ಯುವಕ ಮಂಡಲ ಮಡಪ್ಪಾಡಿಗೆ ನೂತನ ಪದಾಧಿಕಾರಿಗಳ ನೇಮಕ – ನೂತನ ಅಧ್ಯಕ್ಷರಾಗಿ ಸುಮಂತ್ ಶೀರಡ್ಕ ; ಉಪಾಧ್ಯಕ್ಷರಾಗಿ ತನುರಾಜ್ ಅಂಬೆಕಲ್ಲು ; ಕಾರ್ಯದರ್ಶಿಯಾಗಿ ದೀಕ್ಷಿತ್ ಶೆಟ್ಟಿಮಜಲು

ಜು.19 ಶುಕ್ರವಾರದಂದು ಯುವಕ ಮಂಡಲ ಮಡಪ್ಪಾಡಿಯ ವಠಾರದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆಯಿತು.

. . . . . . . . .

ಯುವಕ ಮಂಡಲದ ಅಧ್ಯಕ್ಷರಾದ ಕಿರಣ್ ಶೀರಡ್ಕ ಅಧ್ಯಕ್ಷತೆ ವಹಿಸಿ, ಕಾರ್ಯದರ್ಶಿಗಳಾದ ರಕ್ಷಿತ್ ಶೀರಡ್ಕ ಸ್ವಾಗತಿಸಿದರು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಯುವಕ ಮಂಡಲದ ಗೌರವ ಸಲಹೆಗಾರರಾದ ಕರುಣಾಕರ ಪಾರೆಪ್ಪಾಡಿಯವರು ನಡೆಸಿದರು.

. . . . . . .

ನೂತನ ಅಧ್ಯಕ್ಷರಾಗಿ ಮಡಪ್ಪಾಡಿ ಗೌಡ ಕ್ರೀಡಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸುಮಂತ್ ಶೀರಡ್ಕರವರನ್ನು ಸರ್ವರ ಒಮ್ಮತದಿಂದ ಕಿರಣ್ ಶೀರಡ್ಕ ಸೂಚಿಸಿ ತನುರಾಜ್ ಅಂಬೆಕಲ್ಲು ಅನುಮೋದಿಸಿದರು. ನೂತನ ಕಾರ್ಯದರ್ಶಿಗಳಾಗಿ ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು ಇದರ ಸದಸ್ಯರಾದ ದೀಕ್ಷಿತ್ ಶೆಟ್ಟಿಮಜಲು ಇವರನ್ನು ಸರ್ವಾನುಮತದಿಂದ ದುಷ್ಯಂತ್ ಶೀರಡ್ಕ ಸೂಚಿಸಿ, ಭಗತ್ ದೇರಾಜೆ ಅನುಮೋದಿಸಿದರು.

ಉಪಾಧ್ಯಕ್ಷರಾಗಿ ತನುರಾಜ್ ಅಂಬೆಕಲ್ಲು, ಜತೆಕಾರ್ಯದರ್ಶಿಯಾಗಿ ಶ್ರೀಶಾಂತ್ ಪನಿಯಾಲ, ಖಜಾಂಚಿಯಾಗಿ ಪ್ರೇಕ್ಷಿತ್ ಬೊಮ್ಮೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಾನಸ್ ಮುಳುಗಾಡು, ಕ್ರೀಡಾ ಕಾರ್ಯದರ್ಶಿಯಾಗಿ ವಂಶಿತ್ ಬಳ್ಳಡ್ಕ ಹಾಗೂ ರೇಗನ್ ಹೊಸಳಿಕೆ ಇವರನ್ನು ಸರ್ವರ ಒಮ್ಮತದ ಮೇರೆಗೆ ಆಯ್ಕೆ ಮಾಡಲಾಯಿತು. ನಿರ್ದೇಶಕರಾಗಿ ಭಗತ್ ದೇರಾಜೆ, ಮೋಹಿತ್ ಬೊಮ್ಮೆಟ್ಟಿ, ಗಂಗಾಧರ ಗುಂಡಿಗದ್ದೆ, ರಂಜಿತ್ ಬೊಮ್ಮೆಟ್ಟಿ, ವಿನ್ಯಾಸ್ ಪಾರೆಮಜಲು, ದುಷ್ಯಂತ್ ಶೀರಡ್ಕ, ಶವೇಣುಗೋಪಾಲ ಶೀರಡ್ಕ, ರಕ್ಷಿತ್ ಶೀರಡ್ಕ ಇವರನ್ನು ಆಯ್ಕೆ ಮಾಡಲಾಯಿತು. 

ಗೌರವ ಸಲಹೆಗರರಾದ ವಿನಯ್ ಕುಮಾರ್ ಮುಳುಗಾಡು, ಕರುಣಾಕರ ಪಾರೆಪ್ಪಾಡಿ, ಲೋಹಿತ್ ಬಾಳಿಕಳ, ಧನ್ಯಕುಮಾರ್ ದೇರ್ಮಜಲು ಇವರುಗಳ ಉಪಸ್ಥಿತಿಯೊಂದಿಗೆ ಸದಸ್ಯರಾಗಿ ಸುಯೋಗ್ ವಾಲ್ತಾಜೆ, ಮನ್ವಂತ್ ಗೋಳ್ಯಾಡಿ, ಮನ್ಮಥ ಅಂಬೆಕಲ್ಲು, ಸುಪ್ರೀತ್ ಶೀರಡ್ಕ, ಗಗನ್ ನಡುಬೆಟ್ಟು, ವಿಪಿನ್ ಮಡಪ್ಪಾಡಿ, ಶ್ರೀಕಾಂತ್ ಪೆರ್ನಾಜೆ, ಜೀವಿತ್ ಪಾರೆಪ್ಪಾಡಿ, ಲಿಖಿತ್ ಕರಂಗಲಡ್ಕ, ಶೇಷಪ್ಪ ಶೆಟ್ಟಿಮಜಲು, ತೇಜಕುಮಾರ, ಸುದರ್ಶನ ಕಾಯರ,ಸುಜಿತ್ ಕಾಯರ, ಸುಬ್ರಮಣ್ಯ ಕರಂಗಲಡ್ಕ, ಯಶ್ವಿತ್ ಬೊಮ್ಮೆಟ್ಟಿ ಹಾಗೂ ಪೂರ್ಣೇಶ್ ಬೊಮ್ಮಟ್ಟಿಯವರನ್ನು ಆಯ್ಕೆ ಮಾಡಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading