Ad Widget

ಕಲ್ಮಕಾರು : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಹಾಗೂ ಹಣ್ಣಿನ ಗಿಡಗಳ ವಿತರಣೆ

“ನಮ್ಮ ಪರಿಸರದಲ್ಲಿ ನಾವು ಪ್ರಕೃತಿ ಜೊತೆಗೆ ಬೆಳೆದರೂ ಪ್ರಕೃತಿಯ ಮಹತ್ವ ನಮಗೆ ತಿಳಿದಿಲ್ಲ. ಇಂದು ಪ್ರಕೃತಿ ವಿಕೋಪ ಆದ ಮೇಲೆ ನಮಗೆ ಪ್ರಕೃತಿಯ ಮಹತ್ವ ತಿಳಿಯುತ್ತದೆ.  ನಮ್ಮ ಬೆಳವಣಿಗೆಯ ಪರಿಣಾಮದಿಂದಾಗಿ ಇಂದು ಪ್ರಕೃತಿ ವಿಕೋಪ ಉಂಟಾಗಿದೆ” ಎಂದು ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿಗಳಾದ ವಿಮಲ್ ಬಾಬು ಅವರು ಹೇಳಿದರು.

. . . . . . . . .


ಲಯನ್ಸ್  ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆ ಮತ್ತು ಕಲ್ಮಕಾರು ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇದರ ಜಂಟಿ ಆಶಯದಲ್ಲಿ  ಇದರ ವತಿಯಿಂದ ವನಮಹೋತ್ಸವ ಹಾಗೂ ಹಣ್ಣಿನ ಗಿಡಗಳ ವಿತರಣೆ ಕಾರ್ಯಕ್ರಮವು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಮಕಾರು ಇಲ್ಲಿ ನೆರವೇರಿಸಿ ಅವರು ಮಾತನಾಡಿದರು.

. . . . . . .


ಸಮಾರಂಭದಲ್ಲಿ ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾದ ರಾಜೇಶ್ ಎನ್ ಎಸ್  ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು.  ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿಗಳಾದ ವಿಮಲ್ ಬಾಬು ಅವರು ಶಾಲಾ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯ ಗುರುಗಳಾದ ಮಾಲಿನಿ ಕೆ ಎಸ್ ಹಾಗೂ ಹಾಗೂ ಎಸ್ಡಿಎಂಸಿ ಅಧ್ಯಕ್ಷರಾದ ದಿವ್ಯ ಮೆದುಮನೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಾಗೂ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ  ರಾಮಚಂದ್ರ ಪಳಂಗಾಯ,  ಊರಿನ ಹಿರಿಯರಾದ ಉಮೇಶ್ ಬಿಳಿಮಲೆ, ಯಶವಂತ ಬಿಳಿಮಲೆ ಮತ್ತು ಎಸ್.ಡಿ.ಎಂ.ಸಿಯ ಮಾಜಿ ಅಧ್ಯಕ್ಷರುಗಳಾದ ರಾಧಾಕೃಷ್ಣ ಬಿಲ್ಲಾರಮಜಲು, ಗಣೇಶ್ ಭಟ್ ಇಡ್ಯಡ್ಕ ಹಾಗೂ ಶಿವಾನಂದ ಬಿಳಿಮಲೆ ಮತ್ತು ದತ್ತಿನಿದಿ ದಾನಿಗಳಾದ ಧರ್ಮರಾಜ ಕೆ.ಪಿ, ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಸುಮ ಸುಲೋಚನ ಇದ್ದರು. ಸಮಾರಂಭದಲ್ಲಿ ಪ್ರೊಫೆಸರ್ ಕೆ ರಂಗಯ್ಯ ಶೆಟ್ಟಿಗಾರ್ ಪ್ರಾಸ್ತವಿಕ  ಮಾತುಗಳಾಡಿದರು. ಲಯನ್ಸ್  ಕ್ಲಬ್ ಇದರ ಕಾರ್ಯದರ್ಶಿಯಾದ ಕೃಷ್ಣಕುಮಾರ್ ಬಾಳುಗೋಡು ಇವರು ಸ್ವಾಗತಿಸಿದರು, ಲಯನ್ಸ್  ಲೋಕೇಶ್ ಬಿ.ಎನ್ ಇವರು ವಂದಿಸಿದರು. ಲಯನ್ಸ್ ದೀಪಕ್ ಎಚ್ ಪಿ, ದಿನೇಶ್ ಮೊಗ್ರ ಇದ್ದರು. ಕುಕ್ಕೆ ಶ್ರೀ  ಸುಬ್ರಹ್ಮಣ್ಯ ದೇವಳದಿಂದ ಕೊಡ ಮಾಡಿದ 30 ಟ್ರೀ ಗಾರ್ಡ್ ನ್ನು ಹಣ್ಣಿನ ಗಿಡಗಳಿಗೆ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಹಿರಿಯರು ವಿದ್ಯಾರ್ಥಿಗಳ ಪೋಷಕರು ಹಾಗೂ ದಾನಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading