ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಮತ್ತು ತಾಲೂಕಿನಾದ್ಯಂತ ಸಾಮಾಜಿಕ ಹೋರಾಟ ಮತ್ತು ಭಜನಾ ತಂಡದಲ್ಲಿ ಕಾರ್ಯನಿರ್ವಹಿಸುತ್ತ ಸಂಘಟನೆಯನ್ನು ಮಾಡುತ್ತಿದ್ದ ಸಮಾಜ ಸೇವಕಿ ಸಂಧ್ಯಾ ಮಂಡೆಕೋಲು ಇಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಇವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್, ಪ್ರಮುಖ ನಾಯಕರುಗಳಾದ ಜಿ ಕೃಷ್ಣಪ್ಪ , ಶಕುಂತಲಾ ಶೆಟ್ಟಿ , ಪಿ ಸಿ ಜಯರಾಂ, ಧನಂಜಯ ಅಡ್ಪಂಗಾಯ, ಎಂ ಎಸ್ ಮೊಹಮ್ಮದ್, ಜಯಪ್ರಕಾಶ್ ರೈ , ವೆಂಕಪ್ಪ ಗೌಡ , ಭರತ್ ಮುಂಡೋಡಿ, ಹಮೀದ್ ಕುತ್ತಮೊಟ್ಟೆ , ಟಿ.ಎಂ. ಶಾಹಿದ್, ಕಿರಣ್ ಬುಡ್ಲೆಗುತ್ತು , ಸದಾನಂದ ಮಾವಜಿ , ಅಶೋಕ್ ಎಡಮಲೆ, ಪಿ ಎಸ್ ಗಂಗಾಧರ, ರಂಜಿತ್ ರೈ ಮೇನಾಲ, ಡಾ.ರಘು, ಕಿರ್ತನ್ ಕೊಡಪಾಲ ಮತ್ತಿತರರು ಉಪಸ್ಥಿತರಿದ್ದರು.
- Saturday
- February 1st, 2025