Ad Widget

ಸಂಪಾಜೆ : ರೈತರಿಗೆ ಜೇನುಪೆಟ್ಟಿಗೆ ವಿತರಣೆ

ಎನ್.ಬಿ.ಪಿ.ಜಿ.ಆರ್ ನವದೆಹಲಿ, ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ, ಸಂಜೀವಿನಿ ಎನ್.ಆರ. ಎಲ್.ಎಂ ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಸಂಪಾಜೆ,  ಶ್ರೀ ವಿಷ್ಣು ಸಂಜೀವಿನಿ ಒಕ್ಕೂಟ ಸಂಪಾಜೆ ಸಹಯೋಗದಲ್ಲಿ  ಗ್ರಾಮದ ಪರಿಶಿಷ್ಟ ಜಾತಿಯ ರೈತ ಬಾಂಧವರಿಗೆ ಸಂಸಾರ ಸಮೇತ ಜೇನುಪೆಟ್ಟಿಗೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು, ಉಪಾಧ್ಯಕ್ಷರಾದ ಹನೀಫ್ ಎಸ್.ಕೆ, ಮಾಜಿ ಅಧ್ಯಕ್ಷರಾದ ಜಿ.ಕೆ ಹಮೀದ್, ಪಂಚಾಯತ್ ಸದಸ್ಯರಾದ ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ಕೃಷಿ ಸಖಿ ಮೋಹಿನಿ ವಿಶ್ವನಾಥ್(ನಿಶಾ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರಾಜೇಶ್ ಹಾಗೂ ಫಲಾನುಭವಿ ಕೃಷಿಕರು ಉಪಸ್ಥಿತರಿದ್ದರು. “ಸರಕಾರ ಕೊಟ್ಟಿರುವ  ಸವಲತ್ತುಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ಆದಾಯವನ್ನು ಗಳಿಸುವಲ್ಲಿ ಯಶಸ್ವಿಯಾಗಲು ಮುತುವರ್ಜಿಯಿಂದ ಕೆಲಸ ಮಾಡಬೇಕು” ಎಂದು ಪಂಚಾಯತ್ ಅಧ್ಯಕ್ಷರು ಹೇಳಿದರು.
“ಎನ್.ಆರ್.ಎಲ್ ಎಂ ಸಂಜೀವಿನಿ ಕೃಷಿ ಸಖಿ ಮೋಹಿನಿ ವಿಶ್ವನಾಥ್ ಅವರು ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಮೂಲಕ ಈಗಾಗಲೇ ಕೃಷಿಗೆ ಸಂಬಂಧಿಸಿದ ಉಪಕರಣಗಳು ಕೃಷಿಕರಿಗೆ ಸೌಲಭ್ಯಗಳು ಸಿಗುತ್ತಿವೆ. ಪಂಚಾಯತ್ ಮುಖಾಂತರ ಕೃಷಿಕರಿಗೆ ಆದಷ್ಟು ಎಲ್ಲರೂ ಸಹಕಾರವನ್ನು ನೀಡುತ್ತಿದ್ದೇವೆ” ಎಂದು ಮಾಜಿ ಅಧ್ಯಕ್ಷರಾದ ಜಿ.ಕೆ ಹಮೀದ್ ಹೇಳಿದರು.
“ಶ್ರೀಮತಿ ಶ್ರೀ ರವಿಶಂಕರ್ ಭಟ್ ಅವರು ಉತ್ತಮ ಕೃಷಿಕರಾಗಿದ್ದು, ಅವರ ತೋಟದಲ್ಲಿ ಜೇನು ಪೆಟ್ಟಿಗೆಗಳನ್ನು ತಾತ್ಕಾಲಿಕವಾಗಿ ಇಡಲು ಸ್ಥಳಾವಕಾಶ ನೀಡಿದ್ದಾರೆ. ಅವರಿಗೆ NBPGR, ಪಂಚಾಯತ್, ಎನ್ ಆರ್ ಎಲ್ ಎಂ ಸಂಜೀವಿನಿ ಹಾಗೂ ಫಲಾನುಭವಿಗಳ ಪರವಾಗಿ ಧನ್ಯವಾದ” ಉಪಾಧ್ಯಕ್ಷರಾದ ಹನೀಫ್ ಎಸ್.ಕೆ ಹೇಳಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading