ಬೆಳ್ಳಾರೆ: ಬೂಡು-ಉಪ್ಪಂಗಳ-ಪಾಠಾಜೆ ಕಾಂಕ್ರಿಟೀಕೃತ ರಸ್ತೆ ಸಂಚಾರಕ್ಕೆ ಮುಕ್ತ

ಬೆಳ್ಳಾರೆ ಗ್ರಾಮದ ಉಮಿಕ್ಕಳ  ವಾರ್ಡ್ ಸಂಖ್ಯೆ 143ರ ಬೂಡು-ಉಪ್ಪಂಗಳ-ಪಾಠಾಜೆಯನ್ನು ಸಂಪರ್ಕಿಸುವ  ಕಾಂಕ್ರಿಟೀಕಣಗೊಂಡ ರಸ್ತೆಯನ್ನು ಜೂ. 12ರಂದು ಬೆಳಿಗ್ಗೆ 7 ಘಂಟೆಗೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಸುಮಾರು 14 ವರುಷಗಳಿಂದ ಇದು ಮರು ಡಾಮರೀಕರಣಗೊಳ್ಳದೆ ಸಂಚಾರ ದುಸ್ತರವಾಗಿತ್ತು. ಈ ವಾರ್ಡಿನ ನಿವಾಸಿಗಳು ಸಂಬಂಧಪಟ್ಟವರಲ್ಲಿ ಹಲವು ವರುಷಗಳಿಂದ ತಮ್ಮ ಅಹವಾಲನ್ನು ಮಂಡಿಸುತ್ತಿದ್ದರು.
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಪಳ್ಳಿಮಜಲು ಮಸೀದಿಯ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಇಬ್ರಾಹಿಂ ಬೂಡು, ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯ ಪದಾಧಿಕಾರಿ ಸಂಜೀವ ಕಲಾಯಿ, ಬೆಳ್ಳಾರೆ ಬಿ.ಜೆ.ಪಿ. ಶಕ್ತಿ ಕೇಂದ್ರದ ಅಧ್ಯಕ್ಷ ಅಧ್ಯಕ್ಷ ದಿಲೀಪ್ ಗಟ್ಟಿಗಾರು, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ. ಭಟ್ ಕುರುಂಬುಡೇಲು, ಬೆಳ್ಳಾರೆ ಜೆ.ಸಿ.ಐ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಬೀಡು ಉಪಸ್ಥಿತರಿದ್ದರು.
ತೆಂಗಿನಕಾಯಿ ಒಡೆಯುವುದರ ಮೂಲಕ ಅತಿಥಿಗಳು ಈ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು. ಈ ವಾರ್ಡಿನ ನಿವಾಸಿಗಳು ಸ್ಥಳದಲ್ಲಿದ್ದರು. ರಸ್ತೆಯು ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯರವರ ಸಿ.ಎಮ್.ಐ.ಡಿ.ಪಿ. ಯೋಜನೆಯಡಿಯಲ್ಲಿ ರೂ. ಹತ್ತು ಲಕ್ಷ,ಎಸ್.ಸಿ.ಎಸ್.ಟಿ. ಅಭಿವೃದ್ಧಿ ಯೋಜನೆಯಡಿಯಲ್ಲಿ ರೂ. ಎಂಟು ಲಕ್ಷ ಹಾಗೂ ಮಲೆನಾಡು ಪರಿಹಾರ ಯೋಜನೆಯಡಿಯಲ್ಲಿ ರೂ 5.5 ಲಕ್ಷ ಹೀಗೆ ಒಟ್ಟು 23.5 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡಿದೆ. ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ಕಾರ್ಯಕ್ರಮದಲ್ಲಿ ಬೆಳ್ಳಾರೆ ಪ್ರಾ.ಕೃ.ಪ.ಸ.ಸಂ. ಅಧ್ಯಕ್ಷ ಆರ್.ಕೆ. ಭಟ್ ಕುರುಂಬುಡೇಲು ಸ್ವಾಗತಿಸಿ, ಬೆಳ್ಳಾರೆ ಬಿ.ಜೆ.ಪಿ. ಶಕ್ತಿ ಕೇಂದ್ರದ ಅಧ್ಯಕ್ಷ ದಿಲೀಪ್ ಗಟ್ಟಿಗಾರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಲ್ಲಿಸಿದರು.
ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading