Ad Widget

ಕವನ : ಇರುವುದೊಂದೇ ಜೀವನ…


. . . . . .


ಇರುವುದೊಂದೇ ಜೀವನ ಖುಷಿಯಿಂದಲೇ ಬದುಕಬೇಕು ಎನ್ನುವರು ಎಲ್ಲರೂ, ಆದರೆ ಕಷ್ಟ-ನೋವು, ಜವಾಬ್ದಾರಿಗಳ ನಡುವೆ ಖುಷಿಯನ್ನು ಹುಡುಕುವುದಾದರೂ ಹೇಗೆ ಹುಡುಕಿದವರೇ ಬಲ್ಲರು…
ಇತರರೆದುರು ಖುಷಿಯಿಂದ ನಗುನಗುತ್ತಲೇ ಇರುವರು ಎಲ್ಲರೂ, ಅವರವರ ಬದುಕಿನ ಕಷ್ಟ-ನೋವುಗಳನ್ನು ಅವರವರೇ ಬಲ್ಲರು, ಇತರರೆದುರು ಖುಷಿಯಿಂದಿದ್ದರೂ ಒಳಗೊಳಗೆ ತಮ್ಮ ಬದುಕಿನ ಕಷ್ಟಗಳನ್ನು ನೆನೆದು ನೋವು ಅನುಭವಿಸುತ್ತಿರುವರು ಎಲ್ಲರೂ…
ಬಾಲ್ಯದಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಕಾಣುವರು ಎಲ್ಲರೂ, ದೊಡ್ಡವರಾದಾಗಲೇ ತಿಳಿಯುವುದು ಬದುಕಿನಲ್ಲಿ ಕಂಡ ಕನಸುಗಳನ್ನು ನನಸಾಗಿಸುವುದು ಅದೆಷ್ಟು ಕಷ್ಟವೆಂದು, ಬದುಕಿನ ಕಠಿಣ ಪರಿಸ್ಥಿತಿಗಳು ಹೇಗೆ ನಮ್ಮ ಕನಸುಗಳನ್ನು ಕಣ್ಣೆದುರೇ ಹೊಸಕಿ ಹಾಕುತ್ತವೆ ಎಂದು…
ಆದರೂ ಬದುಕಿನ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಾ ಕಷ್ಟ-ನೋವುಗಳನ್ನು ಅನುಭವಿಸುತ್ತಾ ತಮ್ಮ ಕನಸುಗಳನ್ನು ನನಸಾಗಿಸಿಕೊಂಡು ಗೆದ್ದವರು ಇರುವರು ಅನೇಕರು, ಅವರ ಬದುಕೇ ಸ್ಪೂರ್ತಿಯಾಗಬಹುದಲ್ಲವೇ ನಮ್ಮ ಬದುಕಿನ ನಾಳೆಗಳಿಗೆ, ನಾವು ಕಂಡ ಕನಸುಗಳಿಗೆ…!?
“ಇರುವುದೊಂದೇ ಜೀವನ, ಇಂದಲ್ಲಾ ನಾಳೆ ನನಸಾಗಿಸಲೇಬೇಕು ನಾವು ಕಂಡ ಕನಸುಗಳನ್ನ…”
✍️ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!