ಸುಬ್ರಹ್ಮಣ್ಯ: ಶಿಕ್ಷಕರ ದಿನಾಚರಣೆ ; “ಮಕ್ಕಳು ನೀಡುವ ಪ್ರೀತಿ ಮತ್ತು ಗೌರವ ಗುರುಗಳಿಗೆ ಪರಮಾನ್ನ” : ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ನಂದಾ ಹರೀಶ್

ಸುಬ್ರಹ್ಮಣ್ಯ : “ಮಕ್ಕಳು ನೀಡುವ ಪ್ರೀತಿ ಶಿಕ್ಷಕರಿಗೆ ಪರಮಾನ್ನ‌. ವಿದ್ಯಾರ್ಥಿಗಳು ಗುರುಗಳಿಗೆ ನೀಡುವ ಗೌರವ ಮತ್ತು ಪ್ರೀತಿ ಶಿಕ್ಷಕರ ಬದುಕಿನಲ್ಲಿ ಅತ್ಯಂತ ಹೆಚ್ಚು ಆನಂದ ನೀಡುವ ಕ್ಷಣವಾಗುತ್ತದೆ‌. ಗುರುಗಳು ಭಗವಂತನಿಗೆ ಸಮಾನರು. ಗುರುಗಳಿಗೆ ವಿದೇಯರಾಗಿರುವುದು ಅತ್ಯವಶ್ಯಕ” ಎಂದು ಎಸ್.ಎಸ್.ಪಿ.ಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ನಂದಾ ಹರೀಶ್ ಹೇಳಿದರು.
ಸುಬ್ರಹ್ಮಣ್ಯದ ಎಸ್.ಎಸ್. ಪಿ.ಯು ಕಾಲೇಜಿನ ಪ್ರೌಢಶಾಲಾ ವತಿಯಿಂದ ನಡೆದ ಶಿಕ್ಷಕರ ದಿನಾಚರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. “ಬದುಕಿಗೆ ಹೊಸ ಅರ್ಥವನ್ನು ನೀಡುವ ಕಾರ್ಯವನ್ನು ಗುರುಗಳು ನೆರವೇರಿಸುತ್ತಾರೆ. ಗುರುಗಳ ಮಾರ್ಗದರ್ಶನ ಬದುಕಿಗೆ ಅತ್ಯಗತ್ಯ” ಎಂದರು.
ಹಿರಿಯ ಸಹ ಶಿಕ್ಷಕರಾದ ಎಂ.ಕೃಷ್ಣ ಭಟ್, ದೈಹಿಕ ಶಿಕ್ಷಣ ಶಿಕ್ಷಕರಾದ ಸ್ಮಿತಾ, ಶಿಕ್ಷಕರಾದ ಸುರೇಶ್, ಸತೀಶ್, ಚೇತಾಕ್ಷಿ, ನಳಿನಿ, ಸ್ವಾತಿ
ಮೋಕ್ಷಾ, ಸಚ್ಚಿದಾನಂದ, ಬೋಧಕರ ಸಿಬ್ಬಂದಿಗಳಾದ ಹರೀಶ್, ಹೇಮಾವತಿ, ರಶ್ಮಿ, ಸ್ಮಿತಾ ಹೊಸೋಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರ ದಿನಾಚರಣೆ ಅಂಗವಾಗಿ  ಶಿಕ್ಷಕರಿಗೆ ಅನೇಕ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳು ನಡೆಯಿತು.
ಬಹುಮಾನ ವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading