ಕುಕ್ಕೆ ದೇವಳದ ಭದ್ರತಾ ಸಿಬ್ಬಂದಿಗಳಿಗೆ ಉಚಿತ ಕೊಡೆ ವಿತರಣೆ

ಸುಬ್ರಹ್ಮಣ್ಯ ಜೂನ್ 10 : ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷ ಗೋಪಾಲ ಎಣ್ಣೆಮಜಲು ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 50 ಭದ್ರತಾ ಸಿಬ್ಬಂದಿಗಳಿಗೆ ಸೋಮವಾರ ಉಚಿತವಾಗಿ ಕೊಡೆಗಳನ್ನು ವಿತರಣೆ ಮಾಡಿದರು. ಭದ್ರತಾ ಸಿಬ್ಬಂದಿಯವರು ಹಗಲು ರಾತ್ರಿ ಎನ್ನದೆ ಶಿಫ್ಟ್ ನಲ್ಲಿ ಮಳೆಗಾಲ, ಬೇಸಿಗೆಗಾಲಗಳಲ್ಲಿ ಭಕ್ತಾದಿಗಳ ಸರತಿ ಸಾಲು, ವಾಹನ ಪಾರ್ಕಿಂಗ್, ದೇವಳದ ಹೊರಾಂಗಣದ ಭದ್ರತೆ, ಸುತ್ತುಮುತ್ತಲ ಪ್ರದೇಶಗಳಲ್ಲಿ ಶ್ರೀ ದೇವಳಕ್ಕೆ ಭದ್ರತೆಯನ್ನು ನೀಡುವ ಕೆಲಸವನ್ನು ಮಾಡಬೇಕಾಗುತ್ತದೆ. ಮಳೆಗಾಲದಲ್ಲಿ ಮಳೆಗೆ, ಬೇಸಿಗೆ ಕಾಲದಲ್ಲಿ ಬಿಸಿಲು, ಎನ್ನದೆ ನಿರಂತರವಾಗಿ ಸೇವೆ ಮಾಡುವ ಕೆಲಸ ಇವರಿದ್ದಾಗಿದ್ದು, ಇದನ್ನು ಮನಗಂಡ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಗೋಪಾಲ ಎಣ್ಣೆಮಜಲು ಅವರ ಮೂಲಕ ಕುಕ್ಕೆ ಶ್ರೀ ದೇವಳದ ಭದ್ರತಾ ಸಿಬ್ಬಂದಿಗಳನ್ನು ಗೌರವಿಸಿ ಅವರಿಗೆ ಕೊಡುಗೆ ರೂಪದಲ್ಲಿ ಕೊಡೆಗಳನ್ನು ನೀಡಲಾಯಿತು.ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷ ಜಯಪ್ರಕಾಶ್ ಸಭಾಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರೋಟರಿ ಜಿಲ್ಲೆ 3181 ವಲಯ ಐದರ ಅಸಿಸ್ಟೆಂಟ್ ಗವರ್ನರ್ ಅಬ್ದುಲ್ ರಜಾಕ್ ಕಭಾಕರ್, ಬಾಲಕೃಷ್ಣ ಪೈ, ವಲಯ ಸೇನಾನಿಗಳಾದ ವಿಜಯಕುಮಾರ್ ಅಮೈ, ಚಂದ್ರಶೇಖರ ನಾಯರ್, ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷ ರೋಹಿತ್ ಬಿ.ಬಿ, ಕಾರ್ಯದರ್ಶಿಗಳಾದ ಭವಾನಿಶಂಕರ ಪೈಲಾಜೆ, ಪ್ರಶಾಂತ ಕೋಡಿಬೈಲ್, ಪೂರ್ವ ಎ.ಜಿ ಆಸ್ಕರ್ ಆನಂದ್, ಡಾ. ರವಿ ಕಕ್ಕೆಪದವು, ರಾಮಕೃಷ್ಣ.ಎಂ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading