Ad Widget

ಬಿಳಿನೆಲೆ : ಶ್ರೀ ಗೋಪಾಲಕೃಷ್ಣ ವಿದ್ಯಾಲಯದ ವಿವಿಧ ಸಂಘಗಳ ಉದ್ಘಾಟನೆ

ದೇಶಪ್ರೇಮ ಬೆಳೆಸಲು ಮಾನವೀಯ ಮೌಲ್ಯಗಳನ್ನು ಬೆಳೆಸಲು ಶಾಲಾ ಹಂತದಲ್ಲಿ ವಿವಿಧ ಸಂಘಗಳು ಸಹಕಾರಿಯಾಗಿವೆ ಎಂಬುದಾಗಿ ಕುಮಾರಸ್ವಾಮಿ ವಿದ್ಯಾಲಯದ ಗಣಿತ ಶಿಕ್ಷಕರಾದ ಆನಂದ ಸರ್ ಇವರು ನುಡಿದರು.

. . . . . . . . .

ಅವರು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ವಿದ್ಯಾಲಯದ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ಶಿಸ್ತು ಸಾಮಾಜಿಕ ಪ್ರಜ್ಞೆ, ಉತ್ತಮ ನಾಯಕತ್ವ ಬೆಳೆಸಲು ಸಂಘಗಳು ಸಹಾಯ ಮಾಡುತ್ತದೆ. ಇಂದು ವಿದ್ಯಾವಂತರಿಂದ ಸಮಾಜಘಾತುಕ ಕೆಲಸಗಳು ನಡೆಯುತ್ತಿದೆ ಹಾಗಾಗಿ ವಿದ್ಯಾರ್ಥಿಗಳು ಇದಕ್ಕೆ ಅವಕಾಶ ಮಾಡಿಕೊಡದೆ ಉತ್ತಮ ಆಲೋಚನೆಯೊಂದಿಗೆ ಹಿರಿಯರ ಅನುಭವದ ಮಾತುಗಳನ್ನು ಗೌರವಿಸಿ, ಜೀವನದಲ್ಲಿ ಅಳವಡಿಸಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿಗಳಾದ ಶ್ರೀ ಕೃಷ್ಣಶರ್ಮ ಇವರು ವಿವಿಧ ಸಂಘಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು, ಪಠ್ಯದಲ್ಲಿ ಕಲಿತ ಸಂಗತಿಗಳನ್ನು ನಿಜ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೇಯ, ಕಲಾ ಸಂಘದ ಅಧ್ಯಕ್ಷರಾದ ಕೀರ್ತನಾ ವಿನೋದ್, ವಿಜ್ಞಾನ ಮತ್ತು ಪರಿಸರ ಸ್ನೇಹಿ ಸಂಘದ ಅಧ್ಯಕ್ಷರಾದ ಚೈತನ್ಯ ಡಿ ಎಂ, ಕ್ರೀಡಾ ಸಂಘದ ಅಧ್ಯಕ್ಷರಾದ ಸೌಜನ್ಯ.ಕೆ, ಶಾಲಾ ವಿದ್ಯಾರ್ಥಿ ನಾಯಕ ನಮನ್.ಸಿ.ಎಲ್ ಉಪಸ್ಥಿತರಿದ್ದರು.
ಮುಖ್ಯ ಗುರುಗಳಾದ ಸತ್ಯಶಂಕರ್ ಎಂ ಸ್ವಾಗತಿಸಿದರು. ಶಿಕ್ಷಕಿ ಮಾಲಿನಿ ಎಂ ವಂದಿಸಿದರು.ಶಿಕ್ಷಕಿ ಲಕ್ಷ್ಮೀ ಈರಕ್ಕನವರ್ ಅವರು ಕಾರ್ಯಕ್ರಮ ನಿರೂಪಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading