ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ
ಮಂಡೆಕೋಲು, ಸುಳ್ಯ
ಮೊ: 9591969197

ದಿನಾಂಕ : ಜೂನ್ 16, 2026
ವಾರ : ಮಂಗಳವಾರ

01) 🐏ಮೇಷರಾಶಿ : ಯಾವುದೂ ನಿಮಗೆ ಕಷ್ಟವಲ್ಲ, ಆದರೆ ಯಾಕೋ ತಿಳಿದಷ್ಟು ವೇಗದಿಂದ ಮುಂದೆ ಸಾಗಲಾರದು ಎಂಬ ತಳಮಳ ನಿಮ್ಮನ್ನು ಬಾಧಿಸುವುದು. ಆದರೆ ಪೂರ್ವ ತಯಾರಿ ಸೂಕ್ತವಾಗಿ ಮಾಡಿಕೊಂಡಲ್ಲಿ ನಿಶ್ಚಿತವಾದ ಗುರಿಯನ್ನು ತಲುಪುವಿರಿ. ಆದಾಯ ಖರ್ಚನ್ನು ಸೂಕ್ಷ್ಮವಾಗಿ ಪರಿಶೀಲಿಸಿ… ಗಮನಿಸಿ : ಇಂದು ಕೆಲವು ಘಟನೆಗಳು ನಿಮ್ಮನ್ನು ಭಾವಪರವಶನಾಗಿಸಬಹುದು… ಪರಿಹಾರ : ಸಂಜೆ ನವಗ್ರಹ ದೇವಸ್ಥಾನಕ್ಕೆ ಹೋಗಿ ಬನ್ನಿ.

. . . . . . . . .

02)🐂ವೃಷಭರಾಶಿ : ಕೋರ್ಟು ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವವು. ತೀರ್ಪು ಕೂಡಾ ನಿಮ್ಮ ಪರವಾಗಿ ಬರುವುದರಿಂದ ಮನಸ್ಸಿಗೆ ಸಂತಸವಾಗುವುದು. ಇದರಿಂದ ಒಳಿತನ್ನು ಕಾಣುವಿರಿ. ಪ್ರಯಾಣದಲ್ಲಿ ಎಚ್ಚರ ಇರಲಿ… ಗಮನಿಸಿ : ಹಣ್ಣು, ಐಸ್‌ಕ್ರೀಮ್, ಹೂವು ಹಾಗೂ ನೀರಿಗೆ ಸಂಬಂಧಿಸಿದ ವ್ಯಾಪಾರಿಗಳಿಗೆ ವಿಶೇಷ ಲಾಭವಾಗುವುದು… ಪರಿಹಾರ:-ಬಡವರಿಗೆ ಆಹಾರ ನೀಡಿ.

. . . . . . .

03)👥ಮಿಥುನ ರಾಶಿ : ಅವಸರದ ಕೆಲಸಗಳು ಅವ್ಯವಸ್ಥೆಯನ್ನು ಉಂಟು ಮಾಡುವುದು. ಯಾವಾಗಲೂ ಕ್ರಮಬದ್ಧವಾಗಿ ಯೋಚಿಸುವ ನೀವು ಇಂದೇಕೋ ತಾಳ್ಮೆಯನ್ನು ಕಳೆದು ಕೊಳ್ಳುವಿರಿ. ತಂದೆಯವರಿಗೆ ಅಗತ್ಯವಿದ್ದಲ್ಲಿ ಸಹಾಯ ಮಾಡಿ… ಗಮನಿಸಿ : ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಇಂದು ನಿಮ್ಮಆಜ್ಞೆಯನ್ನುತಿರಸ್ಕರಿಸಬಹುದು… ಪರಿಹಾರ : ನವಗ್ರಹ ಮಂತ್ರವನ್ನು ಪಠಿಸಿ.

04)🦀ಕಟಕ ರಾಶಿ : ಎಷ್ಟೆಲ್ಲಾ ಕನಸುಗಳನ್ನು ಕಾಣುವಿರಿ, ಆದರೆ ನನಸಾಗುವ ಘಟ್ಟ ತಲುಪಿದಾಗ ನಿಮಗೆ ನಿರಾಶೆ ಕಾಣುವುದು. ನಿಮಗೆ ಅನುಭವ ಇರುವ ಕೆಲಸವನ್ನು ಹುಡುಕಿ ಮಾಡಿದಲ್ಲಿ ಯಶಸ್ಸನ್ನು ಹೊಂದಲು ಸಹಕಾರಿಯಾಗುವುದು. ಗಟ್ಟಿಯಾದ ಮನೋಸ್ಥಿತಿ ರೂಪಿಸಿಕೊಳ್ಳಿ… ಗಮನಿಸಿ : ಖರೀದಿ/ಮಾರಾಟದ ವಿಷಯದಲ್ಲಿ ಜಾಗರೂಕರಾಗಿರಿ… ಪರಿಹಾರ : ನಿಮ್ಮ ಮನೆದೇವರ ಸ್ಮರಣೆ ಮಾಡಿ.

05)🦁ಸಿಂಹ ರಾಶಿ : ಕೆಲವು ಅಪರೂಪದ ಶಕ್ತಿ, ಸಾಹಸ, ಪ್ರತಿಭೆಗಳನ್ನು ನೀವು ಹೊಂದಿರುವುದರಿಂದ ಅವೆಲ್ಲವೂ ನಿಮ್ಮ ಉಪಯೋಗಕ್ಕೆ ಬರುತ್ತವೆ, ಇದರಿಂದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗುವಿರಿ. ಮನಸ್ತಾಪ ಮತ್ತು ಜಗಳಗಳಿಗೆ ಈ ದಿನ ಅವಕಾಶ ಕೊಡದಿರಿ, ನಿಮ್ಮ ಮೇಲೆ ಸುಳ್ಳು ಆಪಾದನೆಗಳು ಬರುವ ಸಾಧ್ಯತೆ ಇದೆ… ಗಮನಿಸಿ : ಈ ದಿನ ಆಹಾರ ಸೇವನೆಯಲ್ಲಿ ಜಾಗ್ರತೆ ಇರಲಿ… ಪರಿಹಾರ : ಶ್ರೀ ಆಂಜನೇಯ ಸ್ವಾಮಿಯ ಮಂತ್ರವನ್ನು ಪಠಿಸಿ.

06) 👩‍🦳ಕನ್ಯಾ ರಾಶಿ : ಶ್ರಮಪಟ್ಟರೆ ಕೆಲವು ಸಿದ್ಧಿಗಳನ್ನು ಸಂಪಾದಿಸಿಕೊಳ್ಳಲು ಈಗ ನಿಮಗೆ ದೈವಾನುಕೂಲವಿದೆ. ನಿಮ್ಮ ಮಾತುಗಳನ್ನು ನಿಯಂತ್ರಿಸಿಕೊಳ್ಳಿ. ಸಂಕಲ್ಪಿತ ಗುರಿ ಈಡೇರಿಸಿಕೊಳ್ಳುವವರೆಗೂ ನಿಮ್ಮ ಯೋಜನೆಗಳನ್ನು ಅನ್ಯರ ಬಳಿಯಲ್ಲಿ ಬಹಿರಂಗಗೊಳಿಸದಿರಿ… ಗಮನಿಸಿ : ಈ ದಿನ ನಿಮ್ಮ ಬಂಧುಮಿತ್ರರೊಂದಿಗೆಸಂಬಂಧ ಉತ್ತಮಗೊಳ್ಳುತ್ತದೆ… ಪರಿಹಾರ : ಶಿವಪಂಚಾಕ್ಷರಿ ಮಂತ್ರ ಪಠಿಸಿ.

07)⚖️ತುಲಾ ರಾಶಿ : ಶತ್ರುಗಳು ನಿಮ್ಮ ಯೋಜನೆ ತಿಳಿಯಲು ಪ್ರಯತ್ನಿಸುವರು. ಹಾಗಾಗಿ ನೀವು ನಿಮ್ಮ ಮನೆಯ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವನ್ನು ತಂದುಕೊಳ್ಳದಿರಿ. ಮತ್ತು ಮನೆಯ ಗುಟ್ಟನ್ನು ಹೊರಗೆ ಹಾಕದಿರಿ. ಕೆಲಸ ಮಾಡುವಾಗ ಗಾಯಗೊಳ್ಳುವ ಸಂಭವವಿದೆ… ಗಮನಿಸಿ : ಹಣ ಕಾಸಿನ ವಿಷಯದಲ್ಲಿ ಜಾಗ್ರತೆ ವಹಿಸಿ… ಪರಿಹಾರ : ಶ್ರೀ ವೀರಭದ್ರ ಸ್ವಾಮಿಯನ್ನು ಪೂಜಿಸಿ.

08)🦂ವೃಶ್ಚಿಕ ರಾಶಿ : ಮನಸ್ಸನ್ನು ಗೊಂದಲ ಮಾಡಿಕೊಂಡು ಕಾರ್ಯ ಪ್ರವೃತ್ತರಾದಲ್ಲಿ ಯಶಸ್ಸು ದೊರೆಯುವುದು ನಿಧಾನವಾಗುವುದು. ಚಿಕ್ಕ ವಿಷಯಗಳಿಗೆ ಮನೆಯಲ್ಲೇ ಮನಸ್ತಾಪ ಭುಗಿಲೇಳುವ ಸಾಧ್ಯತೆ ಇದೆ… ಗಮನಿಸಿ : ಆಹಾರ ಸೇವನೆಯ ಕಡೆಗೆ ವಿಶೇಷ ಗಮನ ಕೊಡಿ… ಪರಿಹಾರ : ಕುಲದೇವರ ಪ್ರಾರ್ಥನೆ ಮಾಡಿ.

09)🏹ಧನುಸ್ಸು ರಾಶಿ : ಮಕ್ಕಳ ವಿಚಾರಧಾರೆಗಳು ನಿಮ್ಮ ಮನಸಿಗೆ ಘಾಸಿ ಮಾಡುವ ಸಂಭವವಿದೆ. ಅವರಿಗೆ ಗುರು ಹಿರಿಯರ ಮೂಲಕ ಬುದ್ಧಿಮಾತನ್ನು ಹೇಳಿಸಿ. ಸಾಲ, ಆರ್ಥಿಕ ಬಂಡವಾಳ ಹೂಡಿಕೆ ಮತ್ತು ಖರೀದಿ/ಮಾರಾಟ ವ್ಯವಹಾರಗಳನ್ನು ಈ ದಿನ ಮಾಡದಿರಿ… ಗಮನಿಸಿ : ವಾಹನ ಚಾಲನೆ ಮಾಡುವಾಗ ಜಾಗ್ರತೆ ವಹಿಸಿ… ಪರಿಹಾರ : ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿ.

10)🐊ಮಕರ ರಾಶಿ : ಕಾರಣವಿಲ್ಲದೆ ಶತ್ರುಗಳ ಸಂಖ್ಯೆ ಜಾಸ್ತಿಯಾಗುವ ಸಂಭವವಿದೆ. ಆದರೆ ಅವರನ್ನು ನಿಗ್ರಹಿಸುವುದು ನಿಮ್ಮ ಕೈಯಲ್ಲಿಲ್ಲ ಎನ್ನುವ ಸತ್ಯವನ್ನು ಅರಿಯುವಿರಿ. ನಿಮಗೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದು ದೊಡ್ಡ ಸಮಸ್ಯೆಯಾಗಿ ಈ ದಿನ ಕಾಡಬಹುದು. ಈ ದಿನ ಶುಭ ವಾರ್ತೆಯೊಂದನ್ನು ಕೇಳುವಿರಿ… ಪರಿಹಾರ:-ಶ್ರೀ ದುರ್ಗಾ ದೇವಿಯನ್ನು ಪ್ರಾರ್ಥಿಸಿ.

11)⚱️ಕುಂಭ ರಾಶಿ : ಗ್ರಹಗತಿಗಳು ವಿಮುಖವಾಗಿರುವಾಗ ಸಣ್ಣ ಕೆಲಸವು ದೀರ್ಘಾವಧಿಯನ್ನು ತೆಗೆದುಕೊಳ್ಳುವುದು. ಇದಕ್ಕಾಗಿ ಆತಂಕ ಪಡದೆ ಕೆಲಸ ಆಗುವವರೆಗೂ ತಾಳ್ಮೆಯಿಂದ ಇರುವುದು ಒಳ್ಳೆಯದು. ಈ ದಿನ ಒಂದು ಅನಿರೀಕ್ಷಿತ ಸಂತೋಷಕರ ಘಟನೆ ನಿಮ್ಮ ಜೀವನದಲ್ಲಿ ನಡೆಯಬಹುದು… ಪರಿಹಾರ:-ಶನಿಯ ಮಂತ್ರವನ್ನು ಪಠಿಸಿ.

12)🐬ಮೀನ ರಾಶಿ : ನಿಮಗೆ ಒದಗಿದ ಅನೇಕ ಬಿಕ್ಕಟ್ಟುಗಳು ದೈವಕೃಪೆಯಿಂದ ಸಡಿಲಗೊಳ್ಳುವುವು. ಮತ್ತು ನಿಮ್ಮ ಬಹುದಿನದ ಬಯಕೆಗಳು ಗರಿಕೆದರಿ ಕುಣಿದಾಡುವುವು. ಸದ್ಯದರಲ್ಲೇ ಇನ್ನು ಹೆಚ್ಚು ಸಂತಸ ನೀಡುವ ವಾರ್ತೆಯನ್ನು ಕೇಳುವಿರಿ… ಗಮನಿಸಿ : ನಿಮ್ಮಜ್ಞಾನವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಿ… ಪರಿಹಾರ : ಗಣಪತಿಯ ಪ್ರಾರ್ಥನೆ ಮಾಡಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading