Ad Widget

ಮರ ಬಿದ್ದು ಕಾಲು ಸೇತುವೆಯ‌ ತಡೆಬೇಲಿಗೆ ಹಾನಿ – ಅಪಾಯಕಾರಿ ಸ್ಥಿತಿಯಲ್ಲಿದ್ದು ಶೀಘ್ರ ದುರಸ್ತಿ ಪಡಿಸಬೇಕಿದೆ !

ಬೆಳ್ಳಾರೆ ಗ್ರಾಮದ ಬೂಡು ಎಂಬಲ್ಲಿ ಕೆಲದಿನಗಳ ಹಿಂದೆ ಕಾಲು ಸೇತುವೆಯ ತಡೆಬೇಲಿಗಳು ಮರ ಬಿದ್ದು ಜಖಂಗೊಂಡಿದ್ದು ಒಂದು ಬದಿಯ ತಡೆಬೇಲಿ ಭಾರೀ ನೀರಿಗೆ ಕೊಚ್ಚಿ ಹೋಗಿದೆ ಎಂದು ತಿಳಿದು ಬಂದಿದೆ. ಈ ಕಾಲು ಸೇತುವೆಯ ಎರಡು ಬದಿಗಳು ಹತ್ತುವಲ್ಲಿ ಮತ್ತು ಇಳಿಯುವಲ್ಲಿ ತುಂಬಾ ತಗ್ಗಿನಿಂದ ಕೂಡಿದ್ದು ಅದನ್ನೂ ಕೂಡಾ ಸರಿಪಡಿಸಬೇಕಾಗಿದೆ. ಸುಮಾರು ಒಂದೂವರೆ ವರುಷಗಳ ಹಿಂದೆ ಈ ತಡೆಬೇಲಿಗಳನ್ನು ನಿರ್ಮಿಸಲಾಗಿದೆ. ಈ ಮಳೆಗಾಲದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪುಟಾಣಿ ಮಕ್ಕಳು ಸಾರ್ವಜನಿಕರು ಈ ಕಾಲು ಸೇತುವೆಯನ್ನು ದಾಟಿ ಹೋಗುತ್ತಿದ್ದು ತಡೆಬೇಲಿ ರಹಿತವಾಗಿರುವ ಈ ಸಂದರ್ಭದಲ್ಲಿ ದಾಟುವಾಗ ಅಪಾಯ ಎದುರಾಗುವ ಸಂಭವವಿದ್ದು ಸ್ಥಳೀಯಾಡಳಿತ ಆದಷ್ಟು ಬೇಗ ಗಮನ ಹರಿಸಬೇಕಾಗಿದೆ. ಸದ್ಯ ದಾಟುವುದಕ್ಕೆ ನಿಷೇಧ ಫಲಕ ಅಳವಡಿಸಿದ್ದು ಕಂಡು ಬರುತ್ತಿದ್ದು ಬೇಗನೆ ಕಾಲು ಸೇತುವೆ ದಾಟಲು ಯೋಗ್ಯ ವ್ಯವಸ್ಥೆ ಕಲ್ಪಿಸಬೇಕಾಗಿದೆ.

. . . . . . . . .

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading