ಪುನರ್ ಪ್ರತಿಷ್ಠಾ ಕಲಶೋತ್ಸವ ಸಂಭ್ರಮದಲ್ಲಿ ಕಲ್ಕುಡ ದೈವಸ್ಥಾನ – ಭಕ್ತಾಧಿಗಳ ಸಹಕಾರದಿಂದ ಕೇವಲ 64 ದಿನದಲ್ಲಿ ಕಾಮಗಾರಿ ಪೂರ್ಣ – ಜೂ.15 ರಿಂದ 18 ರವರೆಗೆ ಕಲ್ಕುಡ, ಕಲ್ಲುರ್ಟಿ ಹಾಗೂ ಗುಳಿಗ ದೈವದ ಪ್ರತಿಷ್ಠೆ ಕಾರ್ಯಕ್ರಮ

ಸುಳ್ಯದ ಕಾರ್ಣಿಕ ಕ್ಷೇತ್ರವಾಗಿರುವ ಶ್ರೀ ಕಲ್ಕುಡ ದೈವಸ್ಥಾನ ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ನವೀಕೃತಗೊಂಡು ಸುಂದರವಾದ ಶಿಲಾಮಯ ಗುಡಿ ನಿರ್ಮಾವಾಗಿದೆ. ಜೂ.15 ರಿಂದ 18 ರವರೆಗೆ ಕಲ್ಕುಡ, ಕಲ್ಲುರ್ಟಿ ಹಾಗೂ ಗುಳಿಗ ದೈವದ ಪುನರ್ ಪ್ರತಿಷ್ಠಾ ಕಲಶೋತ್ಸವ ನಡೆಯಲಿದೆ.
ಜೂ.15 ರಂದು ಪೂರ್ವಾಹ್ನ ಗಂಟೆ 9:00 ರಿಂದ ದಶಮ ಸ್ಕಂದ ಪಾರಾಯಣವೂ ನಾರಾಯಣ ಮೂರ್ತಿ ಕಾಂಞಗಾಡ್ ಇವರಿಂದ ಪ್ರಾರಂಭವಾಗಲಿದೆ. ಸಂಜೆ ಗಂಟೆ 5:00ಕ್ಕೆ ತಂತ್ರಿಗಳ ಆಗಮನವಾಗುತ್ತದೆ. ತದನಂತರ ವೈದಿಕ ಕಾಠ್ಯಕ್ರಮಗಳು ಪ್ರಾರಂಭಿಸಿ ರಾತ್ರಿ ಗಂಟೆ 9:00ಕ್ಕೆ ಮುಕ್ತಾಯಗೊಳ್ಳಲಿದೆ. ಜೂನ್ 16 ರಂದು ಬೆಳಿಗ್ಗೆ 7:00ರಿಂದ ಗಣಪತಿ ಹೋಮದಿಂದ ವೈದಿಕ ಕಾಠ್ಯಕ್ರಮಗಳು ಪ್ರಾರಂಭಗೊಂಡು ತದನಂತರ ಭಾಗವತದಶಮ ಸ್ಕಂದ ಪಾರಾಯಣ ಮುಂದುವರೆದು ಪೂರ್ವಾಹ್ನ ಗಂಟೆ 10:00ಕ್ಕೆ ಮುಕ್ತಾಯಗೊಳ್ಳಲಿದೆ. ಜೂನ್ 17ರ ಸಂಜೆ ಗಂಟೆ 4:30ರಿಂದ ಭಜನೆಯಿಂದ ಪ್ರಾರಂಭಗೊಂಡು ಗಂಟೆ 6:00ರ ನಂತರ ವಿವಿಧ ಹೋಮ ಹವನಗಳು ನಡೆಯಲಿದೆ. ಜೂನ್ 18 ರಂದು ವಿಶೇಷವಾಗಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ ದಿನ. ಪೂ.ಗಂಟೆ 8:00ಕ್ಕೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಬೆಳಿಗ್ಗೆ ಗಂಟೆ 8:08 ರಿಂದ 9:06ರ ಕರ್ಕಾಟಕ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳಿಗೆ ಪುನರ್ ಪ್ರತಿಷ್ಠಾ ಕಲಶಾಭಿಷೇಕ ನಡೆದು ಬರಲಿದೆ. ತದನಂತರ ದೈವಗಳಿಗೆ ತಂಬಿಲ, ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ ಆಗಿ ಪ್ರಸಾದ ವಿತರಣೆಗೊಳ್ಳಲಿದೆ. ಪೂ. ಗಂಟೆ 10:30ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೃಷ್ಣ ಕಾಮತ್‌ರವರ ಅಧ್ಯಕ್ಷತೆಯಲ್ಲಿ ವಹಿಸಲಿದ್ದು, ಎಡನೀರು ಮಠದ ಸಚ್ಚಿದಾನಂದ ಭಾರತಿ ಮಹಾ ಸ್ವಾಮೀಜಿಗಳವರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ವೇ| ಮೂ| ದೇಲಂಪಾಡಿ ಗಣೇಶ ತಂತ್ರಿಯವರು ಗೌರವ ಉಪಸ್ಥಿತರಿರುವರು. ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸಂಸ್ಥೆಯ ಅಧ್ಯಕ್ಷರಾದ ಡಾ| ಕೆ. ವಿ. ಚಿದಾನಂದ, ಶ್ರೀ ಚೆನ್ನಕೇಶವ ದೇವಸ್ಥಾನ ಸುಳ್ಯ ಇದರ ಅನುವಂಶಿಕ ಆಡಳಿತ ಮೊಕೇಸರರಾದ ಡಾ| ಹರಪ್ರಸಾದ್ ತುದಿಯಡ್ಕ, ಸುಳ್ಯದ ಮಾನ್ಯ ಶಾಸಕರಾದ ಕು| ಭಾಗೀರಥಿ ಮುರುಳ್ಯ, ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಪಿ.ಕೆ. ಉಮೇಶ್ ಉಪಸ್ಥಿತರಿರಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading