Ad Widget

ಐವನ್ ಡಿ ಸೋಜಾ ಶಿಪಾರಸ್ಸಿನ ಮೇರೆಗೆ ಸಂಪಾಜೆಗೆ ರೂ. 40 ಲಕ್ಷ ಅನುದಾನ ಬಿಡುಗಡೆ

ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜರವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಸಂಪಾಜೆ ಗ್ರಾಮದ ಗೂನಡ್ಕ–ದರ್ಖಾಸ್ತು–ಕೊಪ್ಪದಕಜೆ ರಸ್ತೆ ಕಾಂಕ್ರೀಟಿಕರಣಕ್ಕೆ 20 ಲಕ್ಷ ರೂ.ಗಳು ಹಾಗೂ ಪೇರಡ್ಕ–ಪೆರುಂಗೋಡಿ ರಸ್ತೆ ಕಾಂಕ್ರೀಟಿಕರಣಕ್ಕೆ 20 ಲಕ್ಷ ರೂ.ಗಳು ಸೇರಿದಂತೆ ಒಟ್ಟು 40 ಲಕ್ಷ ರೂ.ಗಳ ಅನುದಾನ ಬಿಡುಗಡೆಗೊಂಡಿದೆ.  ದರ್ಖಾಸ್ತು ಮುಖ್ಯ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ ಚಾಲನೆ ನೀಡಿದರು. ಈ ವೇಳೆ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪಿ.ಎನ್.ಗಣಪತಿ ಭಟ್, ಸ್ಥಳೀಯರಾದ ಉಮ್ಮರ್  ದರ್ಖಾಸ್ತು, ಪಾಂಡಿ ಮಹಮ್ಮದ್ ಕುಂಞಿ, ಸುಲೈಮಾನ್ ಅಂಜಿಕ್ಕಾರ್,  ಮಹಮ್ಮದ್ ಕುಂಞಿ, ದರ್ಖಾಸ್ತು ಅಂಗನವಾಡಿ ಕಾರ್ಯಕರ್ತೆ ಶಾರದಾ ಮದುಸೂಧನ್ ಹಾಗೂ ಆಶಾ ಕಾರ್ಯಕರ್ತೆ ಆಶಾ ವಿನಯ್ ಕುಮಾರ್ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading