Ad Widget

ನಿಂತಿಕಲ್ಲು ವಲಯದ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಸಭೆ – ಅಧ್ಯಕ್ಷರಾಗಿ ಅನೂಪ್ ಕುಮಾರ್ ಆಳ್ವ ಕಟ್ಟೆಬೀಡು, ಕಾರ್ಯದರ್ಶಿಯಾಗಿ ರಮೇಶ್ ಕಲ್ಮಡ್ಕ



ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ನಿಂತಿಕಲ್ಲು ವಲಯದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಸಭೆಯು ವಲಯದ ಭಜನಾ ಪರಿಷತ್ತಿನ ಅಧ್ಯಕ್ಷರಾದ ಆನಂದ ಆರೆಂಬಿ ಅಧ್ಯಕ್ಷತೆಯಲ್ಲಿ ಕೇರ್ಪಡ ಮಹಿಷಮರ್ದಿನಿ ಸಭಾಂಗಣದಲ್ಲಿ ನಡೆಯಿತು.
ಶ್ರೀ ಮಹಿಷಮರ್ದಿನಿ ದೇವಸ್ಥಾನ ನಿಕಟ ಪೂರ್ವ ಅಧ್ಯಕ್ಷರಾದ ವಸಂತ ನಡುಬೈಲ್ ರವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಈ ಸಭೆಯಲ್ಲಿ ಸುಳ್ಯ ತಾಲೂಕಿನ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷರಾದ ಸೋಮಶೇಖರ ಪೈಕ ಮತ್ತು ಕಾರ್ಯದರ್ಶಿ ಗಳಾದ ಟಿ ನ್ ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಭಜನಾ ಪರಿಷತ್ತಿನ ಕಾರ್ಯವೈಕರಿ ಹಾಗೂ ಭಜನೆಯಿಂದ ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ಮಕ್ಕಳಿಗೆ ಸಂಸ್ಕಾರ ಕಳಿಸುವಂತಹ ಪುಣ್ಯದ ಕಾರ್ಯದಲ್ಲಿ ನಾವೆಲ್ಲರೂ ಭಾಗವಹಿಸಬೇಕು. ಒಂದು ಉತ್ತಮ ಸಂಘಟನೆಯನ್ನು ನಿರ್ಮಾಣ ಮಾಡಲು ಭಜನಾ ಮಂಡಳಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು. ಹಾಗೂ ಈ ವರ್ಷದ ಭಜನೋತ್ಸವ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ವಲಯದಲ್ಲಿ ನಡೆಸುವುದಾಗಿ ತಿಳಿಸಿದರು.

ಮಹಿಷಮರ್ದಿನಿ ದೇವಸ್ಥಾನದ ಧಾರ್ಮಿಕ ಹಾಗೂ ಸಂಸ್ಕಾರ ಶಿಕ್ಷಣ ಸಮಿತಿ ಅಧ್ಯಕ್ಷರಾದ ದ್ರುವಕುಮಾರ್ ನಿಂತಿಕಲ್ಲು ಮಾತನಾಡಿ ಸಮಾಜಕ್ಕೆ ಉತ್ತಮ ಸಂಸ್ಕಾರ, ಸಂಪ್ರದಾಯ ಗಳನ್ನು ಬೆಳೆಸುವಲ್ಲಿ ಇಂತಹ ಸಂಸ್ಥೆಗಳೊಂದಿಗೆ ಜನರು ಸಹಕಾರ ನೀಡುವ ಅಗತ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ನೂತನ ವಲಯ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಅನೂಪ್ ಕುಮಾರ್ ಆಳ್ವ ಕಟ್ಟೆಬೀಡು, ಉಪಾಧ್ಯಕ್ಷರಾಗಿ ದ್ರುವಕುಮಾರ್ ನಿಂತಿಕಲ್ಲು, ಕಾರ್ಯದರ್ಶಿಯಾಗಿ ರಮೇಶ್ ಕಲ್ಮಡ್ಕ, ಜೊತೆ ಕಾರ್ಯದರ್ಶಿ ವಸಂತ ಹುದೇರಿ, ಕೋಶಾಧಿಕಾರಿ – ವಿಶಾಲಾಕ್ಷಿ, ಸಮಿತಿಯ ಸದಸ್ಯರಾಗಿ ಸುಂದರ ಗೌಡ ಆರೆಂಬಿ, ವಸಂತ ನಡುಬೈಲು, ಪ್ರಕಾಶ್ ರೈ ಎಣ್ಮೂರು, ಸೂರಪ್ಪ ಗೌಡ ಅಲೆಕ್ಕಾಡಿ , ಸುಹಾಸ್ ಅಲೆಕ್ಕಾಡಿ ರವರನ್ನು ಆಯ್ಕೆ ಮಾಡಲಾಯಿತು.
ವಲಯದ ಭಜನಾ ಪರಿಷತ್ತಿನ ನಿರ್ದೇಶಕರಾದ ಆನಂದ ಆರೆಂಬಿ ಕಾರ್ಯಕ್ರಮದ ಬಗ್ಗೆ ಶುಭ ಹಾರೈಸಿದರು.
ನೂತನ ಆಯ್ಕೆಯಾದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ವಲಯದ ಅಧ್ಯಕ್ಷರಾದ ಅನೋಪ್ ಕುಮಾರ್ ಆಳ್ವ ರವರು ಮುಂದಿನ ದಿನಗಳಲ್ಲಿ ವಲಯದ ಭಜನಾ ಪರಿಷತ್ ಉತ್ತಮ ರೀತಿಯಲ್ಲಿ ಮುಂದುವರಿಸಲು ಸಹಕಾರವನ್ನು ಕೋರಿದರು.
ಸಭೆಯಲ್ಲಿ ನಿಂತಿಕಲ್ಲು ವಲುದ ಭಜನಾ ಮಂಡಳಿ ಸದಸ್ಯರು ಹಾಗೂ ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕು. ರಾಜೇಶ್ವರಿ ಪ್ರಾರ್ಥಿಸಿದರು. ಪುಳಿಕುಕ್ಕು ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ರಾಮಣ್ಣ ಸ್ವಾಗತಿಸಿದರು. ವಲಯದ ಮೇಲ್ವಿಚಾರಕರಾದ ಸವಿತಾ ಶೆಟ್ಟಿ ನಿರೂಪಿಸಿದರು. ಕಲ್ಮಡ್ಕ ವಲಯ ಸೇವಾ ಪ್ರತಿನಿಧಿ ರತ್ನಾವತಿ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading