Ad Widget

ಗಾಂಧಿನಗರ ಕೆಪಿಎಸ್: ಪಿಯುಸಿ ಕಲಾ ವಿಭಾಗ ಮತ್ತು ವಿಜ್ಞಾನ ವಿಭಾಗದಲ್ಲಿ ಶೇ. ೧೦೦, ವಾಣಿಜ್ಯ ವಿಭಾಗದಲ್ಲಿ ಶೇ. ೯೩

ಸುಳ್ಯ ಗಾಂಧಿನಗರದ ಕೆಪಿಎಸ್ ಪಿಯುಸಿ ವಿಭಾಗದ ಫಲಿತಾಂಶ ಪ್ರಕಟಗೊಂಡಿದ್ದು, ಕಲೆ ಮತ್ತು ವಿಜ್ಞಾನ ವಿಭಾಗದಲ್ಲಿ ಶೇಕಡ ೧೦೦ ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ ೯೩% ಲಭಿಸಿದೆ.ಕಲಾ ವಿಭಾಗದಲ್ಲಿ ರಾಜೇಶ ೫೬೭ ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದರೆ , ಫಾತಿಮತ್ ಜಾಯಿದಾ ೫೬೦ ಅಂಕಗಳಿಸಿ ವಿಜ್ಞಾನ ವಿಭಾಗದಲ್ಲಿ ಪ್ರಥ ಸ್ಥಾನದಲ್ಲಿದ್ದರೆ. ಫಾತಿಮತ್ ತಂಬ್ರಿನ ೪೬೭ ಅಂಕಗಳಿಸಿ ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದರೆ. ಒಟ್ಟು ಏಳು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟು ೪೮ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೪೭ ಮಂದಿ ಉತ್ತೀರ್ಣರಾಗಿದ್ದಾರೆ.

. . . . .

Related Posts

error: Content is protected !!