ಹಸಿರು ಹೊತ್ತ ಕಾಡು ಮರೆಯಾಗಿ ಕಾಂಕ್ರೀಟ್ ನಾಡಿಗೆ ಹೆಜ್ಜೆಯೇ ಇಂದು …!

ಹೌದು ಯುವ ಮಿತ್ರರೇ ಪ್ರಕೃತಿಯನ್ನು ಪೋಷಿಸಿದರೆ ನಮ್ಮ ಉಸಿರು ಹೆಚ್ಚಿದಂತೆ. ಹಾಗಾಗಿ ಹಿಂದಿನ ಜಾಯಮಾನದಲ್ಲಿ ಹಸಿರೆಂಬೆ ತಾಣವನ್ನು ಮರೆತು ಕಾಂಕ್ರೀಟ್ ನತ್ತ ದಾಪುಗಾಲನ್ನಿಟ್ಟು ಹಸಿರೆಂಬ ಉಯ್ಯಾಲೆಯನ್ನು ಮರೆತನೆ ಮಾನವ ಇಂದು..! ದಟ್ಟವಾಗಿ ಬೆಳೆದಿರುವ ಕಾಡುಗಳು ಬೆಳಗಾಗುವುದರಲ್ಲಿ ಕಣ್ಮರೆಯಾಗಿ ಹಸಿರೆಂಬ ಮೂರಕ್ಷರವು ನಿಧಾನವಾಗಿ ಹೆಸರಿಲ್ಲದಂತೆ ಮಾಯವಾಗುತ್ತಿದೆ. ಬರಡು ಮೈಯ ಧರೆಯ ಒಡಲನ್ನು ಸೂರ್ಯ ರಶ್ಮಿಯು ಬಿಸಿ ಬೇಗೆಯಿಂದ ಸುಡುವಂತೆ ಮಾಡುತ್ತಿದ್ದಾನೆ ಇವೆಲ್ಲಾವನ್ನು ನಾವೇ ತಂದೊಡ್ಡಿ ಕೊಳ್ಳು ತ್ತಿದ್ದೇವೆ. ಮಾನವ ತನಗೆ ಅಗತ್ಯವೆನಿಸಿದ ವಸ್ತುಗಳನ್ನು ಕೊಳ್ಳಲು ಮಾನವ ಪರಿಸರವನ್ನು ಕೊಳ್ಳೆ ಹೊಡೆಯುವುದರ ಮೂಲಕ ನಾಗರಿಕತೆಯ ಸೋಗಿನಲ್ಲಿ ಅನಾಗರೀಕತೆಯತ್ತ ಮೆರೆದ ಕ್ಷಣದಿಂದ ಹಿಡಿದು ಕಾನನದಲ್ಲಿದ್ದ ಮೃಗಗಳು ನಾಡಿನತ್ತ ಸಾಗಿ ಬಂದವು. ಇದರಿಂದಾಗಿ ಜೀವಸಂಕುಲಗಳು ಅಳಿವಿನಂಚಿಗೆ ಸಾಗುತ್ತಿದೆ. “ಹಸಿರೇ ಉಸಿರು” ಎಂಬ ಮಾತಿನಂತೆ ಈ ಪೃಥ್ವಿ ಯೆಂಬ ಭೂಮಂಡಲದಲ್ಲಿ ಮಣ್ಣು, ಕಲ್ಲು, ಮರ, ಗಿಡ, ಹೂವು, ಹಣ್ಣು ಎಲ್ಲವೂ ಒಂದು ಭಾಗವೆಂದು ಮನ ಗಾಣಬಹುದು. ಹಾಗೆಯೇ ಭುವಿಯ ಮಡಿಲಿಗೆ ಬಿತ್ತಿದ ಬೀಜವು ಮೊಳಕೆಯಿಂದ ಹಿಡಿದು ಚಿಗುರೊಡೆದು ಮೇಲಕ್ಕೆ ಬರಲು ಸೂರ್ಯನ ಬೆಳಕು ಸೃಷ್ಟಿಯ ವೈಚಿತ್ಯವಾಗಿದೆ. ಹೀಗಿರುವಾಗ ಪ್ರಕೃತಿಯನ್ನು ಹಿಂದಿನ ಕಾಲದಿಂದಲೂ ಆರಾಧಿಸುವ ಸಂಪ್ರದಾಯದ ಸೊಗಡನ್ನು ಇಂದಿಗೂ ಉಳಿಸಿ ಬೆಳೆಸ ಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ನಡುವೆ ಹಸಿರ ಬೆಳೆಸಿ ಸ್ವಚ್ಛ ಸುಂದರ ಪರಿಸರವನ್ನು ನಮ್ಮದಾಗಿಸಿಕೊಳ್ಳೋಣ ಪ್ರಿಯ ಮಿತ್ರರೇ ಕೇವಲ ಕಾಂಕ್ರೀಟ್ ನಾಡನ್ನಾಗಿ ಪರಿವರ್ತಿಸಿದರೆ ಸಾಲದು ಮುಂದೆ “ಉಸಿರೇ ನಮ್ಮೆಲ್ಲರ ಹಸಿರು” ಹೀಗೆ ಈ ಭೂಮಿಗಿಂತ ಅತ್ಯುತ್ತಮವಾದ ಸ್ಥಳ ಬೇರೊಂದಿಲ್ಲ. ಆದ್ದರಿಂದ ಶ್ರಮವಹಿಸಿಯಾದರು ಸರಿ ಹಚ್ಚ ಹಸಿರನ್ನು ನಾಡನ್ನು ಸಂರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ.

. . . . . . . . .

“ ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು” ಕಿಶನ್. ಎಂ ಪವಿತ್ರ ನಿಲಯ ಪೆರುವಾಜೆ. ✍️

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading