ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಶಸ್ತ್ರಚಿಕಿತ್ಸಕರ ದಿನಾಚರಣೆ : ಗಿಡ ನೆಡುವ ಮೂಲಕ ಆರ್ಥಪೂರ್ಣ ಆಚರಣೆ

ಸುಳ್ಯ : ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ರಜತ ಮಹೋತ್ಸವದ ಅಂಗವಾಗಿ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ ವಿಶ್ವ ಶಸ್ತ್ರಚಿಕಿತ್ಸಕರ ದಿನವನ್ನು ಜೂನ್ 12 ಶುಕ್ರವಾರದಂದು ಆಚರಿಸಲಾಯಿತು.  
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸುಳ್ಯ ಅಧ್ಯಕ್ಷರು ಮತ್ತು ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕೆ.ವಿ.ಯ ಚಿದಾನಂದ ವಹಿಸಿ ಶುಭ ಹಾರೈಸಿದರು. 
ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಅಧೀಕ್ಷಕರಾದ ಡಾ.ಸಿ ರಾಮಚಂದ್ರ ಭಟ್ ಉಪಸ್ಥಿತರಿದ್ದರು. 
ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತನಾಡಿದ ಗಣ್ಯರು, ಶಸ್ತ್ರಚಿಕಿತ್ಸಕರ ಸೇವೆಯ ಮಹತ್ವವನ್ನು ವಿವರಿಸಿ, “ರೋಗಿಗಳ ಜೀವ ಉಳಿಸುವಲ್ಲಿ ಹಾಗೂ ಆರೋಗ್ಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶಸ್ತ್ರಚಿಕಿತ್ಸಕರ ಪಾತ್ರ ಅತ್ಯಂತ ಮಹತ್ತರವಾಗಿದೆ” ಎಂದು ಹೇಳಿದರು. ಈ ವರ್ಷದ ವಿಶ್ವ ಶಸ್ತ್ರಚಿಕಿತ್ಸಕರ ದಿನದ ಧ್ಯೇಯವಾಕ್ಯವಾದ “ಧೈರ್ಯ, ನಿಖರತೆ ಮತ್ತು ಕರುಣೆ” ಯನ್ನು ಪ್ರತಿಯೊಬ್ಬ ಶಸ್ತ್ರಚಿಕಿತ್ಸಕ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಶಸ್ತ್ರಚಿಕಿತ್ಸಕರ ಸೇವೆಯ ಮಹತ್ವವನ್ನು ಬಿಂಬಿಸುವ ಕಿರು ನಾಟಕವನ್ನು ಪ್ರದರ್ಶಿಸಿದರು. ಬಳಿಕ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಿತು. 
ಈ ಸಂದರ್ಭ ವೇದಿಕೆಯಲ್ಲಿ ಎ,ಒ,ಎಲ್.ಇ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಜಗದೀಶ್ ಅಡ್ತಲೆ, ಸರ್ಜರಿ ವಿಭಾಗ ಮುಖ್ಯಸ್ಥರಾದ ಪ್ರೊಪೆಸರ್ ಡಾ. ಗೋಪಿನಾಥ್ ಪೈ, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಪ್ರಾಂಶುಪಾಲರು ಡಾ ಪ್ರಮೋದ್ ಕೆ.ಜೆ, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋತೆರಪಿ ಪ್ರಾಂಶುಪಾಲರು ಡಾ ಮನೀಶ್, ಎಮರ್ಜೆನ್ಸಿ ಮೆಡಿಸಿನ್ ವಿಭಾಗ ಮುಖ್ಯಸ್ಥರು ಡಾ ಹೆರಾಲ್ಡ್ ಲಿವೀಸ್, ಒ.ಬಿ.ಜಿ ವಿಭಾಗ ಮುಖ್ಯಸ್ಥರು ಡಾ. ಗೀತಾ.ಜೆ ದೊಪ್ಪ, ಅನಸ್ತೇಷಿಯ ವಿಭಾಗ ಮುಖ್ಯಸ್ಥರು ಡಾ. ಬೀನಾ ರಾಣಿ, ಸರ್ಜರಿ ವಿಭಾಗದ ಪ್ರೊಫೆಸರ್ ಡಾ. ರಂಜಿತ್ ಕೆ.ಬಿ, ಅಸಿಸ್ಟೆಂಟ್ ಪ್ರೊಫೆಸರ್ ಡಾ. ಸಾಯಿ ಗೀತಾ ಜ್ಞಾನೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗ ಮುಖ್ಯಸ್ಥರು, ಪ್ರಾಧ್ಯಪಕರು ಸ್ನಾತಕೋತ್ತರ ವಿದ್ಯಾರ್ಥಿಗಳು ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading