ವಿಪಕ್ಷಗಳ ಸದ್ದಡಗಿಸುವ ಕೆಲಸ ಕಾರ್ಯಗಳನ್ನು ಮೋದಿ ಸರಕಾರ ಮಾಡುತ್ತಿದೆ- ಪಿಸಿ ಜಯರಾಮ್ // ಬಿಟ್ಟಿ ಭಾಗ್ಯವೆಂದವರು ನಿಮ್ಮ ಬಳಿ ಬಂದಾಗ ಗೃಹಲಕ್ಷ್ಮಿ , ಗೃಹ ಜ್ಯೋತಿ ,ಶಕ್ತಿ ಸೇರಿದಂತೆ ಎಲ್ಲಾ ಯೋಜನೆಗಳನ್ನು ನೀವು ಪಡೆದುಕೊಳ್ಳುತ್ತಿಲ್ಲವೇ ಎಂದು ಪ್ರಶ್ನಿಸಿ – ಭರತ್ ಮುಂಡೋಡಿ
ಸುಳ್ಯ : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಆಯ್ಕೆಯದ ಬಳಿಕ ಇಂಡಿಯಾ ಒಕ್ಕೂಟದಲ್ಲಿರುವ ಪಕ್ಷಗಳ ಜಂಟಿ ಪತ್ರಿಕಾಗೋಷ್ಠಿಯು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮರವರ ನೇತೃತ್ವದಲ್ಲಿ ಏ.04 ರಂದು ನಡೆಯಿತು .
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ ಮತನಾಡಿ ದೇಶದಲ್ಲಿ ಇದೀಗ ಸರ್ವಾಧಿಕಾರಿ ಧೋರಣೆಯ ನಾಯಕರ ಆಡಳಿತ ನಡೆಯುತ್ತಿದೆ. ವಿಪಕ್ಷಗಳ ಸದ್ದಡಗಿಸುವ ಕೆಲಸ ಕಾರ್ಯಗಳನ್ನು ಮೋದಿ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು. ಅಲ್ಲದೇ ಈ ಭಾರಿಯ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪದ್ಮರಾಜ್ ರಾಮಯ್ಯ ಪೂಜಾರಿಯವರನ್ನು ಕರ್ನಾಟಕ ಸರಕಾರದ ಅಭಿವೃದ್ಧಿ ಯೋಜನೆಗಳು ಕೈ ಹಿಡಿಯಲಿದೆ ಎಂದು ಹೇಳಿದರು .
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ಭರತ್ ಮುಂಡೋಡಿ ಮತನಾಡುತ್ತಾ ಚುನಾವಣಾ ಬಾಂಡ್ ಎಂಬುವುದೇ ಒಂದು ಭ್ರಷ್ಟಾಚಾರ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು. ಅಲ್ಲದೇ ಇದೀಗ ಯುವ ಜನತೆ ಹೃದಯಾಘಾತವಾಗಿ ಸಾವು ಸಂಭವಿಸಲು ಕರೋನ ಸಂದರ್ಭದಲ್ಲಿ ನೀಡಿದ ಚುಚ್ಚುಮದ್ದೆ ಕಾರಣವೆಂದರು. ಅಲ್ಲದೇ ಇದೇ ಚುಚ್ಚುಮದ್ದು ತಯಾರು ಮಾಡಿದವರು ಬಿಜೆಪಿ ಪಕ್ಷಕ್ಕೆ ನೀಡಿದ ದೇಣಿಗೆ ನೀಡಿದ್ದು ಕಂಡಾಗ ತಿಳಿಯುತ್ತದೆ ಎಂದು ಹೇಳಿದರು. ಇದೀಗ ರಾಜ್ಯದ ಪಂಚ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯವೆಂದು ಹೇಳುತ್ತಿರುವ ಬಿಜೆಪಿ ಮಹಿಳಾ ಕಾರ್ಯಕರ್ತರು ಮನೆ ಮನೆಗೆ ಬಂದಾಗ ಜನ ಪ್ರಶ್ನಿಸಬೇಕು. ನೀವು ಈ ಭಾಗ್ಯಗಳನ್ನು ಪಡೆದುಕೊಳ್ಳುತ್ತಿಲ್ಲವೇ? ಭಾಗ್ಯಗಳನ್ನು ಬಿಟ್ಟಿಭಾಗ್ಯಗಳು ಎಂದವರು ಸ್ವ ಇಚ್ಛೆಯಿಂದ ಹಿಂದಿರುಗಿಸುವ ಕೆಲಸ ಯಾಕೆ ಮಾಡಿಲ್ಲಾ ಎಂದು ಪ್ರಶ್ನಿಸಿದರು. ಸಂವಿಧಾನದ ಬದಲಾವಣೆ ಸೇರಿದಂತೆ ದೇಶದಲ್ಲಿ ಸರ್ವಾಧಿಕಾರಿ ಧೋರಣೆ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎಂದು ಹೇಳಿದರು. ವಿಶ್ವ ನಾಯಕ ಎಂದು ಬಿಂಬಿಸಿಕೊಳ್ಳುವಾಗ ಇಡೀ ಸುತ್ತಲಿನ ದೇಶಗಳು ಶತ್ರುಗಳಾಗಿ ತಿರುಗಿ ಬಿದ್ದಿರುವಾಗ ವಿಶ್ವನಾಯಕ ಎನ್ನಲು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು. ಅಲ್ಲದೇ ಈ ಭಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಿಶ್ಚಿತವಾಗಿ ಗೆಲುವು ಕಾಣಲಿದೆ ಎಂದರು.
ಆಮ್ ಆದ್ಮಿ ಮುಖಂಡ ಅಶೋಕ್ ಎಡಮಲೆ ಮತನಾಡಿ ದೇಶದಲ್ಲಿ ವಿರೋದ ಪಕ್ಷಗಳನ್ನು ಜೈಲಿಗೆ ಹಾಕುವ ಬೆದರಿಕೆ ಮತ್ತು ಐಟಿ , ಇಡಿಗಳಂತಹ ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ಬೆದರಿಸುತ್ತಿದೆ. ಅಲ್ಲದೆ ದೆಹಲಿ ಆಪ್ ಸರಕಾರದ ಸಚಿವೆಗೆ ನೇರವಾಗಿ ಅಧಿಕಾರಿಗಳು ಬಿಜೆಪಿ ಸೇರ್ಪಡೆ ಗೊಂಡರೆ ನಿಮ್ಮ ಮೇಲಿನ ಪ್ರಕರಣಗಳನ್ನು ಮುಂದುವರೆಸುವುದಿಲ್ಲ ಎಂದು ಆಹ್ವಾನ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದರು . ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವು ಒಂದುಗೂಡಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಾಗಿ ಕೆಲಸ ಮಾಡಲಿದೆ ಎಂದು ಹೇಳಿದರು .
ಕಮ್ಯುನಿಸ್ಟ್ ಮುಖಂಡ ಕೆ ಪಿ ರಾಬರ್ಟ್ ಡಿಸೋಜ ಮಾತನಾಡುತ್ತಾ ದೇಶದಲ್ಲಿ ಜಾತಿ ಮತ್ತು ಸಂವಿಧಾನ ಬದಲಾವಣೆ ಹೇಳಿಕೆ ಸರಿಯಲ್ಲ. ದೇಶದೆಲ್ಲೆಡೆ ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಿಗೆ ಅನುದಾನ ನೀಡದೆ ದ್ರೋಹ ಎಸಗುತ್ತಿದೆ ಎಂದು ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ಮೈತ್ರಿಯ ಮೂಲಕ ಇಂಡಿಯಾ ಒಕ್ಕೂಟ ಗೆಲ್ಲಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಸಂಚಾಲಕರಾದ ವೆಂಕಪ್ಪ ಗೌಡ , ಕಾರ್ಯದರ್ಶಿ ಪಿ ಎಸ್ ಗಂಗಾಧರ , ಮುಸ್ತಫ, ಆಮ್ ಆದ್ಮಿ ಮುಖಂಡರಾದ ಕಲಂದರ್ ಎಲಿಮಲೆ , ರಶೀದ್ ಜಟ್ಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.