Ad Widget

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಅನಾರೋಗ್ಯಕ್ಕೆ ಒಳಗಾದ 3 ಹೆಣ್ಣು ಮಕ್ಕಳ ತಂದೆಗೆ ಬೇಕಿದೆ ಸಹಾಯ ಹಸ್ತ

ಪೆರಾಜೆ ಗ್ರಾಮದ ನಿಡ್ಯಮಲೆ ನಿವಾಸಿ ಯತೀಶ ಎನ್.ಎಂ.ರವರಿಗೆ (45) ಇತ್ತೀಚೆಗೆ  ಮೆದುಳಿನಲ್ಲಿ ರಕ್ತದ ಗಟ್ಟಿಕೆ (Brain Blood Clot) ಉಂಟಾಗಿ, ಪ್ರಜ್ಞಾಹೀನತೆ ಬಂದಿದೆ. ಇದರ ಪರಿಣಾಮವಾಗಿ ಅವರ ದೇಹದ ಬಲ ಭಾಗ ಸಂಪೂರ್ಣವಾಗಿ ಬಲಹೀನ ಸ್ಥಿತಿ ಉಂಟಾಗಿದೆ. ಪ್ರಸ್ತುತ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

. . . . . . . . .

ಇವರು ಹಿಂದೆ ರಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಆದರೆ ಇದೀಗ ಆರೋಗ್ಯ ಸಮಸ್ಯೆಯಿಂದಾಗಿ ಯಾವುದೇ ಕೆಲಸ ಮಾಡಲು ಸಾಧ್ಯವಾಗದೆ, ಮನೆ ಜೀವನವು ತುಂಬಾ ಕಷ್ಟಕರವಾಗಿರುತ್ತದೆ. ಇವರಿಗೆ ಮೂರು ಹೆಣ್ಣು ಮಕ್ಕಳು ಇದ್ದು, 9 ತರಗತಿ, 6ನೇ ತರಗತಿ ಮತ್ತು3 ವರ್ಷದ ಸಣ್ಣ ಮಗು ಇರುವ ಕಾರಣ, ಯಾವುದೇ ಸ್ಥಿರ ಆದಾಯವಿಲ್ಲದೆ, ಇವರ ಪತ್ನಿ ಮನೆಯ ಕೆಲಸಗಳನ್ನು ಮಾಡಿಕೊಂಡು ಕುಟುಂಬವನ್ನು ಸಾಗಿಸುತ್ತಿದ್ದಾರೆ. ವೈದ್ಯರ ಅಂದಾಜು ಪ್ರಕಾರ, ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗೆ ಸುಮಾರು 15 ಲಕ್ಷ ವೆಚ್ಚವಾಗುತ್ತದೆ ಹೇಳಲಾಗಿದ್ದು, ಇಷ್ಟು ಹಣವನ್ನು ಭರಿಸುವುದು ಕುಟುಂಬಕ್ಕೆ ಕಷ್ಟವಾಗಿದೆ. ಯತೀಶ ಅವರ ಜೀವನವನ್ನು ಉಳಿಸಿಕೊಳ್ಳಲು ಹಾಗೂ ಅವರ ಮೂರು ಹೆಣ್ಣು ಮಕ್ಕಳ ಶಿಕ್ಷಣ, ಭವಿಷ್ಯ ಮತ್ತು ಕುಟುಂಬದ ಬದುಕು ಮುಂದುವರಿಯಲು, ನಿಮ್ಮ ಸಹಾಯ ಅತ್ಯಂತ ಅಗತ್ಯವಾಗಿದೆ. ಹಾಗಾಗಿ ಸಹೃದಯ ದಾನಿಗಳು ಇವರಿಗೆ ಸಹಾಯ ಹಸ್ತ ನೀಡಬೇಕಾಗಿದೆ. ಧನಸಹಾಯ ಮಾಡಬಯಸುವರು ಈ ಸ್ಕ್ಯಾನರ್ ಮುಖಾಂತರ ಹಣ ವರ್ಗಾವಣೆ ಮಾಡಬಹುದು ಎಂದು ಮನೆಯವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 73492 12232 (ಉಷಾ)  94804 70402 ಇವರನ್ನು ಸಂಪರ್ಕಿಸಬಹುದು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading