ಕಲ್ಲುಗುಂಡಿ : ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸಂಪಾಜೆ ವಲಯ ತ್ರೈಮಾಸಿಕ ಸಭೆ

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಸಂಪಾಜೆ ವಲಯದ ತ್ರೈಮಾಸಿಕ ಸಭೆಯನ್ನು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘ ಕಲ್ಲುಗುಂಡಿಯಲ್ಲಿ ಸಂಪಾಜೆ ವಲಯ ಭಜನಾ ಪರಿಷತ್ ಅಧ್ಯಕ್ಷರಾದ ಭಾರತಿ ಪುರುಷೋತ್ತಮ ಉಳುವಾರು ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ದೀಪ ಪ್ರಜ್ವಲನೆಯನ್ನು ಹಿರಿಯರಾದ ನಾರಾಯಣ ಭಟ್ ಕುಂದಲಕಾಡು ನೆರವೇರಿಸಿದರು.ಈ ಸಂದರ್ಭದಲ್ಲಿ ತಾಲೂಕುಭಜನಾ ಪರಿಷತ್ ಅಧ್ಯಕ್ಷರಾದ ಸೋಮಶೇಖರ್,ಪೈಕ, ಕಾರ್ಯದರ್ಶಿ ನಾರಾಯಣ ಅಜ್ಜಿಕಲ್ಲು, ಉಪಾಧ್ಯಕ್ಷರಾದ ಭಾರತಿ ಮೈರಾಜೆ, ಚಂದ್ರಶೇಖರ್ ಆಚಾರ್ಯ, ವಲಯ ಮೇಲ್ವಿಚಾರಕರಾದ ಹರೀಶ್, ಸೇವಾ ಪ್ರತಿನಿಧಿಗಳಾದ ಕಲ್ಪನಾ, ಜಯಲಕ್ಷ್ಮಿ ರಾಮಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷರಾ ರಾಜಗೋಪಾಲ, ಪದಾಧಿಕಾರಿಗಳಾದ ಶ್ರೀಧರ್ ದುಗ್ಗಳ, ನಾಗೇಶ್ ಬಾಚಿಗದ್ದೆ, ಪ್ರೇಮ್ ಕುಮಾರ್ , ಹಿರಿಯರಾದ ನಾರಾಯಣಭಟ್, ಒಕ್ಕೂಟದ ಅಧ್ಯಕ್ಷರಾದ ಈಶ್ವರ ಆಚಾರ್ಯ, ರಜನಿ ಶರತ್, ರಮ್ಯಾ ಬಾಲಚಂದ್ರ ಮತ್ತು ಭಜನಾ ಮಂಡಳಿಗಳ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು. 
ಈ ಸಂದರ್ಭದಲ್ಲಿ ಜುಲೈ ತಿಂಗಳಲ್ಲಿ(ಕಲ್ಲುಗುಂಡಿಯಲ್ಲಿ) ಹಣ್ಣಿನ ಗಿಡವನ್ನು ನೆಡುವುದರ ಮೂಲಕ ಉದ್ಘಾಟನೆಯನ್ನು ಪ್ರಾರಂಭಿಸಿ ಆರೋಗ್ಯ ಶಿಬಿರವನ್ನು ಆಯೋಜಿಸುವುದಾಗಿ ತೀರ್ಮಾನಿಸಲಾಯಿತು. ಜೊತೆಗೆ ಅಕ್ಟೋಬರ್ ತಿಂಗಳಲ್ಲಿ ಒಂದು ವಾರದ ಭಜನೆ ಹಾಗೂ ಕುಣಿತ ಭಜನೆ ಸಂಸ್ಕಾರ ತರಬೇತಿಯನ್ನು ನಡೆಸುವುದಾಗಿ ಚರ್ಚಿಸಿ ತೀರ್ಮಾನಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading