ಸುದೀರ್ಘ ದಿನಗಳು ಪ್ರಧಾನಿಯಾಗಿ ನರೇಂದ್ರ ಮೋದಿ ಸೇವೆ – ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಪೆರುವಾಜೆ ದೇಗುಲದಲ್ಲಿ ವಿಶೇಷ ಪೂಜೆ

ಭಾರತದ ಪ್ರಧಾನಮಂತ್ರಿಯಾಗಿ ಸತತ 4,399 ದಿನಗಳ ಕಾಲ ನಿರಂತರವಾಗಿ ಜನಸೇವೆ ಸಲ್ಲಿಸಿ ಐತಿಹಾಸಿಕ ದಾಖಲೆ ನಿರ್ಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಸುಳ್ಯದ ಬಿಜೆಪಿ ಮಂಡಲ ಸಮಿತಿ ವತಿಯಿಂದ ಪೆರುವಾಜೆ ಜಲದುರ್ಗಾ ದೇವಸ್ಥಾನದಲ್ಲಿ ವಿಶೇಷ ಪೂಜೆ,ಹಾಗೂ ಮಹಾಮಂಗಳಾರತಿಯನ್ನು ಜೂ‌.10ರಂದು ಸಲ್ಲಿಸಲಾಯಿತು.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸತತ 4398 ದಿನಗಳ ಆಡಳಿತದ ದಾಖಲೆಯನ್ನು ದಾಟಿ, ಅತ್ಯಂತ ದೀರ್ಘಾವಧಿಗೆ ಸತತವಾಗಿ ದೇಶ ಮುನ್ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಈ ಐತಿಹಾಸಿಕ ಸಾಧನೆಯನ್ನು ಸಂಭ್ರಮಿಸಲು ಮತ್ತು ಅವರ ಮುಂದಿನ ಜನಸೇವೆಯ ಪಥಕ್ಕೆ ಶಕ್ತಿ ತುಂಬಲು ಈ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷ ಪ್ರಾರ್ಥನೆ ಹಾಗೂ ಪೂಜೆಯು ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ, ಆಯುಷ್ಯ ವೃದ್ಧಿಗಾಗಿ ಮತ್ತು ದೇಶವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಲು ಅವರಿಗೆ ಭಗವಂತನು ಹೆಚ್ಚಿನ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನಕಾರ್ಯದರ್ಶಿ ವಿನಯ್ ಕಂದಡ್ಕ, ಜಿಲ್ಲಾ ಉಪಾಧ್ಯಕ್ಷ ರಾಕೇಶ ರೈ ಕೆಡೆಂಜಿ, ಜಿಲ್ಲಾ ಕಾರ್ಯದರ್ಶಿ ಪುಷ್ಪಮೇದಪ್ಪ, ಬೆಳ್ಳಾರೆ ಮಹಾಶಕ್ತಿ ಕೇಂದ್ರ ಪ್ರಮುಖ ಅಜಿತ್ ಕಿಲ್ಲಂಗೋಡಿ, ಕಾರ್ಯದರ್ಶಿ ಶಿವಪ್ರಸಾದ್ ನಡುತೋಟ, ಚಂದ್ರಶೇಖರ ಪನ್ನೆ, ಯುವಮೊರ್ಚಾ ಸದಸ್ಯ ಹರ್ಷಿತ್ ಪೆರುವಾಜೆ, ಪದ್ಮನಾಭ ಶೆಟ್ಟಿ ಪೆರುವಾಜೆ, ಕುಶಾಲಪ್ಪ ಮುಕ್ಕೂರು, ರಮೇಶ, ವಿಜಯ್, ವೆಂಕಟಕೃಷ್ಣ ರಾವ್, ಪೂರ್ಣಿಮಾ, ಪದ್ಮನಾಭ ಕಲಾಸುಮ, ಪ್ರಸಾದ್ ಕಾಟೂರು ಹಾಗೂ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading