ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ಕೊಲ್ಲಮೊಗ್ರು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

ಸುಬ್ರಹ್ಮಣ್ಯದ ಡಾ.ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್(ರಿ.) ವತಿಯಿಂದ ಕೊಲ್ಲಮೊಗ್ರು ಅಂಗನವಾಡಿ ಕೇಂದ್ರದ 36 ಪುಟಾಣಿಗಳಿಗೆ ಸಮವಸ್ತ್ರಗಳನ್ನು ಜೂ.15 ಸೋಮವಾರದಂದು ಉಚಿತವಾಗಿ ನೀಡಲಾಯಿತು.

. . . . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ರವಿ ಕಕ್ಕೆಪದವು ಅವರು ಮಾತನಾಡುತ್ತಾ “ದೇವರು ನಮಗೆ ಐಶ್ವರ್ಯ, ಸಂಪತ್ತನ್ನು ನೀಡುವುದು ನಮ್ಮ ಖರ್ಚಿಗೆ ಎಷ್ಟು ಬೇಕೋ ಅಷ್ಟು ಇಟ್ಟುಕೊಂಡು ಉಳಿದದ್ದನ್ನು ಸಮಾಜಕ್ಕೆ ದಾನ ಮಾಡಿ ಎಂದು. ಇಂದು ಸಮಾಜದಲ್ಲಿ ಅದೆಷ್ಟೋ ದೊಡ್ಡ ದೊಡ್ಡ ಐಶ್ವರ್ಯವಂತರಿದ್ದಾರೆ, ಸಂಪತ್ ಭರಿತ ಉಳ್ಳವರಿದ್ದಾರೆ. ಆದರೆ ಕೊಡುವಂತಹ ಮನಸ್ಸು ಇರಬೇಕಾಗಿದೆ. ನಾನು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಲ್ಲಿ ಅರ್ಧಾಂಶಕ್ಕಿಂತಲೂ ಹೆಚ್ಚಿನ ಹಣವನ್ನು ಸಮಾಜ ಸೇವೆಗಾಗಿ ಕಳೆದ ಹಲವು ವರ್ಷಗಳಿಂದ ನೀಡುತ್ತಾ ಬಂದಿದ್ದೇನೆ. ಇದರಿಂದಾಗಿ ನನಗೆ ಹಾಗೂ ನನ್ನ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ಇದೆ ಹಾಗೂ ಸುಂದರ ಬದುಕನ್ನು ಕಟ್ಟಿಕೊಂಡಿದ್ದೇವೆ” ಎಂದರು. 

. . . . . . .

ಡಾ. ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಉಮೇಶ ಕೆ.ಎನ್, ಸುಬ್ರಹ್ಮಣ್ಯ- ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟೇಶ್ ಎಚ್.ಎಲ್ ಉಪಸ್ಥಿತರಿದ್ದು ರವಿ ಕಕ್ಕೆಪದವು ಅವರ ಸಮಾಜ ಸೇವಾ ಕಾರ್ಯಕ್ಕೆ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕಮಲ, ಅಂಗನವಾಡಿ ಶಿಕ್ಷಕಿ ಪುಷ್ಪಾವತಿ, ಸುಬ್ರಹ್ಮಣ್ಯದ ಕುಕ್ಕೆ ಶ್ರೀಆಟೋ ಚಾಲಕ ಮಾಲಕ ಸಂಘದ ಉಪಾಧ್ಯಕ್ಷ ಶರತ್, ಅಂಗನವಾಡಿ ಪೋಷಕರಾದ ಉಮೇಶ್, ಸುಬ್ರಹ್ಮಣ್ಯದ ರವಿ ಕುಮಾರಧಾರ, ಅಂಗನವಾಡಿ ಮಕ್ಕಳ ಪೋಷಕರು, ಅಂಗನವಾಡಿ ಸಹಾಯಕಿ ಉಪಸ್ಥಿತರಿದ್ದರು. 
ಸುಬ್ರಹ್ಮಣ್ಯ ಕುಕ್ಕೆಶ್ರೀ ಸೀನಿಯರ್ ಚೇಂಬರ್ ಸ್ಥಾಪಕಾಧ್ಯಕ್ಷ ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಅಂಗನವಾಡಿಯ ಶಿಕ್ಷಕಿ ಪುಷ್ಪಾವತಿ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading