Ad Widget

ಗುತ್ತಿಗಾರು:-ಶ್ರೀ ಮಂಜುನಾಥೇಶ್ವರ ವಲಯ ಭಜನಾ ಪರಿಷತ್ತು ಸಭೆ ಹಾಗೂ ನೂತನ ವಲಯ ಸಮಿತಿ ರಚನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಹಾಗೂ ಶ್ರೀ ಮಂಜುನಾಥೇಶ್ವರ ವಲಯ ಭಜನಾ ಪರಿಷತ್ ನ ಸಭೆಯನ್ನು ವಲಯ ಭಜನಾ ಪರಿಷತ್ತು ನ ಅಧ್ಯಕ್ಷರಾದ  ವೆಂಕಟ್ ಹುಲಿಕೆರೆ ಇವರ ಅಧ್ಯಕ್ಷತೆಯಲ್ಲಿ ಗುತ್ತಿಗಾರಿನ ಯುವಕ ಮಂಡಲದ ಸಭಾಭವನದಲ್ಲಿ ನಡೆಸಲಾಯಿತು
ಈ ಸಭೆಯಲ್ಲಿ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷರಾದ  ಸೋಮಶೇಖರ ಪೈಕರವರು ದೀಪ ಪ್ರಜ್ವಲಿಸುವ ಮುಖೇನ ಚಾಲನೆಯನ್ನು ನೀಡಿದರು.
ಈ ಸಭೆಯಲ್ಲಿ ಸುಳ್ಯ ತಾಲೂಕಿನ ಶ್ರೀ ಕ್ಷೇ.ಧ ಗ್ರಾ ಯೋಜನೆಯ ಯೋಜನಾಧಿಕಾರಿಯವರಾದ  ಮಾಧವ ಗೌಡ ರವರು ಪ್ರಾಸ್ತಾವಿಕ ನುಡಿಯೊಂದಿಗೆ ತಾಲೂಕು ಭಜನಾ ಪರಿಷತ್ತು ನ ಕಾರ್ಯವೈಖರಿ ಹಾಗೂ ಭಜನೆಯಿಂದ ನಮ್ಮ ಸಂಸ್ಕೃತಿ ಆಚಾರ – ವಿಚಾರಗಳು ಮಕ್ಕಳಿಗೆ ಸಂಸ್ಕಾರ ಕಲಿಸುವಂತಹ ಪುಣ್ಯಕಾರ್ಯದಲ್ಲಿ ನಾವೆಲ್ಲರೂ ಭಾಗವಹಿಸಬೇಕು ಹಾಗೂ ತಾಲೂಕು. ಮತ್ತು ವಲಯವಾರು ಭಜನೋತ್ಸವ ಕಾರ್ಯಕ್ರಮಗಳ ಬಗ್ಗೆ ಮಾತುಗಳನ್ನಾಡಿದರು.
ಆ ನಂತರ ಹೊಸ ಸಮಿತಿಯನ್ನು 3 ವರ್ಷಗಳ ಅವಧಿಗೆ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ. ಪೂರ್ಣಚಂದ್ರ ಬೊಮ್ಮ ದೇರೆ – ಪೈಕ, ಕಾರ್ಯದರ್ಶಿಯಾಗಿ ರಮೇಶ್ ಮೆಟ್ಟಿನಡ್ಕ, ಉಪಾಧ್ಯಕ್ಷರಾಗಿ ಶ್ರೀಮತಿ ರತಿ ಸಾಲ್ತಾಡಿ, ಜತೆ ಕಾರ್ಯದರ್ಶಿ ಲೀಲಾಧರ ಬದಿಯಡ್ಕ ಕೋಶಾಧಿಕಾರಿ ಶ್ರೀಮತಿ ಶಶಿಕಲಾ ಅಡ್ಡನಪಾರೆಯವರನ್ನು ಹಾಗೂ ಸದಸ್ಯರುಗಳಾಗಿ ಶ್ರೀಮತಿ ಶೋಭಾ ಪರಮಲೆ, ಮೋಹನಾಂಗಿ ಹುದೇರಿ, ವಿಜಯ ಸಾಲ್ತಾಡಿ, ಸುಧೀರ್ ಅಮೆ, ಹರೀಶ್ ಕೊಯಿಲ,, ನರ್ಸಪ್ಪ ಕಜೆ, ಧನ್ಯಕುಮಾರ ದೇರುಮಜಲು ಹಾಗೂ ಜಯಶ್ರೀ ಚೆಮ್ನೂರು ಇವರನ್ನು ಆಯ್ಕೆ ಮಾಡಲಾಯಿತು.
ತಾಲೂಕು ಭಜನಾ ಪರಿಷತ್ತು ನ ಅಧ್ಯಕ್ಷರಾದ ಸೋಮಶೇಖರ ಪೈಕ ಮಾತನಾಡಿ ಗುತ್ತಿಗಾರಿನ ಅಷ್ಟು ಭಜನಾ ಮಂದಿರಗಳ ಭಜಕರ ತ೦ಡ ಹಾಗೂ ಇಲ್ಲಿನ ಉತ್ಸಾಹಿ ಯುವಕರು ಮತ್ತು ತರಭೇತಿ ನೀಡುತ್ತಿರುವ ರಮೇಶ ಮೆಟ್ಟಿನಡ್ಕ ಇವರೆಲ್ಲರ ಸಹಕಾರದಿಂದ ಉತ್ತಮವಾದ ಕಾರ್ಯಕ್ರಮಗಳನ್ನು ನಡೆಸೋಣ ಎಂದು ತಿಳಿಸಿ. ನೂತನ ಸಮಿತಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ತಾಲೂಕು ಭಜನಾ ಪರಿಷತ್ತು ನ ಕಾರ್ಯದರ್ಶಿ ಟಿ ಎನ್ ಸತೀಶ್, ನಿರ್ದೇಶಕರಾದ ವಿಜಯ ಚಾರ್ಮತ,  ಶ್ರೀಮತಿ ರವಿಕಲಾ ಚೆಮ್ನೂರು ವಲಯ ಮೇಲ್ವಿಚಾರಕರಾದ ರಾಜೇಶ್ ಉಪಸ್ಥಿತರಿದ್ದು ನೂತನ ಸಮಿತಿಗೆ ಶುಭ ಹಾರೈಸಿದರು.

. . . . . . . . .

ಗುತ್ತಿಗಾರು ವಲಯದ 11 ಭಜನಾ ತಂಡದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ವಲಯ ಮೇಲ್ವಿಚಾರಕರಾದ ರಾಜೇಶ್ ರವರು ಎಲ್ಲರನ್ನು ಸ್ವಾಗತಿಸಿ ತಿಮ್ಮಪ್ಪ ಕಡ್ಯ ಧನ್ಯವಾದವಿತ್ತರು ಕಾರ್ಯಕ್ರಮದ ನಿರೂಪಣೆಯನ್ನು ಹರೀಶ್ವಂದ್ರ ಕುಳ್ಳಂಪಾಡಿಯವರು ನೆರವೇರಿಸಿದರು

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading