Ad Widget

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಪಿ.ಸಿ ಜಯರಾಂ ರವರಿಗೆ ಸೂಡ ಅಧ್ಯಕ್ಷರಿಂದ ಅಭಿನಂದನೆ – “ಸುಳ್ಯದ ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರಗಳಿಗೆ ಪಿ.ಸಿ ಯವರ ಸೇವೆ ಶ್ಲಾಘನೀಯ” : ಕೆ.ಎಂ ಮುಸ್ತಫ

ಕರ್ನಾಟಕ ಸರ್ಕಾರ ಅತ್ಯುತ್ತಮ ಸಹಕಾರಿಗಳಿಗೆ ನೀಡುವ ಸಹಕಾರ ರತ್ನ ರಾಜ್ಯ ಮಟ್ಟದ ಪ್ರಶಸ್ತಿ ಗೆ ಭಾಜಾನರಾದ ಸುಳ್ಯದ ಹಿರಿಯ ಸಹಕಾರಿ ಧುರೀಣ ಪಿ.ಸಿ ಜಯರಾಂ ರವರನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ಸನ್ಮಾನಿಸಿದರು.
ಅಭಿನಂದಿಸಿದ ಕೆ.ಎಂ. ಮುಸ್ತಫ ರವರು ಮಾತನಾಡಿ “32 ವರ್ಷಗಳ ಸುಧೀರ್ಘ ಅವಧಿಗೆ ಮಡಪ್ಪಾಡಿ ವ್ಯವಸಾಯ ಸೇವಾ ಸಹಕಾರಿ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪಿ.ಸಿ ಯವರು ಸುಳ್ಯದಲ್ಲಿ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸ್ಥಾಪಕ ಅಧ್ಯಕ್ಷರಾಗಿ, ಬೆಳ್ಳಿ ಹಬ್ಬ ವರ್ಷದಲ್ಲಿ ಮತ್ತೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೀರ್ತಿ ಹೊಂದಿದವರು, ಸುಳ್ಯದ ಸಹಕಾರ, ಸಾಮಾಜಿಕ, ರಾಜಕೀಯ ಕ್ಷೇತ್ರದದಲ್ಲಿ ಅವರು ಸಲ್ಲಿಸಿದ ಸೇವೆ ಅನನ್ಯವಾದದ್ದು ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಿ.ಸಿ ಜಯರಾಂ ರವರು “ನಾನು ಗ್ರಾಮೀಣ ಪ್ರದೇಶವಾದ ಮಡಪ್ಪಾಡಿ ಯಲ್ಲಿ 45 ವರ್ಷಗಳ ಹಿಂದೆ ಉದ್ಯಮ ಸ್ಥಾಪಿಸಿದ ದಿನದಿಂದ ಇಂದಿನವರೆಗೆ ಜನತಾ ಗ್ರೂಪ್ಸ್ ನವರ ಬಾಂಧವ್ಯ ಹೊಂದ್ದಿದ್ದೇನೆ. ಸೈಕಲ್ ಮಹಮ್ಮದ್ ರವರ ಜತೆ ಸುಳ್ಯ ದಲ್ಲಿ ಕೊಕ್ಕೋ ಖರೀದಿ ಕೇಂದ್ರವನ್ನು  ಪ್ರಾರಂಬಿಸಿರುವುದನ್ನು ನಾನು ನೆನಪಿಸುತ್ತಿದ್ದೇನೆ” ಎಂದರು
ಈ ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ಉಪಾಧ್ಯಕ್ಷ ಪಿ.ಎಸ್. ಗಂಗಾಧರ್, ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಜನತಾ, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯರಗಳಾದ ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಖಜಾಂಚಿ ಕೆ. ಬಿ ಇಬ್ರಾಹಿಂ, ಯುನೈಟೆಡ್ ಸ್ಪೋರ್ಟ್ಸ್ ನ ಸದಸ್ಯ ಬಶೀರ್ ಕಚ್ಚು, ಉದ್ಯಮಿ ಜಾಫರ್ ಸೈಕಲ್ ಮೊದಲಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading