ಪೆರುವಾಜೆಯಲ್ಲಿ ಶಿಥಿಲಗೊಂಡ ಕಾಲು ಸೇತುವೆ – ನೂತನ ಸೇತುವೆಗೆ ನಿರ್ಮಾಣಕ್ಕೆ ಸಾರ್ವಜನಿಕರ ಮನವಿ

ಸುಳ್ಯದ ಪೆರುವಾಜೆ ಗ್ರಾಮದ ಸಾರಕೆರೆ, ಬೋರಡ್ಕ,ಬೇರ್ಯ ಸಂಪರ್ಕಿಸುವ ಕಾಲುಸೇತುವೆಯು ಶಿಥಿಲಾವಸ್ಥೆಗೆ ತಲುಪಿದ್ದು, ಮುರಿದು ಬೀಳಲು ತಯಾರಾಗಿದೆ. ಇಲ್ಲಿ ನೂತನ ಕಾಲುಸೇತುವೆ ನಿರ್ಮಿಸಿ ಕೊಡಲು ಜನತೆ ಬೇಡಿಕೆ ಮುಂದಿಟ್ಟಿದ್ದಾರೆ. ಸುಮಾರು ಎಪ್ಪತ್ತು ಮನೆಗಳು ಈ ಕಾಲು ಸೇತುವೆಯನ್ನು ಬಳಸುತ್ತಿದ್ದಾರೆ. ಸುಮಾರು ಮೂವತ್ತೈದು ವರುಷಗಳ ಹಿಂದೆ ನಿರ್ಮಾಣಗೊಂಡ ಕಾಲುಸೇತುವೆ ಇದಾಗಿದ್ದು, ಮಳೆಗಾಲದಲ್ಲಿ ಮುಳುಗಡೆಯಾಗುತ್ತದೆ ಮತ್ತು ಈ ಮಳೆಗಾಲದಲ್ಲಿ ಕೊಚ್ಚಿ ಹೋಗುವ ಅಪಾಯವನ್ನು ಎದುರಿಸುತ್ತಿದೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಎರಡು ವರುಷಗಳ ಹಿಂದೆ ಇಲ್ಲಿಗೆ ಭೇಟಿ ನೀಡಿ ಈ ಕಾಲುಸೇತುವೆಯನ್ನು ವೀಕ್ಷಿಸಿದ್ದರು. ಆದರೆ ಇಲ್ಲಿ ಆಗಲೇಬೇಕಾದ ಕಾಲುಸೇತುವೆ ಇನ್ನೂ ನಿರ್ಮಾಣಗೊಂಡಿಲ್ಲ ಎಂದು ಸಾರ್ವಜನಿಕರು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಶಾಲಾ,ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಈ ಸೇತುವೆಯನ್ನು ಬಳಸಿ ಸಾಗುತ್ತಿದ್ದು ಈಗ ಮೂರೂವರೆ ಕಿ.ಮಿ ಸುತ್ತು ಬಳಸಿ ಕೊಡಿಯಾಲ ಗ್ರಾಮದ ಕಲ್ಪತ್ತಬೈಲು ಮೂಲಕ ಸಾಗಬೇಕಾಗಿದೆ. ಈ ಕಾಲುಸೇತುವೆಯ ಆರಂಭದಿಂದಲೇ ತಡೆಬೇಲಿ ರಹಿತವಾಗಿತ್ತು. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕಾಲುಸೇತುವೆಯ ಫಲಾನುಭವಿಗಳು ಒತ್ತಾಯಿಸಿದ್ದಾರೆ. (ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading