ಅಮರ ಸುಳ್ಯ ದಂಗೆಯ ಇತಿಹಾಸ ತೆರೆಗೆ – “ಅಮರ ಸುಳ್ಯ-1837” ಚಲನಚಿತ್ರ ನಿರ್ಮಾಣಕ್ಕೆ ಚಾಲನೆ

ಸುಳ್ಯ, ಜೂ. 12: ಅಮರ ಸುಳ್ಯ ದಂಗೆಯ ಐತಿಹಾಸಿಕ ಘಟನೆಯನ್ನು ಆಧರಿಸಿದ “ಅಮರ ಸುಳ್ಯ-1837” ಎಂಬ ಪೂರ್ಣ ಪ್ರಮಾಣದ ಚಲನಚಿತ್ರ ನಿರ್ಮಾಣಕ್ಕೆ ಅಮರ ಸುಳ್ಯ-1837 ಮೆಮೋರಿಯಲ್ ಟ್ರಸ್ಟ್ (ರಿ.), ಸುಳ್ಯ ಮುಂದಾಗಿದೆ ಎಂದು ಸಾಹಿತಿ ಕೆ.ಆರ್. ತೇಜಕುಮಾರ್ ತಿಳಿಸಿದ್ದಾರೆ.

. . . . . . . . .

ನಗರದ ಪತ್ರಿಕಾ ಭವನದಲ್ಲಿ ಜೂ. 12ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮರ ಸುಳ್ಯ ದಂಗೆಯು ಜಾಗತಿಕ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಘಟನೆಯಾಗಿದ್ದು, ಅದರ ಕುರಿತು ಹಲವು ಪುಸ್ತಕಗಳು ಮತ್ತು ಲೇಖನಗಳು ಪ್ರಕಟವಾಗಿವೆ. ಆದರೆ ದೃಶ್ಯ ಮಾಧ್ಯಮದ ಮೂಲಕ ಈ ಐತಿಹಾಸಿಕ ಘಟನೆಯನ್ನು ಜನರಿಗೆ ತಲುಪಿಸುವ ಪ್ರಯತ್ನ ಇದುವರೆಗೆ ನಡೆದಿಲ್ಲ. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಚಲನಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.

. . . . . . .

ಟ್ರಸ್ಟ್‌ನ ಕಾರ್ಯದರ್ಶಿ ಎ.ಕೆ. ಹಿಮಕರ ಮಾತನಾಡಿ, ಸಾಹಿತ್ಯಿಕ ಹಾಗೂ ಚಾರಿತ್ರಿಕ ಮಹತ್ವ ಹೊಂದಿರುವ ಈ ಚಲನಚಿತ್ರಕ್ಕೆ ಚಲನಚಿತ್ರ ಮಂಡಳಿಯ ಅನುಮೋದನೆ ದೊರೆತಿದೆ. ಅಮರ ಸುಳ್ಯ ದಂಗೆಯು ಸುಳ್ಯದ ಜನರು ಹೆಮ್ಮೆಪಡುವ ಹೋರಾಟವಾಗಿದ್ದು, ಅದರ ನೈಜ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಲಾತ್ಮಕವಾಗಿ ಚಿತ್ರಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಚಿತ್ರದ ನಿರ್ದೇಶಕ ಹಾಗೂ ಟ್ರಸ್ಟ್ ಸದಸ್ಯ ಜಾನ್ ದೇವರಾಜ್ ಮಾತನಾಡಿ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಮರ ಸುಳ್ಯ ದಂಗೆಯ ಘಟನೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗುವುದು. ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದ್ದು, ಸುಳ್ಯ ಭಾಗದ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಈ ಚಿತ್ರವು ಐತಿಹಾಸಿಕ ಘಟನೆಯನ್ನು ಪ್ರೇಕ್ಷಕರ ಮುಂದೆ ಜೀವಂತವಾಗಿ ಮರುಸೃಷ್ಟಿಸಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ “ಅಮರ ಸುಳ್ಯ-1837” ಚಲನಚಿತ್ರದ ಪೋಸ್ಟರ್‌ನ್ನು ಅನಾವರಣಗೊಳಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಮಿಥುನ್ ಕುಮಾರ್ ಸೋನ ಹಾಗೂ ಟ್ರಸ್ಟ್ ಸದಸ್ಯ ಡಾ. ಕೆ.ಆರ್. ವಿದ್ಯಾಧರ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading