Ad Widget

ಕುಕ್ಕೆ ಸುಬ್ರಹ್ಮಣ್ಯ ಬೈಪಾಸ್ ರಸ್ತೆ ಬದಿಗಳಲ್ಲಿ ಕಸದ ರಾಶಿ ರಾಶಿ ; ಸ್ವಚ್ಛತಾ ಕಾರ್ಯ ಕೈಗೊಂಡ ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್

ಸುಬ್ರಹ್ಮಣ್ಯ ಜನವರಿ 11 : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ದೂರದ ರಾಜ್ಯಗಳಿಂದ ಹಾಗೂ ಊರುಗಳಿಂದ ಅತ್ಯಧಿಕ ಭಕ್ತರು ಬಂದು ದೇವರ ದರ್ಶನ, ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಹೋಗುತ್ತಿದ್ದಾರೆ. ಆದರೆ ಅಷ್ಟೇ ಕಸದ ರಾಶಿ ರಾಶಿಗಳು ಸುಬ್ರಹ್ಮಣ್ಯ ಪಾರ್ಕಿಂಗ್ ಪ್ರದೇಶ, ಬೈಪಾಸ್ ರಸ್ತೆಯ ಇಕ್ಕಲಗಳಲ್ಲಿ ತುಂಬುತ್ತಿದ್ದು, ಅದನ್ನು ಸ್ವಚ್ಛಗೊಳಿಸುವುದು ಸವಲಾಗಿರುತ್ತದೆ. ದಿನನಿತ್ಯ ಸಾವಿರಾರು ವಾಹನಗಳನ್ನು ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದ್ದು, ಅಲ್ಲಿ ಹಾಗೂ ರಸ್ತೆ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ಕಸವನ್ನು ಹಾಕುತ್ತಿರುವುದು ಕಂಡುಬಂದಿದೆ. ಕಳೆದ 523 ವಾರಗಳಿಂದ ನಿರಂತರವಾಗಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿರುವ ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ನ ಸುಮಾರು 60ಕ್ಕೂ ಮಿಕ್ಕಿ  ಸ್ವಯಂಸೇವಕರು ಡಾ. ರವಿ ಕಕ್ಕೆಪದವು ಅವರ ನೇತೃತ್ವದಲ್ಲಿ ಸ್ವಚ್ಛಗೊಳಿಸುತ್ತಾ ಬಂದಿರುತ್ತಾರೆ. ರವಿವಾರ ಬೆಳಿಗ್ಗೆ ಟ್ರಸ್ಟ್ ನ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.
ಶ್ರೀ ಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಬರುತ್ತಿದ್ದು, ಪ್ಲಾಸ್ಟಿಕ್ ಬಾಟಲುಗಳು, ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ತಟ್ಟೆಗಳು ಇತ್ಯಾದಿಗಳನ್ನು ಎಷ್ಟೇ ಜಾಗೃತಿ ಮೂಡಿಸಿದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಎಸೆದಿರುತ್ತಾರೆ. ಶ್ರೀ ದೇವಳದ ಸಿಬ್ಬಂದಿಗಳು ಕೂಡ ಸ್ವಚ್ಛತೆಯನ್ನು ಕೈಗೊಳ್ಳುತ್ತಿದ್ದರೂ ಮತ್ತೆ ಮತ್ತೆ ಅಷ್ಟೇ ಕಸ-ಕಡ್ಡಿ, ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಚೀಲ ಹಾಗೂ ಕಚ್ಚಾ ವಸ್ತುಗಳನ್ನು ಸ್ವಚ್ಛಗೊಳಿಸುತ್ತಿರುವುದು ಸಾಮಾನ್ಯವಾಗಿದೆ. ಈ ಬಗ್ಗೆ ಡಾ.ರವಿ ಕಕ್ಕೆಪದವು ಅವರು ಪ್ರತಿ ವಾರ ಜಾಗೃತಿಯ ಸಂದೇಶಗಳನ್ನ ಭಕ್ತರಿಗೆ ನೀಡುತ್ತಾ ಬಂದಿರುತ್ತಾರೆ. ದೂರ ದೂರದ ಊರುಗಳಿಂದ ಶ್ರೀ ಕ್ಷೇತ್ರಕ್ಕೆ ಬರತಕ್ಕಂತಹ ಭಕ್ತಾದಿಗಳು ಏನೇ ಪ್ಲಾಸ್ಟಿಕ್ ವಸ್ತುಗಳನ್ನು ಇದ್ದರೂ ಅದನ್ನು ತಾವು ಮತ್ತೆ ತಮ್ಮ ಊರಿಗೆ ತೆಗೆದುಕೊಂಡು ಹೋಗಬೇಕು ಅಥವಾ ಎಲ್ಲಿ ಡಸ್ಟ್ ಬಿನ್ ಇದೆ ಅಲ್ಲಿ ಹಾಕಬೇಕೆಂಬ ಜಾಗೃತಿಯನ್ನು ಮೂಡಿಸುವುದರೊಂದಿಗೆ ಸಂದೇಶಗಳನ್ನು ಕೂಡ ಕಳುಹಿಸಿರುತ್ತಾರೆ.
“ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದೂರದ ಊರುಗಳಿಂದ ದೇವರ ದರ್ಶನ ಹಾಗೂ ಸೇವೆಗಾಗಿ ಬರುವ ಭಕ್ತಾದಿಗಳು ಪ್ಲಾಸ್ಟಿಕ್ ಬಾಟಲ್ ಚೀಲ ತಟ್ಟೆ ಅಥವಾ ಪ್ಲಾಸ್ಟಿಕ್ ಗೆ ಸಂಬಂಧಪಟ್ಟ ಯಾವುದೇ ವಸ್ತುಗಳನ್ನ ತರಬಾರದಾಗಿ ಹಾಗೂ ಒಂದು ವೇಳೆ ತಂದಲ್ಲಿ ಅಥವಾ ಇಲ್ಲಿಯ ಅಂಗಡಿಯಲ್ಲಿ ಖರೀದಿಸಿದಲ್ಲಿ ಅದನ್ನ ಡಸ್ಟ್ ಬಿನ್ ಗಳಲ್ಲಿ ಹಾಕಿ, ಅಲ್ಲದಿದ್ದರೆ ತಾವು ತಮ್ಮ ವಾಹನದಲ್ಲಿ ಅದನ್ನ ತಮ್ಮ ಊರಿಗೆ ಕಂಡು  ಹೋಗಬೇಕು. ಎಲ್ಲಾ ಭಕ್ತಾದಿಗಳು ಇದನ್ನು ಕಡ್ಡಾಯವಾಗಿ ಅನುಸರಿಸುವುದರೊಂದಿಗೆ ಕ್ಷೇತ್ರದ ಪವಿತ್ರತೆಯನ್ನು, ಸ್ವಚ್ಛತೆಯನ್ನು ಕಾಪಾಡಬೇಕೆಂದು” ಡಾ. ರವಿ ಕಕ್ಕೆಪದವು ಅವರು ವಿನಂತಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading