ಜಾಲ್ಸೂರು ತಾ. ಪಂ. ವ್ಯಾಪ್ತಿಯ ಕಾಂಗ್ರೆಸ್ ಬಿ. ಎಲ್. ಎ -2 ಮತ್ತು ಕಾರ್ಯಕರ್ತರಿಗೆ ಎಸ್.ಐ.ಆರ್ ತರಬೇತಿ ಕಾರ್ಯಾಗಾರ

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಾಲ್ಸೂರು ತಾಲೂಕು ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕನಕಮಜಲು ಮತ್ತು ಜಾಲ್ಸೂರು ಗ್ರಾಮಗಳ ಬಿ.ಎಲ್.ಎ2 ಹಾಗೂ ಪಕ್ಷದ ಮುಖಂಡರುಗಳು, ಕಾರ್ಯಕರ್ತರಿಗೆ ಎಸ್.ಐ.ಆರ್ ಕುರಿತು ಮಾಹಿತಿ ಹಾಗೂ ತರಬೇತಿ ಕಾರ್ಯಾಗಾರ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯ ವಿಜಯಕುಮಾರ್ ನರಿಯೂರು ಅವರ ಮನೆಯಲ್ಲಿ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರು ಹಾಗೂ ಬಿ.ಎಲ್.ಎ2ಗಳನ್ನು ಒಳಪಡಿಸಿ ತರಬೇತಿ ನೀಡಲಾಯಿತು. ಮುಖ್ಯ ತರಬೇತುದಾರರಾಗಿ ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ ಜೆ ಹಾಗೂ ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿ ಶಂಕರ್ ಕಲ್ಮಡ್ಕ ಎಸ್.ಐ.ಆರ್ ಕುರಿತು ಪೂರ್ವ ಸಿದ್ಧತೆಗಳ ಕುರಿತು ತರಬೇತಿ ಹಾಗೂ ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸದಸ್ಯ ಹಾಗೂ ಸುಳ್ಯ ಭೂನ್ಯಾಯ ಮಂಡಳಿ ಸದಸ್ಯ ಮಹಮ್ಮದ್ ಫವಾಜ್ ಸ್ವಾಗತಿಸಿದರು. ಸಭೆಯಲ್ಲಿ ಸುಳ್ಯ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರು, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಬಾಳಾಜೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಇಕ್ಬಾಲ್ ಸುಣ್ಣಮೂಲೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯ ಪುರುಷೋತ್ತಮ ನಂಗಾರು, ಹೇಮಚಂದ್ರ ಕುತ್ಯಾಳ, ಬಿ.ಎಲ್.ಎ2ಗಳಾದ ಸುಮತಿ ಹುಲಿಮನೆ, ಚೆನ್ನಕೇಶವ ಜಾಲ್ಸೂರು, ಶಿವರಾಮ, ವಿಜಯಕುಮಾರ್, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಮಧುಕರ ಬುಡ್ಲೆಗುತ್ತು, ಹರಿಪ್ರಕಾಶ್ ಅಡ್ಕಾರು, ವಿನೋದ್ ಕುಮಾರ್ ಜಾಲ್ಸೂರು, ಮಹಮ್ಮದ್ ಹಸನ್ ಕನಕಮಜಲು, ಮಹಮ್ಮದ್ ಹುಸೇನ್ ಕನಕಮಜಲು, ಮಹಮ್ಮದ್ ಪಂಜಿಗುಂಡಿ, ಅಬ್ದುಲ್ ಕುಂಞಿ, ಇಬ್ರಾಹಿಂ, ಬಾಪು ಪೆತ್ತಡ್ಕ, ಅನಿಲ್, ಖಾದರ್, ರಫೀಕ್ ಪಿ., ಅಶ್ರಫ್ ಬಿ.ಬಿ., ಲಕ್ಷ್ಮೀ, ಚಂದ್ರಾವತಿ, ಮುತ್ತಮ್ಮ, ಕಮಲ, ಸುಮಿತ್ರಾ, ಮಾಯಿಲು, ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದು ಮಾಹಿತಿ ಪಡೆದುಕೊಂಡರು.

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading