ಅಲ್ಪಸಂಖ್ಯಾತರ ಸಹಕಾರಿ ಸಂಘದ ಭವಿಷ್ಯ ನಿಧಿ ಯೋಜನೆಗಳಿಗೆ ಸುಳ್ಯ ಗ್ರೀನ್ ವ್ಯೂ ಶಾಲೆಯಲ್ಲಿ ಚಾಲನೆ – ವಿದ್ಯಾರ್ಥಿ ದಿಶೆ ಯಿಂದಲೇ ಆರ್ಥಿಕ ಸಾಕ್ಷರತೆಯಿಂದ ಉಜ್ವಲ ಭವಿಷ್ಯ : ಕೆ. ಎಂ. ಮುಸ್ತಫ

. . . . . . . . .

. . . . . . .

ಶಿಕ್ಷಕರ ಮತ್ತು ವಿದ್ಯಾರ್ಥಿ ಗಳ ಭವಿಷ್ಯ ನಿಧಿ ಯೋಜನೆಗಳಿಗೆ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು.
ಅಲ್ಪ ಸಂಖ್ಯಾತರ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರಿ ಸಂಘದ ವತಿಯಿಂದ ಪ್ರಾರಂಭ ಗೊಂಡ ಈ ನೂತನ ಯೋಜನೆಗೆ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಚಾಲನೆ ನೀಡಿದರು
ನಂತರ ಮಾತನಾಡಿದ ಅವರು ಎಲ್ಲಾ ವಿದ್ಯಾರ್ಥಿ ಗಳು ಮತ್ತು ಶಿಕ್ಷಕರು ಈ ಭವಿಷ್ಯ ನಿಧಿ ಯ ಸೇರ್ಪಡೆಗೊಂದು ಪ್ರಯೋಜನ ಪಡೆದುಕೊಳ್ಳಬೇಕು ವಿದ್ಯಾರ್ಥಿ ಗಳಿಗೆ ಉಳಿತಾಯ ಮನೋಭಾವನೆ ಚಿಕ್ಕ ಪ್ರಾಯದಿಂದಲೇ ಬಂದರೆ ಆರ್ಥಿಕ ಸಾಕ್ಷರತೆ ಸಾಧ್ಯ ಎಂದರು
ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಗ್ರೀನ್ ವ್ಯೂ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಪದಾಧಿಕಾರಿಗಳಾದ ಕೆ. ಎಸ್. ಉಮ್ಮರ್, ಶಾಫಿ ಕುತ್ತಾಮೊಟ್ಟೆ, ಎಸ್. ಎಂ. ಹಮೀದ್, ಡಾ. ರಿಜ್ವಾನ್, ಭಾಗವಹಿಸಿದ್ದರು
ಸಹಕಾರಿ ಸಂಘದ ನಿರ್ದೇಶಕರುಗಳಾದ ಜಾರ್ಜ್ ಡಿ ‘ಸೋಜಾ, ಮುಹಿಯದ್ದೀನ್ ಫ್ಯಾನ್ಸಿ, ಅಮೀನ ಜಯನಗರ, ಮೊದಲಾದವರು ವೇದಿಕೆಯಲ್ಲಿದ್ದರು
ಸಂಘದ ಕಾರ್ಯ ನಿರ್ವಹಣಾಧಿಕಾರಿ ಪ್ರಜ್ವಲ್ ಸ್ವಾಗತಿಸಿ, ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಣ ವಂದಿಸಿದರು


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading