Ad Widget

ಉಲ್ಲಾಸ್ ಕಜ್ಜೋಡಿ ಬರೆದ ಮೊದಲ ಕೃತಿ “ಜೀವನಯಾನ” ಕವನ ಸಂಕಲನ ಬಿಡುಗಡೆ

ಅಮರ ಸುದ್ದಿ ವಾರಪತ್ರಿಕೆಯ ವರದಿಗಾರ ಉಲ್ಲಾಸ್ ಕಜ್ಜೋಡಿ ಬರೆದ ಚೊಚ್ಚಲ ಕೃತಿ “ಜೀವನಯಾನ” ಕವನ ಸಂಕಲನವು ಜೂ.20 ರಂದು ಸಂಧ್ಯಾರಶ್ಮಿ ಸಾಹಿತ್ಯ ಸಂಘ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕುರುಂಜಿಬಾಗ್ ನ ಸಂಧ್ಯಾರಶ್ಮಿ ಸಭಾಂಗಣದಲ್ಲಿ ನಡೆದ ಸಾಹಿತಿ ಕೆ.ಆರ್ ತೇಜಕುಮಾರ್ ಬಡ್ಡಡ್ಕ ರವರ ವ್ಯಕ್ತಿತ್ವ ಹಾಗೂ ಕೃತಿ ಪರಿಚಯದ “ತಿಂಗಳ ಸಾಹಿತ್ಯ ಸಂವಾದ ಮಾಲಿಕೆ” ಕಾರ್ಯಕ್ರಮದಲ್ಲಿ  ಬಿಡುಗಡೆಗೊಂಡಿತು. ಸಾಹಿತಿಗಳಾದ ಅರವಿಂದ ಚೊಕ್ಕಾಡಿ ಕೃತಿ ಬಿಡುಗಡೆಗೊಳಿಸಿದರು.

. . . . . . . . .


ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೀಮತಿ ಲೀಲಾ ದಾಮೋದರ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದರು. ನಿವೃತ್ತ ಉಪನ್ಯಾಸಕ ರಾಮಚಂದ್ರ ಪಳಂಗಾಯ ರವರು ವ್ಯಕ್ತಿತ್ವ ಪರಿಚಯ ಮಾಡಿದರು. ನಿವೃತ್ತ ಉಪ ಪ್ರಾಂಶುಪಾಲ ಬಾಬು ಮಾಸ್ತರ್ ಅಚ್ರಪ್ಪಾಡಿ ರವರು ಕೃತಿ ಪರಿಚಯ ಮಾಡಿದರು.
ಈ ಸಂದರ್ಭದಲ್ಲಿ ಸಾಹಿತಿ ಕೆ.ಆರ್ ತೇಜಕುಮಾರ್ ಬಡ್ಡಡ್ಕ, ಬಂಟಮಲೆ ಅಕಾಡೆಮಿ ಅಧ್ಯಕ್ಷರಾದ ಸಾಹಿತಿ ಎ.ಕೆ ಹಿಮಕರ, ಸುಳ್ಯ ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷರಾದ ಡಾ| ಎಸ್.ರಂಗಯ್ಯ ಮಾತನಾಡಿದರು. ಗೋಪಾಲಕೃಷ್ಣ ಆಶಯ ಗೀತೆ ಹಾಡಿ ಎಲ್ಲರನ್ನು ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ರವರು ನಿರೂಪಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading