಾನ ಬಂದಿದ್ದು ನಾವೆಲ್ಲರೂ ಪೂಜ್ಯರಿಗೆ, ಧರ್ಮಸ್ಥಳ ಧನ್ಯವಾದ ತಿಳಿಸಿದರು ಹಾಗೂ ಅಭಾರಿ ಯಾಗಿರಬೇಕೆಂದರು. ಈ ಕಾರ್ಯಕ್ರಮ ದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ವೆಂಕಪ್ಪ ಗೌಡ, ಜನಜಾಗೃತಿ ವಲಯಾಧ್ಯಕ್ಷರಾದ ವಿಜಯ ಕುಮಾರ್ ಉಬರಡ್ಕ, ವಲಯ ಒಕ್ಕೂಟ ಅಧ್ಯಕ್ಷರಾದ ಮನೋಹರ್, ಬೂಡು ರಾಧಾಕೃಷ್ಣ,ಕಲ್ಕೂಡ ದೈವಸ್ಥಾನ ಧರ್ಮದರ್ಶಿ ಪಿ.ಕೆ ಉಮೇಶ್, ಆಡಳಿತ ಸಮಿತಿ ಪದಾಧಿಕಾರಿಗಳು, ಊರಿನ ಭಕ್ತರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading