Ad Widget

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸುಬ್ರಹ್ಮಣ್ಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯ

ಸುಬ್ರಹ್ಮಣ್ಯ ನ. 21 : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ  ಜಾತ್ರಾ  ಮಹೋತ್ಸವದ ಅಂಗವಾಗಿ ಬಿಳಿನೆಲೆ ಕೈಕಂಬದಿಂದ ಕುಲ್ಕುಂದದವರೆಗೆ ರಸ್ತೆಯ ಎರಡು ಬದಿಗಳಲ್ಲಿ ಇದ್ದಂತಹ ಪ್ಲಾಸ್ಟಿಕ್ ತ್ಯಾಜ್ಯಗಳು, ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಚೀಲ ಹಾಗೂ ಕಸಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ಕುಕ್ಕೆ ಕ್ಷೇತ್ರಕ್ಕೆ ಬಂದಂತಹ ಭಕ್ತಾದಿಗಳು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ತೆರಳುವಾಗ ತಮ್ಮಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್, ಚೀಲ ಸೇರಿದಂತೆ ಇನ್ನಿತರ ವಸ್ತುಗಳನ್ನು ಮಾರ್ಗದ ಎರಡು ಬದಿಗಳಲ್ಲಿ ಬಿಸಾಡಿ ಹೋಗಿರುವುದಲ್ಲದೆ ಇಡೀ ಪರಿಸರವನ್ನ ಅಶುದ್ಧಿ  ಮಾಡಿರುತ್ತಾರೆ. ಕುಕ್ಕೆ ಕ್ಷೇತ್ರ ಪ್ಲಾಸ್ಟಿಕ್ ಮುಕ್ತ ಕ್ಷೇತ್ರವೆಂದು ಅಲ್ಲಲ್ಲಿ ಫಲಕಗಳಿರುವುದನ್ನು ಗಮನಿಸಿದ ಭಕ್ತಾದಿಗಳು ಕ್ಷೇತ್ರ ಬಿಟ್ಟು ಹೋಗುವಾಗ ಎಲ್ಲೆಂದರಲ್ಲಿ ಬಿಸಾಕಿ ಹೋಗಿರುತ್ತಾರೆ. ಭಕ್ತಾದಿಗಳಿಗೆ ಎಷ್ಟೇ ಮನವರಿಕೆ ಮಾಡಿದರು ಅದನ್ನು ಗೊಡವೆಗೆ  ತೆಗೆದುಕೊಳ್ಳದೆ ಎಲ್ಲಾ ಕಡೆ ಬಿಸಾಕಿ ಹೋಗಿರೋದು ದುರದಷ್ಟಕರ. ಇದನ್ನು ತಿಂದಂತಹ ಪ್ರಾಣಿಗಳು, ಪಕ್ಷಿಗಳು ತಮ್ಮ ಆರೋಗ್ಯವನ್ನು ಹದಗೆಡುತ್ತವೆ ಎಂಬುದು ಕೂಡ ಅವರ  ಗಮನದಲ್ಲಿ ಇರುವುದಿಲ್ಲ. ಇದನ್ನು ಮನಗಂಡ ಸುಬ್ರಹ್ಮಣ್ಯದ ರವಿ ಕಕ್ಕೆಪದವು  ಸಮಾಜ ಸೇವಾ ಟ್ರಸ್ಟ್ ನ ಸುಮಾರು 50 ರಿಂದ 60  ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.
ಇದರೊಂದಿಗೆ ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿ ಕಕ್ಕೆಪದವು ಅವರು “ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಎಲ್ಲೆಂದರಲ್ಲಿ ಕಸ ಬಿಸಾಡಬೇಡಿ, ಹಾಕಬೇಡಿ, ಇಡೀ ಪರಿಸರವನ್ನ ಹಾಳು ಮಾಡಬೇಡಿ, ಇದನ್ನು ಸೇವಿಸಿದ ಪ್ರಾಣಿ, ಪಕ್ಷಿಗಳು ಕೂಡ ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುವುದಲ್ಲದೆ ಇಡೀ ಪರಿಸರವನ್ನೇ ಅಶುದ್ಧಿಗೊಳಿಸುವ ಕಾರ್ಯ ಮಾಡಬೇಡಿ” ಎಂದು ವಿನಂತಿಸಿದ್ದಾರೆ. “ಅಲ್ಲದೆ ತಮ್ಮಲ್ಲಿದ್ದಂತ ಪ್ಲಾಸ್ಟಿಕ್ ಬಾಟಲ್, ಚೀಲ, ಹಾಗೂ ಇನ್ನಿತರ ವಸ್ತುಗಳನ್ನ ತಾವು ವಾಹನದಲ್ಲಿ ತಮ್ಮ ತಮ್ಮ ಊರಿಗೆ ಕೊಂಡುಹೋಗಿ ಅಲ್ಲಿ ಬಿಸಾಡಿ ಅಥವಾ ಎಲ್ಲಿ ಟಬ್ ಅಥವಾ ಬ್ಯಾಗುಗಳು ಇರುತ್ತವೋ ಅಲ್ಲಿ ಹಾಕಿ” ಎಂದು ವಿನಂತಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading