Ad Widget

ಡಾ. ಅನುರಾಧಾ ಕುರುಂಜಿಯವರಿಗೆ ಶಿವಶರಣೆ ನೀಲಾಂಬಿಕೆ ಪ್ರಶಸ್ತಿ,ರಾಜ್ಯ ಮಟ್ಟದ ಕವಿಗೋಷ್ಠಿಗೆ ಆಯ್ಕೆ

ರಾಜ್ಯ ಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ 25 ಮಹಿಳಾ ಸಾಧಕಿಯರಿಗೆ ಪುರಸ್ಕಾರಸುಳ್ಯದ ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರು ಬೆಂಗಳೂರಿನ ವಿಶ್ವ ಕನ್ನಡ ಸಂಸ್ಥೆಯವರು ಕೊಡ ಮಾಡುವ ಶಿವಶರಣೆ ನೀಲಾಂಬಿಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶೈಕ್ಷಣಿಕ ಕಾರ್ಯ ಚಟುವಟಿಕೆಯ ಜೊತೆಗೆ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ ಬಿಡುವಿನ ವೇಳೆ ಇದುವರೆಗೆ ಸುಮಾರು 2100 ಕ್ಕೂ ಅಧಿಕ ತರಬೇತಿಯನ್ನು ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಾರ್ಚ್ 29, 2024 ರಂದು ಬೆಂಗಳೂರಿನ ಬಗಲಕುಂಟೆ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ನಡೆಯುವ ವಿಶ್ವ ಕನ್ನಡ ರಾಜ್ಯ ಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.. ಅನುರಾಧಾ ಕುರುಂಜಿಯವರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದು, ರಾಜ್ಯದ 25 ಮಹಿಳಾ ಸಾಧಕಿಯರು ಪುರಸ್ಕಾರ ಪಡೆಯಲಿದ್ದಾರೆ. ಇದೇ ದಿನ ನಡೆಯುವ ರಾಜ್ಯ ಮಟ್ಟದ ಮಹಿಳಾ ಕವಿಗೋಷ್ಠಿಗೂ ಡಾ. ಅನುರಾಧಾ ಕುರುಂಜಿಯನರು ಆಯ್ಕೆಯಾಗಿದ್ದು ತಮ್ಮ ಸ್ವರಚಿತ ಕವನವನ್ನು ವಾಚಿಸಲಿರುವ ಇವರು ಕುರುಂಜಿ ಪದ್ಮಯ್ಯ ಗೌಡ -ಸೀತಮ್ಮ ದಂಪತಿಗಳ ಪುತ್ರಿ, ಚಂದ್ರಶೇಖರ ಬಿಳಿನೆಲೆಯವರ ಪತ್ನಿ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading