Ad Widget

ಸುಳ್ಯ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ ಹಾಗೂ ಸನ್ಮಾನ ಕಾರ್ಯಕ್ರಮ

ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ ಜ.26 ರಂದು ನಡೆಯಿತು. ಧ್ವಜಾರೋಹಣವನ್ನು ನಿವೃತ ಸಿ‌.ಆರ್.ಪಿ.ಎಫ್ ಯೋಧರಾದ  ವಿದ್ಯಾಧರ.ಎನ್ ಪಟ್ಟೆ ಇವರು ನೆರವೇರಿಸಿ ಗಣರಾಜ್ಯೋತ್ಸವ ಸಂದೇಶವನ್ನು ನೀಡಿದರು.

ವೇದಿಕೆಯಲ್ಲಿ ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲಾ ಉಪಾಧ್ಯಕ್ಷರಾದ ಪ್ರವೀಣ್ ಜಯನಗರ ಉಪಸ್ಥಿತರಿದ್ದು, ಸಂದರ್ಭೋಚಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ  ಶಾಲಾ ಸ್ಕೌಟ್ಸ್ ತಂಡ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಲು ತರಬೇತಿ ನೀಡಿ ಸಹಕರಿಸಿದ ಸ್ಕೌಟ್ಸ್ ಶಿಕ್ಷಕ ಭಾನುಪ್ರಕಾಶ್ ಇವರನ್ನು ಸ್ಕೌಟ್ಸ್ ವಿಜೇತ ವಿದ್ಯಾರ್ಥಿಗಳು ಹಾಗೂ ಪೋಷಕರು ಸನ್ಮಾನಿಸಿ, ಗೌರವಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ  ಸಿಸ್ಟರ್ ಮೇರಿ ಸ್ಟೆಲ್ಲಾ ಸ್ವಾಗತಿಸಿ, 8 ನೇ ತರಗತಿ ವಿದ್ಯಾರ್ಥಿನಿ ದಿವ್ಯ  ವಂದಿಸಿದರು.
ಅಕ್ಷಯ್ 9ನೇ ತರಗತಿ ಇವರು ಗಣರಾಜ್ಯೋತ್ಸವ ಆಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು ಗಣರಾಜ್ಯೋತ್ಸವದ ಘೋಷವಾಕ್ಯಗಳನ್ನು ಹೇಳಿದರು.
ವಿದ್ಯಾರ್ಥಿಗಳಿಂದ ಅತ್ಯಾಕರ್ಷಕವಾದ ಸಮೂಹ ಗೀತೆ ಹಾಗೂ ದೇಶಭಕ್ತಿ ಸಾರುವ ನೃತ್ಯವೂ ಉತ್ತಮವಾಗಿ ಮೂಡಿ ಬಂತು.

ಲೌಕ್ಯ 8ನೇ ತರಗತಿ ಹಾಗೂ ಶಿಕ್ಷಕಿ  ಯಶ್ವಿತ  ಇವರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಯಶಸ್ವಿಯಲ್ಲಿ ಶಿಕ್ಷಕರಾದ ಭಾನು ಪ್ರಕಾಶ್ ಅರಂತೋಡು, ಕೊರಗಪ್ಪ ಬೆಳ್ಳಾರೆ,  ಹಾಗೂ ಶಿಕ್ಷಕರು, ಶಿಕ್ಷಕೇತರರು ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading