Ad Widget

ಒಡೆದು ಆಳುವ ಮತ್ತು ಕೋಮು ದ್ವೇಷ ಹರಡುತ್ತಿದ್ದ ನಾಯಕರನ್ನು ಕೈ ಬಿಟ್ಟ ಬಿಜೆಪಿ – ಕಾಂಗ್ರೆಸ್ ವಕ್ತಾರ ಟಿ ಎಂ ಶಾಹೀದ್



ರಾಜ್ಯದಲ್ಲಿ ಕೋಮು ದ್ವೇಷವನ್ನು ಹರಡುವ ರೀತಿಯಲ್ಲಿ ಮತನಾಡುತ್ತಿದ್ದ ಲೋಕಸಭಾ ಸದಸ್ಯರು ಮತ್ತು ರಾಜ್ಯದ ಕೆಲ ಶಾಸಕರಿಗೆ ಟಿಕೇಟ್ ನಿರಾಕರಣೆ ಮೂಲಕ ಬಿಜೆಪಿಯು ಇಂದು ಒಂದು ಪಾಠ ಕಲಿತಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ವಕ್ತಾರರಾದ ಟಿ ಎಂ ಶಾಹೀದ್ ಹೇಳಿದರು .

ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ ದೇಶದಲ್ಲಿ ಹಿಂದು ಮುಸ್ಲಿಂ ಕ್ರಿಶ್ಚಿಯನ್ ಎಂದು ಒಡೆದು ಆಳುವ ನೀತಿಯನ್ನು ಅನಿಸರಿಸುತ್ತಿದ್ದ ಕಟೀಲ್ , ಪ್ರತಾಪ್ ಸಿಂಹ , ಸಿ ಟಿ ರವಿ , ಅನಂತ್ ಕುಮಾರ್ ಹೆಗ್ಡೆಯಂತವರಿಗೆ ಇದೀಗ ಟಿಕೇಟ್ ನಿರಾಕರಣೆ ಮಾಡಲಾಗಿದೆ ಇದು ಕಾಂಗ್ರೆಸ್ ಸರ್ವ ಧರ್ಮ ಜಾತಿಯನ್ನು ಒಂದೇ ಎಂದು ಸರಕಾರದ ಕೆಲಸ ಕಾರ್ಯಗಳು ಮಾಡುತ್ತಿದ್ದು ಜನ ಇದಕ್ಕೆ ಅಭೂತಪೂರ್ವ ಬೆಂಬಲ ನೀಡುವುದನ್ನು ಕಂಡು ಈ ರೀತಿಯ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು . ಅಲ್ಲದೇ ಚುನಾವಣಾ ಬಾಂಡ್ ಮೂಲಕ ಇದೀಗ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ ಅವರಿಗೆ ಗೋ ಮಾಂಸರಪ್ತುದಾರರು ಮತ್ತು ಬ್ಲೇಕ್ ಲೀಸ್ಟ್ ನಲ್ಲಿರುವ ಕಂಪನೊಗಳು ನೀಡಿದ ಹಣದ ಲೆಕ್ಕಗಳು ಇವುಗಳಲ್ಲಿ ಕಾಣುತ್ತಿದೆ ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.

ರಾಜ್ಯದಲ್ಲಿ 20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು.

ಈ ಭಾರಿ ಕರ್ನಾಟಕ ರಾಜ್ಯದಲ್ಲಿ 20 ಸೀಟುಗಳನ್ನು ಗೆಲ್ಲಲಿದ್ದೆವೆ ಅಲ್ಲದೇ ದಕ್ಷಿಣ ಕನ್ನಡದಲ್ಲಿ ಓರ್ವ ಸಮರ್ಥ ಮತ್ತು ಸಾಮಾನ್ಯ ಓರ್ವ ವ್ಯಕ್ತಿಯನ್ನು ಚುನಾವಣಾ ಅಖಾಡಕ್ಕೆ ಇಳಿಸಲಾಗುವುದು ಎಂದು ಹೇಳಿದರು . ಕಾಂಗ್ರೆಸ್ ಸುಳ್ಯದಲ್ಲಿ ಒಗ್ಗಟ್ಟಿನ ಮೂಲಕ ಕೆಲಸ ವಿರ್ವಹಿಸುತ್ತಿದೆ ಎಂದರು . ಕೃಷ್ಣಪ್ಪರ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಅವರ ಬಗ್ಗೆ ರಾಜ್ಯ ನಾಯಕರು ಮತ್ತು ಕೇಂದ್ರ ನಾಯಕರು ನೋಡಿಕೊಳ್ಳುತ್ತಾರೆ ನಾವು ಗ್ಯಾರಂಟಿ ಸಮಾಷೇದ ವೇದಿಕೆಯಲ್ಲಿ ಆದ ಘಟನೆ ಬಗ್ಗೆ ಹೇಳಿದರು.  ಪತ್ರಿಕಾಗೋಷ್ಠಿಯಲ್ಲಿ ನಗರ ಪಂಚಾಯತ್ ನಾಮ ನಿರ್ದೇಶಿತ ಸದಸ್ಯರಾದ ಸಿದ್ದಿಕ್ ಕೊಕ್ಕೊ , ಗ್ಯಾರಂಟಿ ಅನುಷ್ಠಾನ ಜಿಲ್ಲಾ ಸಮಿತಿ ಸದಸ್ಯರಾದ ರಂಜಿತ್ ರೈ ಮೇನಾಲ , ಅಲ್ಪಸಂಖ್ಯಾತ ಸಮಿತಿಯ ಪ್ರಮುಖರಾದ ಹನೀಫ್ ಬೀಜದಕಟ್ಟೆ ಉಪಸ್ಥಿತರಿದ್ದರು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading