Ad Widget

ಬಿಜೆಪಿಯನ್ನು ಪ್ರಶ್ನೆ ಮಾಡುವುದೇ ತಪ್ಪಾ – ಪರ್ಯಾಯ ಮೀನು ಕೃಷಿ ಕಥೆ ಏನಾಯಿತು ? – ಎಂ.ವೆಂಕಪ್ಪ ಗೌಡ ಮರುಪ್ರಶ್ನೆ

ಬಿಜೆಪಿಯವರು ತಾವು ರೈತರ ರಕ್ಷಣೆಗೆ ಮುಂದಾಗಿದ್ದಾರೆ ಅಂತ ಹೇಳಿಕೆ ನೀಡುತ್ತಿದ್ದಾರೆ, ಕರ್ನಾಟಕದಲ್ಲಿ ಈ ತನಕದ ಬಿಜೆಪಿ ಆಡಳಿತದಲ್ಲಿ ರೈತರಿಗೆ ಏನು ಸಾಲ ಮನ್ನಾ ಮಾಡಿದ್ದೀರಾ?  ಈ ಹಿಂದೆ ರೈತರ ಅಡಿಕೆ ಕೃಷಿ ಕೊಳೆ ರೋಗಕ್ಕೆ ತುತ್ತಾದ ಸಂದರ್ಭದಲ್ಲಿ ಎಕರೆ ಒಂದಕ್ಕೆ ರೂ 12,000/= ದಂತೆ ಪರಿಹಾರ ಕೊಟ್ಟಿದ್ದಾರಾ? ಸಹಕಾರಿ ಸಂಘದಲ್ಲಿ 0% ಗೆ ಸಾಲ ಕೊಟ್ಟಿದ್ದಾರಾ? ರಸ ಗೊಬ್ಬರಕ್ಕೆ ದರ ಕಡಿಮೆ ಮಾಡಿದ್ದೀರಾ? ಬದಲಿಗೆ ಅಡಿಕೆ ಕೃಷಿ ಹಳದಿ ರೋಗಕ್ಕೆ ತುತ್ತಾದ ಸಂದರ್ಭ ರಾಜ್ಯ ಸಚಿವರನ್ನು,ಹಾಗೂ ಅಧಿಕಾರಿಗಳನ್ನು ಕರೆದು ಕೊಂಡು ಬಂದು ಹಳದಿ ರೋಗ ತಪ್ಪಿಸಲು ಅಡಿಕೆ ಮರದ ಸೋಗೆ ಕಡಿಯಬೇಕು ಎಂದು ಸಲಹೆ ಕೊಟ್ಟು ನೆಗಡಿ ಬಂದವರಿಗೆ ಔಷಧಿ ಕೊಡುವ  ಬದಲು ಮೂಗು ಕತ್ತರಿಸಿ ಎಂಬಂತೆ ಸೂಚಿಸಿದ್ದೀರಿ, ಸಾಲದಕ್ಕೆ, ಮಾನ್ಯ ಸುಳ್ಯದ ಸಚಿವರು ಅಡಿಕೆಗೆ ಪರ್ಯಾಯವಾಗಿ ಮೀನು ಸಾಕಣೆ ಮಾಡಿ ಅಂತ ಹೇಳಿ ಮೀನು ಮರಿಗಳನ್ನು ಮತ್ತು ಅದರ ಸಾಗಣೆಗೆ ವಾಹನ ಕೊಟ್ಟಿದ್ದು ಬಂತು, ಆದರೆ ಈಗ ಅಡಿಕೆ ಕೃಷಿಗೆ ಪರ್ಯಾಯವಾಗಿ ಬೆಳೆಸಿದ ಮೀನು ಕೃಷಿ ಏನಾಯಿತು ಅಂತ ಬಿಜೆಪಿ ಅಧ್ಯಕ್ಷರನ್ನು ಕೇಳುವುದರಲ್ಲಿ ಏನಾದರೂ ತಪ್ಪಿದೆಯಾ? ಎಂದು ಕಾಂಗ್ರೆಸ್ ಮುಖಂಡ ಎಂ. ವೆಂಕಪ್ಪ ಗೌಡ ಪ್ರಶ್ನಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading