Ad Widget

ಎಲಿಮಲೆ : ಚಳ್ಳ ದುರ್ಗಾಪರಮೇಶ್ವರಿ ಸಾನಿಧ್ಯದಲ್ಲಿ ಬಾಲಾಲಯ ಪ್ರತಿಷ್ಠೆ – 400 ವರ್ಷಗಳ ಇತಿಹಾಸವಿರುವ ಪಂಚಶಕ್ತಿ ಕೇಂದ್ರದ ಜೀರ್ಣೋದ್ಧಾರಕ್ಕೆ ಸಿದ್ಧತೆ

ದೇವಚಳ್ಳ ಗ್ರಾಮದ ಚಳ್ಳದಲ್ಲಿ ನಿರ್ಮಾಣವಾಗಲಿರುವ ಸುಮಾರು 400 ವರ್ಷಗಳ ಇತಿಹಾಸವಿರುವ ಪಂಚ ಶಕ್ತಿ ಕೇಂದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ಉಳ್ಳಾಕುಲು ದೈವಗಳ ಕ್ಷೇತ್ರದಲ್ಲಿಂದು ಬಾಲಾಲಯ ಪ್ರತಿಷ್ಠೆ ನಡೆಯಿತು.
ಬ್ರಹ್ಮಶ್ರೀ ವೇ। ಮೂ। ತಂತ್ರಿ ಸುಬ್ರಹ್ಮಣ್ಯ ಬಳ್ಳುಕ್ಕುರಾಯರ ನೇತೃತ್ವದಲ್ಲಿ ಬಾಲಾಲಯ ಪ್ರತಿಷ್ಠೆ, ವರುಣ ಪೂಜೆ ನೆರವೇರಿತು.‌
ಈ ಸಂದರ್ಭದಲ್ಲಿ ಟ್ರಸ್ಠ್ ನ ಅಧ್ಯಕ್ಷ ಚಂದ್ರಶೇಖರ ತಳೂರು, ಕಾರ್ಯದರ್ಶಿ ಕೃಷ್ಣಯ್ಯ ಮೂಲೆತೋಟ, ಖಜಾಂಜಿ ರಾಧಾಕೃಷ್ಣ ಶ್ರೀ ಕಟೀಲ್ ಮಾವಿನಕಟ್ಟೆ, ನಿರ್ದೆಶಕರಾದ ಎ.ವಿ ತೀರ್ಥರಾಮ ಅಂಬೆಕಲ್ಲು, ಜಯಪ್ರಕಾಶ್ ಚಳ್ಳ,ಜಯಂತ ಅಂಬೆಕಲ್ಲು, ಕೃಷ್ಣ ಭಟ್ ಹೊನ್ನಾಡಿ, ದಯಾನಂದ ಡಿ.ಟಿ., ಹೇಮನಾಥ ಕೋಡ್ತುಗುಳಿ, ಸುನಿಲ್ ಕುಮಾರ್ ಚಳ್ಳ, ಸುಬ್ರಹ್ಮಣ್ಯ ಪಿಸಿ ಪಾರೆಪ್ಪಾಡಿ, ದಿನೇಶ್ ಕೇರ, ಸವಿತಾ ಕಾಯರ,  ರಾಧಾಕೃಷ್ಣ ಮಾವಿನಗೋಡ್ಲು ವಿಶ್ವನಾಥ್ ಮೆತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.
ಜೀರ್ಣಾವಸ್ಥೆಯಲ್ಲಿದ್ದ ಕ್ಷೇತ್ರದ ಅಭಿವೃದ್ಧಿಗಾಗಿ ಎರಡು ವರ್ಷಗಳ ಹಿಂದೆ ಊರ ಭಕ್ತಾಭಿಮಾನಿಗಳು ಪ್ರಶ್ನಾ ಚಿಂತನೆ ಹಾಗೂ ವಿವಿಧ ಧಾರ್ಮಿಕ ಕಾರ್ಯ ಕೈಗೊಂಡಿದ್ದರು. ಪೂರಕವಾಗಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ಉಳ್ಳಾಕುಲು ದೈವಗಳ ವಿಶ್ವಸ್ಥ ಮಂಡಳಿ ರಚಿಸಲಾಗಿತ್ತು.‌ ಇದೀಗ ದೇವಸ್ಥಾನವಿದ್ದ ಸುಮಾರು ಒಂದು ಎಕ್ರೆ ಜಾಗವನ್ನು ಜಾಗದ ಮಾಲಕರಾದ ಚಳ್ಳ ಸಹೋದರರು( ದಿ.ಕೃಷ್ಣ ಭಟ್, ಸುಬ್ರಹ್ನಣ್ಯ ಭಟ್, ಶ್ರೀಧರ ಭಟ್, ಶ್ರೀಪತಿ ಭಟ್, ಜಯಪ್ರಕಾಶ್ ಭಟ್, ವಿಷ್ಣುಭಟ್) ಕ್ಷೇತ್ರದ ಅಭಿವೃದ್ಧಿಗಾಗಿ ದಾನವಾಗಿ ನೀಡಿದ್ದಾರೆ.
ಇಂದು ಬಾಲಾಲಯ ಪ್ರತಿಷ್ಠೆ ನೆರವೇರಿದ್ದು ಮುಂದಿನ ಮೂರು ವರ್ಷದ ಒಳಗೆ ದೇವಸ್ಥಾನ ನಿರ್ಮಾಣವಾಗಬೇಕಿದೆ.
ಮುಂದೆ ಪ್ರತಿ ಶುಕ್ರವಾರ ಬೆಳಗ್ಗೆ ಪೂಜೆ, ತಿಂಗಳಿಗೊಂದು ಭಜನಾ ಕಾರ್ಯಕ್ರಮ ನಡೆಯಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading