Ad Widget

ಕುಕ್ಕೆಯಲ್ಲಿ ರಥಗಳ ಶಿಖರ(ಕಲಶ) ಪೂಜೆ

ಸುಬ್ರಹ್ಮಣ್ಯ ನ.24 : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಠಿ  ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಎಳೆಯುವ ಪಂಚಮಿ ರಥ ಹಾಗೂ ಬುಧವಾರ ಬೆಳಗ್ಗೆ ಎಳೆಯುವ ಬ್ರಹ್ಮರಥ
ಗಳಿಗೆ ಜೋಡಿಸುವ ಶಿಖರ(ಕಳಶ)ದ ಪೂಜೆಯನ್ನು ಈ ದಿನ ಸೋಮವಾರ ಶ್ರೀ ದೇವಳದ ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯರು ಕಳಶ ಪೂಜೆ ನೆರವೇರಿಸಿದರು. ತದನಂತರ ಮನೆ ಕುಡಿಯ ಜನಾಂಗದ ಗುರಿಕಾರ ಚಂದ್ರಶೇಖರ್ ಅವರಿಗೆ ಕಳಶ ಜೋಡಿಸಲು ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಮಲೆಕುಡಿಯ ಜನಾಂಗದ ಮುಖಂಡ ಜಗದೀಶ ಹಾಜರಿದ್ದರು.
ಕಳಶ ಪೂಜೆ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯರುಗಳಾದ ಅಶೋಕ ನೆಕ್ರಾಜೆ, ಅಜಿತ್ ಪಾಲೇರಿ, ಮಹೇಶ್ ಕುಮಾರ್ ಕರಿಕ್ಕಳ, ಲೀಲಾ ಮನೋಮೋಹನ್, ಪ್ರವೀಣ ರೈ ಮರ್ವಂಜ, ಸೌಮ್ಯ ಭರತ್, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading