ಬಿಜೆಪಿ ಸುಳ್ಯ ಮಂಡಲದ ವತಿಯಿಂದ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಮತ್ತು ಸಂಘಟನಾತ್ಮಕ ಸಭೆ

ಬಿಜೆಪಿ ಸುಳ್ಯ ಮಂಡಲದ ವತಿಯಿಂದ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಮತ್ತು ಸಂಘಟನಾತ್ಮಕ ಸಭೆ ಹಾಗೂ BLA-2 ಗಳಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮವು ಜೂ.09 ಮತ್ತು 10 ರಂದು ಸುಳ್ಯ ವಿಧಾನ ಸಭಾಕ್ಷೇತ್ರದ ವಿವಿಧ ಕಡೆಗಳಲ್ಲಿ ನಡೆಯಿತು.
ಜೂ.09ರಂದು ಕೊಯಿಲ ಮಹಾಶಕ್ತಿ ಕೇಂದ್ರದ ಸಭೆಯು ಗೊಳಿತೊಟ್ಟು ಸಿದ್ದಿವಿನಾಯಕ ಸಭಾಂಗಣದಲ್ಲಿ, ಕಡಬ ಮಹಾಶಕ್ತಿ ಕೇಂದ್ರದ ಸಭೆಯ ಕೋಡಿಂಬಾಳ ಭಜನಾಮಂದಿರದಲ್ಲಿ, ಸುಬ್ರಹ್ಮಣ್ಯ ಮಹಾಶಕ್ತಿ ಕೇಂದ್ರದ ಸಭೆಯು ಕೈಕಂಬ ಭಜನಾ ಮಂದಿರದಲ್ಲಿ, ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ಸಭೆಯು ಕಾಣಿಯೂರು ಭಜನಾ ಮಂದಿರದಲ್ಲಿ ನಡೆಯಿತು .ಜೂ.10ರಂದು ಬೆಳ್ಳಾರೆ ಮಹಾಶಕ್ತಿ ಕೇಂದ್ರ ಸಭೆಯು ಜೆ.ಡಿ ಹಾಲ್ ಪೆರುವಾಜೆಯಲ್ಲಿ, ಜಾಲ್ಸೂರು ಮಹಾಶಕ್ತಿ ಕೇಂದ್ರ ಮತ್ತು ಸುಳ್ಯ ನಗರದ ಸಭೆಯು ಪಕ್ಷದ ಕಛೇರಿಯಲ್ಲಿ, ಗುತ್ತಿಗಾರು ಮಹಾಶಕ್ತಿ ಕೇಂದ್ರದ ಸಭೆಯು ಜ್ಞಾನದೀಪ ಎಲಿಮಲೆಯಲ್ಲಿ ನಡೆಯಿತು.
ಸಭೆಯಲ್ಲಿ ಎಸ್.ಐ.ಆರ್ ಗೆ ಸಂಬಂಧಿಸಿದ ವಿಚಾರಗಳಿಗೆ ಹಾಗೂ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ವಿವಿಧ ಜವಾಬ್ದಾರಿಗಳಿಗೆ ಕಾರ್ಯಕರ್ತರನ್ನು ನೇಮಿಸಲಾಯಿತು. 
ಈ ಸಂದರ್ಭದಲ್ಲಿ ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಹಾಗೂ ಸುಳ್ಯ ಮಂಡಲ ಉಸ್ತುವಾರಿ ಪ್ರಸನ್ನ ಮಾರ್ತ, ಜಿಲ್ಲಾ ಉಪಾಧ್ಯಕ್ಷ ರಾಕೇಶ ರೈ ಕೆಡೆಂಜಿ, ಜಿಲ್ಲಾ ಕಾರ್ಯದರ್ಶಿ ಪುಷ್ಪಮೇದಪ್ಪ, ವಿಕಸಿತ ಭಾರತ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಹರೀಶ್ ಕಂಜಿಪಿಲಿ, ಪ್ರಕೋಷ್ಠಗಳ ಜಿಲ್ಲಾ ಸಂಚಾಲಕ ಸುಧೀರ್ ಶೆಟ್ಟಿ, ಸಹಾ ಸಂಚಾಲಕ ಪ್ರಸನ್ನ ದರ್ಬೆ, ಜಿಲ್ಲಾ ಎಸ್.ಟಿ ಮೊರ್ಚಾ ಪ್ರಧಾನ ಕಾರ್ಯದರ್ಶಿ ಪೂವಪ್ಪ ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಕಾರ್ಯದರ್ಶಿ ಶಿವಪ್ರಸಾದ್, ತೇಜಸ್ವಿನಿ ಕಟ್ಟಪುಣಿ, ಮಹಿಳಾ ಮೊರ್ಚಾದ ಅಧ್ಯಕ್ಷೆ ಇಂದಿರಾ ಬಿ.ಕೆ, ಎಸ್.ಟಿ ಮೊರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಮಹಾಶಕ್ತಿ ಕೇಂದ್ರದ ,ಶಕ್ತಿ ಕೇಂದ್ರ ಪ್ರಮುಖರು,ಬಿ.ಎಲ್.ಎ-2ಗಳು ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading