Ad Widget

ಎನ್.ಎಸ್.ಯು.ಐ ಹೇಳಿಕೆಗೆ  ಎ.ಬಿ.ವಿ.ಪಿ ಖಂಡನೆ ; “ನಮ್ಮನ್ಮು ಪ್ರಶ್ನಿಸುವ ಯಾವುದೇ ನೈತಿಕತೆ‌ ಇಲ್ಲ” ಎಂದ ಎ.ಬಿ.ವಿ.ಪಿ

“ವಿದ್ಯಾರ್ಥಿಗಳ ನೈಜ ಸಮಸ್ಯೆಗಳ ಕುರಿತು ಧ್ವನಿ ಎತ್ತಿದಾಗ ಅದಕ್ಕೆ ಧನಿಗೂಡಿಸುವ ಬದಲು ಆಡಳಿತದ ಚೇಲಾಗಳಂತೆ ವರ್ತಿಸಿರುವ ಎನ್‌.ಎಸ್‌.ಯು.ಐ ನಾಯಕರ ಹೇಳಿಕೆ ಬಾಲಿಷವಾಗಿದ್ದು, ಅದು ಅವರ ಸ್ವಂತ ಆಲೋಚನೆಯಲ್ಲ, ಯಾರೋ ಬರೆದು ಕೊಟ್ಟ ಹೇಳಿಕೆಯಂತೆಯೇ ಕಾಣುತ್ತದೆ. ವಿದ್ಯಾರ್ಥಿಗಳ ಸಂಕಷ್ಟವನ್ನು ಅರಿಯದೇ, ಹೋರಾಟದ ಉದ್ದೇಶವನ್ನೇ ಮರೆತಿದ್ದು, ಇಂತಹ ಪ್ರತಿಕ್ರಿಯೆ ದೌರ್ಭಾಗ್ಯಕರವಾಗಿದೆ. ಇಂತಹ ಹೇಳಿಕೆಗಳಿಂದ ಆ ವಿದ್ಯಾರ್ಥಿ ನಾಯಕರು ಅಥವಾ ವಿದ್ಯಾರ್ಥಿ ಸಂಘಟನೆ ವಿದ್ಯಾರ್ಥಿಗಳಿಗಾಗಿ ಏನನ್ನೂ ಮಾಡುವ ಸಾಮರ್ಥ್ಯ ಹೊಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕೇವಲ ರಾಜಕೀಯ ನಾಯಕರ ಹಿಂಬಾಲಕರಾಗಿ ಕಾರ್ಯನಿರ್ವಹಿಸಿ, ವಿದ್ಯಾರ್ಥಿಗಳ ನಡುವೆ ರಾಜಕೀಯದ ವಿಷಬೀಜ ಬಿತ್ತುವುದೇ ಇವರ ಮುಖ್ಯ ಕೆಲಸವಾಗಿರುವುದು ವಿಷಾದಕರ ಸತ್ಯವಾಗಿದೆ. ವಿದ್ಯಾರ್ಥಿಗಳ ಹಕ್ಕುಗಳು, ಸಮಸ್ಯೆಗಳು ಮತ್ತು ಭವಿಷ್ಯದ ಕುರಿತು ನಿರಂತರವಾಗಿ ಹೋರಾಡುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಚಟುವಟಿಕೆಗಳನ್ನು ಪ್ರಶ್ನಿಸುವ ಯಾವುದೇ ನೈತಿಕತೆ, ಸ್ವತಂತ್ರ ಚಿಂತನೆಯಿಲ್ಲದೆ ನೀಡುವ ಇಂತಹ ನಾಮಕಾವಸ್ಥೆ ಹೇಳಿಕೆಗಳನ್ನು ಮಾಡುವ ವಿದ್ಯಾರ್ಥಿ ಸಂಘಟನೆಗಳ ನಾಯಕರಿಗೆ ಇಲ್ಲ” ಎಂದು ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಳಿಯ ಸಾತ್ವಿಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕಡೆಗಣಿಸಿ ಸರಕಾರದ ಪರ ಮಾತನಾಡಿರುವ ಎನ್‌.ಎಸ್‌.ಯು.ಐ ನಾಯಕರ ಹೇಳಿಕೆಯು ವಿದ್ಯಾರ್ಥಿ ಪ್ರತಿನಿಧಿಗಳೆನ್ನಲು ಕೂಡ ಅಯೋಗ್ಯ” ಎಂದು ಸುಳ್ಯ ನಗರ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಯಕಾರಿಣಿ ಸದಸ್ಯ ಪುನೀತ್.ಎಚ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading