Ad Widget

ಅಡ್ತಲೆ : ಸ್ಪಂದನ ಗೆಳೆಯರ ಬಳಗದ ಆಶ್ರಯದಲ್ಲಿ (ಆ.17) ಶ್ರೀಕೃಷ್ಣ ಜನ್ಮಾಷ್ಠಮಿ – ಇಂದು ಆಮಂತ್ರಣ ಬಿಡುಗಡೆ

ಸ್ಪಂದನ ಗೆಳೆಯರ ಬಳಗ(ರಿ) ಅಡ್ತಲೆ ಇವರ ಆಶ್ರಯದಲ್ಲಿ ಆ. 17 ಆದಿತ್ಯವಾರದಂದು  7 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ಕೃಷ್ಣ ವೇಷ‌ ಸ್ಪರ್ಧೆ ನಡೆಯಲಿದ್ದು,  ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ನಡೆಯಿತು. ಊರ ಹಿರಿಯರಾದ ವೆಂಕಪ್ಪ ಗೌಡ ಮೇಲಡ್ತಲೆ  ಬಿಡುಗಡೆಗೊಳಿಸಿದರು.

. . . . . . . . .

ಈ ಸಂದರ್ಭದಲ್ಲಿ ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷರಾದ  ವಿನಯ್ ಬೆದ್ರುಪಣೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ, ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ  ಹರಿಪ್ರಸಾದ್ ಅಡ್ತಲೆ, ಬಳಗದ ಗೌರವ ಸಲಹೆಗಾರರಾದ ಭವಾನಿ ಶಂಕರ ಅಡ್ತಲೆ, ಗಣೇಶ್ ಮಾಸ್ತರ್ ಅಡ್ತಲೆ, ಶಶಿಕುಮಾರ್ ಉಳುವಾರು , ನಿವೃತ್ತ ಮುಖ್ಯ ಶಿಕ್ಷಕರಾದ ಚಿದಾನಂದ ಮಾಸ್ತರ್ ಅಡ್ತಲೆ, ಹಾಗೂ ಬಳಗದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಈ ಬಾರಿ ವಿಶೇಷವಾಗಿ 1 ರಿಂದ 3 ವರ್ಷ ಹಾಗೂ 4 ರಿಂದ 6 ವರ್ಷ ವಿಭಾಗದಲ್ಲಿ ಶ್ರೀ ಕೃಷ್ಣ ವೇಷ‌ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading